Advertisement

ಅಂಗಡಿಗಳ ಮೇಲೆ ದಾಳಿ: ದಂಡ

03:10 PM Aug 12, 2020 | Suhan S |

ಹರಿಹರ: ತಂಬಾಕು ಉತ್ಪನ್ನಗಳ ಮಾರಾಟ ತಡೆಯಲು ಅಧಿಕಾರಿಗಳ ತಂಡ ಮಂಗಳವಾರ ನಗರದ ಮುಖ್ಯ ರಸ್ತೆ, ಹಳೆ ಪಿ.ಬಿ.ರಸ್ತೆ ಮುಂತಾದೆಡೆ ಸಗಟು ಹಾಗೂ ರೀಟೇಲ್‌ ಅಂಗಡಿಗಳ ಮೇಲೆ ದಾಳಿ ನಡೆಸಿತು. ಬೀಡಿ, ಸಿಗರೇಟು, ಗುಟ್ಕಾ ಮುಂತಾದ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟಮಾಡುತ್ತಿದ್ದವರಿಂದ ದಂಡ ವಸೂಲಿ ಮಾಡಲಾಯಿತು.

Advertisement

ನೇತೃತ್ವ ವಹಿಸಿದ್ದ ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಗುಟ್ಕಾ ಹಾಕಿಕೊಂಡು ಎಲ್ಲೆಂದರಲ್ಲಿ ಉಗುಳುವುದರಿಂದ ಕೋವಿಡ್‌-19 ಮತ್ತಷ್ಟು ವ್ಯಾಪಕವಾಗಿ ಹರಡುತ್ತದೆ. ಕೊಟ್ಪಾ (ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ) ಅಡಿ ತಪ್ಪಿತಸ್ಥರ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಮೋಹನ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ, ಸೇವನೆ ನಿಷೇಧಿಸಲಾಗಿದೆ. ಅಡಿಕೆ ಹಾಗೂ ತಂಬಾಕು ಪ್ರತ್ಯೇಕಿಸಿ ಮಾರಾಟ ಮಾಡುವುದನ್ನೂ ಸಹ ಹೈಕೋರ್ಟ್‌ ನಿರ್ಬಂಧಿಸಿದೆ. ಅಧಿಕಾರಿಗಳ ಕಣ್ತಪ್ಪಿಸಿ ಗುಟ್ಕಾ ಮಾರಾಟ ಮಾಡಿದ್ದೇ ಆದರೆ ಅಂಥವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿ ಕಾರಿ ಎಸ್‌.ಎಚ್‌ .ಪಾಟೀಲ್‌, ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ, ನಗರಸಭೆ ಆರೋಗ್ಯ ನಿರೀಕ್ಷಕ ಕೋಡಿ ಭೀಮರಾಯ, ಸಾಮಾಜಿಕ ಕಾರ್ಯಕರ್ತ ದೇವರಾಜ್‌, ಸಿಬ್ಬಂದಿ ರುದ್ರೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next