ಉಳ್ಳಾಲ: ಶಾಲಾ ವಿದ್ಯಾರ್ಥಿಗಳಿಬ್ಬರ ನಡುವಿನ ವಿವಾದಕ್ಕೆ ಸಂಬಂಧಿಸಿ ಓರ್ವನ ಸಂಬಂಧಿಕರು ಇನ್ನೋರ್ವ ಮಸೀದಿಯಲ್ಲಿ ನಮಾಝ್ ಮಾಡುತ್ತಿದ್ದ ವೇಳೆ ಹಲ್ಲೆ ನಡೆಸಿದ ಘಟನೆ ಮಂಜನಾಡಿ ಗ್ರಾಮದ ಮರಾಠಿಮೂಲೆ ಮಸೀದಿಯಲ್ಲಿ ನಡೆದಿದ್ದು, ಹಲ್ಲೆಕೋರರು ತಾವು ಬಂದಿದ್ದ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ನಾಟೆಕಲ್ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಕಿನ್ಯಾ ನಿವಾಸಿ ಸಕಲೈನ್ (16) ತಂಡ ದಿಂದ ದಾಳಿಗೊಳಗಾಗಿದ್ದು, ಆತನ ಸಹಪಾಠಿ ಅರಾಫನ ಸಂಬಂಧಿ ಕರು ಆರೋಪಿಗಳು. ಆರೋಪಿ ಗಳೆಲ್ಲರೂ ಮಂಜೇಶ್ವರ ಮೂಲದವರು.
ಘಟನೆ ವಿವರ
ಶುಕ್ರವಾರ ಸಂಜೆ ಉಪವಾಸ ಬಿಡುವ ಸಮಯ ಸಕಲೈನ್ ಮತ್ತು ಆತನ ಸಹಪಾಠಿ ಅರಾಫ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿತ್ತು. ಬಳಿಕ ಶಾಲಾ ಅಧ್ಯಾಪಕರು ಅವರನ್ನು ಸಮಾಧಾನಿಸಿ ಇಬ್ಬರನ್ನು ನಮಾಜಿಗೆಂದು ಮರಾಟಿಮೂಲೆ ಮಸೀದಿಗೆ ಕಳುಹಿಸಿದ್ದರು. ಆದರೆ ಅರಾಫ ತನ್ನ ದೊಡ್ಡಪ್ಪನ ಮಕ್ಕಳಿಗೆ ದೂರವಾಣಿ ಮೂಲಕ ಕರೆ ಮಾಡಿ ವಿಷಯ ತಿಳಿಸಿದ್ದಾನೆ.
ಅರಾಫ ನೀಡಿದ ಮಾಹಿತಿಯಂತೆ ಆರೋಪಿಗಳು ಮರಾಠಿಮೂಲೆ ಮಸೀದಿಯ ಹೊರ ಆವರಣದಲ್ಲಿ ನಮಾಜಿನಲ್ಲಿ ನಿರತನಾಗಿದ್ದ ಸಕಲೈನ್‌ನನ್ನು ಹೊರಗೆಳೆದು ಹಾಕಿ ಸ್ಟಿಕ್ ಮೂಲಕ ಮರಣಾಂತಿಕ ದಾಳಿ ನಡೆಸಿದ್ದಾರೆ. ಈತನ ಕೂಗು ಕೇಳಿ ಮಸೀದಿಯಲ್ಲಿದ್ದವರು ಓಡಿ ಬರುವಷ್ಟರಲ್ಲಿ ಮೂವರು ದುಷ್ಕರ್ಮಿ ಗಳು ಪರಾರಿಯಾಗಿದ್ದಾರೆ. ಅವರು ಬಂದಿದ್ದ ಕೇರಳ ನೋಂದಾಯಿತ ಕ್ವಾಲಿಸ್ ಕಾರನ್ನು ಬಿಟ್ಟು ಹೋಗಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಠಾಣೆಯ ಎದುರು ಜಮಾಯಿಸಿದ ಜನ ಆರೋಪಿಗಳನ್ನು ತತ್‌ಕ್ಷಣವೇ ಬಂಧಿಸುವಂತೆ ಆಗ್ರ ಹಿಸಿದರು. ಗಾಯಾಳು ನಾಟೆಕಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.