Advertisement

ಶಿವಮೊಗ್ಗ: ಯುವಕರಿಬ್ಬರಿಗೆ ಚಾಕು ಇರಿತ, ಓರ್ವ ಸಾವು- ಇನ್ನೊಬ್ಬನ ಸ್ಥಿತಿ ಗಂಭೀರ

08:38 AM Jan 28, 2021 | Team Udayavani |

ಶಿವಮೊಗ್ಗ: ಇಲ್ಲಿನ ಗಾರ್ಡನ್ ಏರಿಯಾದಲ್ಲಿ ಯುವಕರಿಬ್ಬರಿಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದರೆ, ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

Advertisement

ಕೆ.ಆರ್. ಪುರಂ ನಿವಾಸಿ ಜೀವನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಿಗೇಹಟ್ಟಿಯ ಕೇಶವ್ ಗಂಭೀರ ಗಾಯಗೊಂಡಿದ್ದಾನೆ.

ಇದನ್ನೂ ಓದಿ:ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ನಿಧನ

ಶಿವಮೊಗ್ಗ ನಗರದ ಗಾರ್ಡನ್ ಏರಿಯಾದ ಸುಂದರಾಶ್ರಯ ಲಾಡ್ಜ್ ಬಳಿ ದುಷ್ಕರ್ಮಿಗಳು ಈ ಯವಕರ ಮೇಲೆ ದಾಳಿ ನಡೆಸಿ ಚಾಕುವಿನಿಂದ ಇರಿದಿದ್ದಾರೆ. ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು, ಘಟನೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ.

ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next