Advertisement
ಗಂಗಾವತಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆಯಲ್ಲಿ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿವೆ. ಇಲ್ಲಿ ತುಷ್ಟೀಕರಣ ಆರಂಭವಾಗಿದೆ. ಇದರ ಪರಮಾವಧಿಯನ್ನು ಕಾಂಗ್ರೆಸ್ ಸರ್ಕಾರದಲ್ಲಿ ನೋಡುತ್ತಿದ್ದೇವೆ. ಇದನ್ನು ತೀವ್ರವಾಗಿ ಖಂಡಿಸುವೆ ಎಂದರು.
Related Articles
Advertisement
ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣದಿಂದಾಗಿ ವಾದ-ವಿವಾದ ನಡೆಯುತ್ತಿವೆ. ಸದ್ವಿಚಾರದಿಂದ ನಾವೆಲ್ಲರಿಗೂ ಆಹ್ವಾನ ಮಾಡುತ್ತಿದ್ದೇವೆ. ಸದ್ಭಾವದಿಂದ, ಸದ್ಭಕ್ತಿಯಿಂದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅವರು ಬರದೇ ಇದ್ದರೂ ಪರವಾಗಿಲ್ಲ, ಆದರೆ ಬರುವುದಿಲ್ಲವೆಂದು ಹೇಳಿಕೆ ಕೊಡುವ ಅಗತ್ಯವಿರಲಿಲ್ಲ. ಕಾಂಗ್ರೆಸ್ ಇದನ್ನೊಂದು ಅನಗತ್ಯ ವಿವಾದ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಮೊದಲು ಅಯೋಧ್ಯಾ ರಾಮ ಮಂದಿರಕ್ಕೆ ಬರುವುದಿಲ್ಲ ಎಂದಿದ್ದರು. ಇದಕ್ಕೆ ಕೆಲವು ಕಾಂಗ್ರೆಸ್ಸಿಗರು ವಿರೋಧ ಮಾಡಿದ್ದಕ್ಕೆ ಮತ ಬರುವುದಿಲ್ಲ ಎಂದು ಅಯೋಧ್ಯೆಗೆ ಬರುತ್ತೇವೆ ಎಂದಿದ್ದಾರೆ. ಮುಸ್ಲಿಂರ ಓಲೈಕೆಗಾಗಿ ಹೇಳಿಕೆ ನೀಡಿದ್ದವರಿಗೆ ಈಗ ಮನವರಿಕೆಯಾಗಿದೆ ಎಂದರು.ಕಾಂಗ್ರೆಸ್ ಪಕ್ಷ ಪೂರ್ತಿ ಗೊಂದಲದಲ್ಲಿದೆ. ರಾಹುಲ್ ಗಾಂಧಿ ತರ ಕಾಂಗ್ರೆಸ್ ಪಾರ್ಟಿಯೂ ಗೊಂದಲದಲ್ಲಿ ಇದೆ. ಸದ್ಯ ಕಾಂಗ್ರೆಸ್ ಸ್ಥಿತಿ ಸರಿಯಿಲ್ಲ. ರಾಹುಲ್ ಗಾಂಧಿ ನಮ್ಮ ನಾಯಕನಲ್ಲ ಎಂದು ಖರ್ಗೆ ಹೇಳಲಿ. ಆದರೆ ಅವರು ಅದನ್ನು ಒಪ್ಪುವುದಿಲ್ಲ ಎಂದರು. ಅನಂತ್ ಕುಮಾರ ಹೆಗಡೆ ಏಕವಚನದ ಹೇಳಿಕೆ ವಿಚಾರ, ಏಕವಚನದ ಸಂಸ್ಕೃತಿ ಪ್ರಾರಂಭ ಮಾಡಿದ್ದೇ ಸಿದ್ದರಾಮಯ್ಯ. ಆದರೂ ಅನಂತಕುಮಾರ್ ಅವರಿಗೆ ಏಕ ವಚನದಲ್ಲಿ ಟೀಕೆ ಮಾಡುವುದು ಬೇಡ ಎಂದು ಸಲಹೆ ನೀಡುವೆ ಎಂದರಲ್ಲದೇ ಅವರ ಮೇಲೆ ಕೇಸ್ ಮಾಡುವುದು ಸರಿಯಲ್ಲ ಎಂದರು.