Advertisement
ಈ ನಡುವೆ, ಗಾಜಾ ಪಟ್ಟಿಯ ಸರಕಾರ ನೀಡಿದ ಮಾಹಿತಿಯ ಪ್ರಕಾರ ಅ.7ರಿಂದ ಈಚೆಗೆ ನಡೆಯುತ್ತಿರುವ ಕಾರ್ಯಾಚರಣೆ ಯಲ್ಲಿ ಸಾವಿಗೀಡಾದವರ ಸಂಖ್ಯೆ 15, 200. ಈ ಪೈಕಿ ಶೇ.70 ಮಂದಿ ಮಹಿಳೆಯರು ಮತ್ತು ಮಕ್ಕಳೇ ಆಗಿದ್ದಾರೆ. ಜತೆಗೆ 40 ಸಾವಿರಕ್ಕೂ ಅಧಿಕ ಮಂದಿ ಗಾಯ ಗೊಂಡಿದ್ದಾರೆ.
ಜಗತ್ತಿನಾದ್ಯಂತ ಇರುವ ಇಸ್ರೇಲ್‌ನ ವೈರಿಗಳು ವಿಶೇಷವಾಗಿ ಹಮಾಸ್ ನಾಯಕರನ್ನು ಕೊಂದೇ ಬಿಡಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಗಾಜಾ ಪಟ್ಟಿಯ ಯುದ್ಧದ ಬಳಿಕ ನಿಗಾ, ಶೋಧ ಮತ್ತು ಹತ್ಯೆ ಎಂಬ ಯೋಚನೆಯನ್ನು ಕರಾರುವಾಕ್ಕಾಗಿ ಅನುಷ್ಠಾನಗೊಳಿಸುವಂತೆ ಗುಪ್ತಚರ ಸಂಸ್ಥೆ ಮೊಸಾದ್‌ಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೂಚಿಸಿದ್ದಾರೆ. ಟರ್ಕಿ, ಕತಾರ್ ಮತ್ತು ಲೆಬನಾನ್‌ಗಳಲ್ಲಿ ಇರುವ ಹಮಾಸ್‌ನ ವರಿಷ್ಠ ನಾಯಕರನ್ನು ಮುಗಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ವಾಲ್‌ಸ್ಟ್ರೀಟ್ ಜರ್ನಲ್’ ಪತ್ರಿಕೆ ವರದಿ ಮಾಡಿದೆ.