Advertisement

72 ಕೆ.ಜಿ. ಪ್ಲಾಸ್ಟಿಕ್‌ ವಶ

10:10 AM Aug 23, 2018 | Team Udayavani |

ಮೂಡಬಿದಿರೆ: ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಪುರಸಭಾ ಅಧಿಕಾರಿಗಳು ಎರಡು ವಾರಗಳಿಂದ ವ್ಯಾಪಾರಿಗಳು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದು, ಮಂಗಳವಾರ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳು, ಫ್ಲೆಕ್ಸ್‌ ಸಾಮಗ್ರಿ ಮಾರಾಟ ಕೇಂದ್ರಗಳಿಗೆ ದಾಳಿ ನಡೆಸಿ ಸುಮಾರು 72 ಕೆ.ಜಿ. ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಂಡರು.

Advertisement

ಸುಮಾರು 10,000 ರೂ. ರಷ್ಟು ದಂಡನಾ ಶುಲ್ಕ ವಸೂಲು ಮಾಡಿದರು. ಪುರಸಭಾ ಪರಿಸರ ಅಭಿಯಂತರ ಶಿಲ್ಪಾ ಎಸ್‌. ನೇತೃತ್ವದಲ್ಲಿ ಓರ್ವ ಪುರುಷ ಹಾಗೂ ಓರ್ವ ಮಹಿಳಾ ಪೊಲೀಸರ ರಕ್ಷಣೆಯೊಂದಿಗೆ ನಡೆಸಿದ ಈ ಕಾರ್ಯಾಚರಣೆಯಲ್ಲಿ ಪುರಸಭಾ ಕಾರ್ಯಾಲಯದ ಮ್ಯಾನೇಜರ್‌ ಸೂರ್ಯಕಾಂತ ಖಾರ್ವಿ, ದ್ವಿ.ದ.ಸ. ಮಂಜುನಾಥ, ಆನಂದ ಬಾಬು, ಸುಧೀಶ್‌ ಹೆಗ್ಡೆ, ರವಿರಾಜ್‌, ದಾಮೋದರ, ಮನೋಜ್‌, ನೇಮಣ್ಣ, ಜನಾರ್ದನ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next