Advertisement

ತಂಬಾಕು ಮಾರಾಟ ಅಂಗಡಿ ಮೇಲೆ ದಾಳಿ: ದಂಡ

10:03 PM May 10, 2019 | Lakshmi GovindaRaj |

ದೇವನಹಳ್ಳಿ: ನಗರದ ಹೊಸ ಬಸ್‌ ನಿಲ್ದಾಣ ಹಾಗೂ ವಿಜಯಪುರ ಸರ್ಕಲ್‌ ಮತ್ತಿತರ ಕಡೆ ಜಂಟಿ ಕಾರ್ಯಾಚರಣೆ ನಡೆಸಿದ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಂಬಾಕು ಮಾರಾಟ ನಿಯಂತ್ರಣಾಧಿಕಾರಿಗಳು, ತಂಬಾಕು ವಶಪಡಿಸಿಕೊಂಡು ಅಂಗಡಿ ಮಾಲಿಕರಿಗೆ ದಂಡ ವಿಧಿಸಿದರು.

Advertisement

ಹೋಟೆಲ್‌, ಬಸ್‌ ನಿಲ್ದಾಣಗಳ ಬಳಿ ತಂಬಾಕು ಮಾರಾಟ ಮಾಡುವ ಅಂಗಡಿ, ಮುಂಗಟ್ಟುಗಳು, ಶಾಲಾ, ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶ, ಬಾರ್‌ ಅಂಡ್‌ ರೆಸ್ಟೋರಂಟ್‌ಗಳು ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ ಅಧಿಕಾರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ, ಶಾಲಾ, ಕಾಲೇಜುಗಳ ಬಳಿ ತಂಬಾಕು ಉತ್ಪನ್ನಗಳ ಮಾರಾಟ, ಅಕ್ರಮ ತಂಬಾಕು ಉತ್ಪನ್ನಗಳ ಮಾರಾಟ, ತಂಬಾಕು ಉತ್ಪನ್ನಗಳ ಅನಧಿಕೃತ ಜಾಹೀರಾತುಗಳ ಪ್ರದರ್ಶನದ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿದ್ದವರ ವಿರುದ್ಧ ಕ್ರಮ ಜರುಗಿಸಿದರು.

26 ಪ್ರಕರಣ ದಾಖಲು: ದಾಳಿಯ ನೇತೃತ್ವ ವಹಿಸಿ ಮಾತನಾಡಿದ ಜಿಲ್ಲಾ ಸಲಹೆಗಾರ್ತಿ ಡಾ.ಪಿ.ಎಸ್‌.ವಿದ್ಯಾರಾಣಿ, ಹೊಸ ಬಸ್‌ ನಿಲ್ದಾಣ ಹಾಗೂ ಇತರ ಕಡೆ 26 ಪ್ರಕರಣಗಳನ್ನು ದಾಖಲಾಗಿದ್ದು, 5,300ರೂ. ದಂಡ ವಿಧಿಸಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ. ಶೈಕ್ಷಣಿಕ ಸಂಸ್ಥೆಗಳ 100ಮೀಟರ್‌ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಅರಿವು ಮೂಡಿಸಲಾಗಿದೆ ಎಂದರು.

ರಾಷ್ಟ್ರೀಯ ಆರೋಗ್ಯ ಅಭಿಯಾನಗಳ ನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ ಒಂದು ಕೋಟಾ³ ಕಾಯ್ದೆಯ ಉನ್ನತ ಅನುಷ್ಠಾನದ ತಾಲೂಕು ಆಗಿ ಮೇ 31ರ ಒಳಗಾಗಿ ಘೋಷಿಸಲು ಆದೇಶಿಸಿದ್ದಾರೆ. ಅದಕ್ಕಾಗಿ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದರು.

ನಾಮಫ‌ಲಕ ಕಡ್ಡಾಯ: ತಂಬಾಕು ತ್ಯಜಿಸುವುದರಿಂದ ಸಾವನ್ನು ಸುಲಭವಾಗಿ ತಡೆಗಟ್ಟಬಹುದು. ಇದರಿಂದ ದೇಶದಲ್ಲಿ ಪ್ರತಿದಿನ 2,500ಮಂದಿ ಸಾವಿಗೀಡಾಗುತ್ತಿದ್ದಾರೆ. ಯುವ ಜನತೆ ತಂಬಾಕುಗಳಿಗೆ ದಾಸರಾಗುತ್ತಿದ್ದಾರೆ. ಇದು ದೇಶದ ಪ್ರಗತಿಗೆ ಮಾರಕವಾಗಿದೆ. ತಂಬಾಕು ಉತ್ಪನ್ನಗಳಲ್ಲಿರುವ ನಿಕೊಟಿನ್‌ ರಾಸಾಯನಿಕ ಅದಕ್ಕೆ ದಾಸರಾಗುವಂತೆ ಮಾಡುತ್ತದೆ.

Advertisement

ಹಾಗಾಗಿ, ಮಕ್ಕಳು ಇರುವ ಕಡೆಗಳಲ್ಲಿ ಅದರ ಬಳಕೆ ಬೇಡ. ಸಿಒಟಿಪಿಎ 203ರ ಕಾಯ್ದೆ ಸೆಕ್ಷನ್‌ 4ರ ಪ್ರಕಾರ ತಂಬಾಕು ಉತ್ಪನ್ನಗಳನ್ನು 100ಮೀಟರ್‌ ಅಂತರದಲ್ಲಿ ಮಾರಾಟ ಮಾಡುವಂತಿಲ್ಲ. ಅಂಗಡಿ ಮುಂದೆ ನಾಮಫ‌ಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಮಂಜುನಾಥ್‌, ಲೋಕೇಶ್‌, ಮುಖ್ಯ ಪೇದೆ ತಿಮ್ಮಯ್ಯಗೌಡ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next