Advertisement

ರಬಕವಿ-ಬನಹಟ್ಟಿ: ಶಿಕ್ಷಕರ ಮೇಲೆ ಹಲ್ಲೆ ಪ್ರಕರಣ; ಇಬ್ಬರ ಬಂಧನ

03:20 PM Feb 09, 2022 | Team Udayavani |

ರಬಕವಿ-ಬನಹಟ್ಟಿ: ಶಿಕ್ಷಕರ ಮೇಲೆ ಆದ ಹಲ್ಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಒಳಪಡಿಸಲಾಗಿದೆ. ಉಳಿದ ಮೂರು ಜನರನ್ನು ಗುರುತಿಸಲಾಗಿದ್ದು, ಅವರನ್ನು ಕೂಡಾ ಅಗತ್ಯ ಕಾನೂನಿನ ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಹೇಳಿದರು.

Advertisement

ಅವರು ಬುಧವಾರ ಮಧ್ಯಾಹ್ನ ಬನಹಟ್ಟಿಯ ಪೊಲೀಸ್ ಠಾಣೆಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬನಹಟ್ಟಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲ್ಲೂ ತೂರಾಟಕ್ಕೆ ಸಂಬಂಧಿಸಿದ ಹಾಗೇ ಈಗಾಗಲೇ ನಾವು 13 ಜನರನ್ನು ಬಂಧಿಸಿದ್ದು, ಇನ್ನೂ ಉಳಿದವರನ್ನು ಗುರುತಿಸಿ ಕಾನೂನಿನ ಕ್ರಮ ತೆಗದುಕೊಳ್ಳೂವ ಪ್ರಕ್ರಿಯೆ ಮುಂದುವರೆದಿದೆ ಎಂದರು.

ಪ್ರತಿಭಟನೆಗಳು ಹೆಚ್ಚಾಗುತ್ತಿರುವುದರಿಂದ ಇಂದು ಬುಧವಾರ ಮಧ್ಯಾಹ್ನದಿಂದ ೧೪೪ ಕಲಂ ಅಡಿಯಲ್ಲಿ ನಿಶೇದಾಜ್ಞೆ ಜಾರಿಗೊಳಿಸಲಾಗಿದೆ. ಎಲ್ಲರೂ ಇದಕ್ಕೆ ಸಹಕರಿಸಬೇಕು. ಸಹಕರಿಸದಿದ್ದರೆ ಅಂತವರ ವಿರುದ್ಧ ಅಗತ್ಯ ಕ್ರಮ ಜರುಗಿಸಲಾಗುವುದು. ಯಾರಾದರೂ ಇದನ್ನೂ ಉಲ್ಲಂಗಣೆ ಮಾಡಿ ಹೊರಗಡೆ ಬಂದರೆ ಅವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸುವ ಕೆಲಸ ಮಾಡಲಾಗುವುದು ಎಂದು ಎಸ್.ಪಿ. ಲೋಕೇಶ ಜಗಲಾಸರ್ ಹೇಳಿದರು.

ಬನಹಟ್ಟಿ ಶಾಂತಿ ಪ್ರೀಯ ನಗರ, ಹೊರಗಿನವರು ಬಂದು ಶಾಂತಿಯನ್ನು ಕದಡುವ ಕೆಲಸವಾಗಬಾರದು. ವಿದ್ಯಾರ್ಥಿಗಳು ಕಾನೂನು ಕೈತೆಗೆದುಕೊಳ್ಳುವ ಕೆಲಸ ಮಾಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next