Advertisement

ಇಸ್ಪೀಟ್‌ ಅಡ್ಡೆಗಳ ಮೇಲೆ ದಾಳಿ: 48 ಮಂದಿ ಬಂಧನ

12:02 PM Dec 03, 2018 | Team Udayavani |

ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿ ಇಸ್ಪೀಟ್‌ ಆಟ ನಡೆಸುತ್ತಿದ್ದ ನಗರದ ಎರಡು ಕ್ಲಬ್‌ಗಳ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 48 ಮಂದಿಯನ್ನು ಬಂಧಿಸಿ, ಆರು ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ.

Advertisement

ವಸಂತನಗರದ ಫೈವ್‌ ಸ್ಟಾರ್‌ ರಿಕ್ರಿಯೇಷನ್‌ ಅಸೋಸಿಯೇಷನ್‌ ಕ್ಲಬ್‌ನಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿರುವ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ಜೂಜಾಟದಲ್ಲಿ ತೊಡಗಿದ್ದ ತಾರಕ್‌, ಪಿಡಿಆರ್‌ ಕೃಷ್ಣ, ಸಂದೀಪ್‌ ಕುಮಾರ್‌ ಸೇರಿದಂತೆ 19 ಮಂದಿಯನ್ನು ಬಂಧಿಸಿ, 2.25 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ.

ಈ ಕುರಿತು ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಚಮಾರನಹಳ್ಳಿಯ ಮಂಜುನಾಥ ಸ್ವಾಮಿ ಪ್ರಸನ್ನ ರಿಕ್ರಿಯೇಷನ್‌ ಕ್ಲಬ್‌ನಲ್ಲಿ ಇಸ್ಪೀಟ್‌ ಆಡುತ್ತಿರುವ ಮಾಹಿತಿ ಆಧರಿಸಿ ದಾಳಿ ನಡೆಸಿದ್ದು, ಮಂಜುನಾಥ್‌, ವಿಶ್ವನಾಥ್‌, ನಾಗೇಶ್‌, ಕಿರಣ್‌, ಜಯಕುಮಾರ್‌, ಹರೀಶ್‌ ಕುಮಾರ್‌,

ಸಂತೋಷ್‌ಕುಮಾರ್‌ ಸೇರಿ 29 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಿಂದ 3.92 ಲಕ್ಷ ನಗದು, 1 ಲಕ್ಷ ರೂ. ಮೌಲ್ಯದ 274 ಟೋಕನ್‌ ವಶಕ್ಕೆ ಪಡೆದಿದ್ದು, ವರ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next