Advertisement

ಅಂಗಡಿಗಳ ಮೇಲೆ ದಾಳಿ: ಪ್ರಕರಣ ದಾಖಲು 

04:21 PM Jul 17, 2021 | Team Udayavani |

ದಾವಣಗೆರೆ: ಜಿಲ್ಲೆಯ ತಂಬಾಕು ನಿಯಂತ್ರಣ ತನಿಖಾ ದಳವು ಶುಕ್ರವಾರ ಜಿಲ್ಲೆಯ ಜಗಳೂರು ತಾಲೂಕಿನ ಬಿದರಕೆರೆಯ ಬಳಿ ಇರುವ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ 16 ಪ್ರಕರಣಗಳನ್ನುದಾಖಲಿಸಿ, 2,800 ರೂ. ದಂಡ ಸಂಗ್ರಹಿಸಿದೆ.

Advertisement

ತಂಡವು ಜಗಳೂರು ತಾಲೂಕಿನ ಬಿದರಕೆರೆಯಹೋಟೆಲ್‌, ಬಾರ್‌, ಪಾನ್‌ಶಾಪ್‌, ಬಸ್‌ ನಿಲ್ದಾಣ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನುಸೇವಿಸುವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶಾಲ್‌ ಜೆ., ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಂ.ವಿ. ಹೊರಕೇರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪರಶುರಾಮ್‌, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್‌ ಕಲಹಾಳ್‌, ಸಮಾಜ ಕಾರ್ಯಕರ್ತ ಕೆ.ಪಿ.ದೇವರಾಜ್‌, ಸಹಾಯಕ ಕೃಷ್ಣ ಇತರರು ದಾಳಿಯಲ್ಲಿದ್ದರು.

ಚನ್ನಗಿರಿ-ಹೊನ್ನಾಳಿಯಲ್ಲೂ ದಾಳಿ: ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕಿನ ಬಳಿ ಇರುವ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ತಂಡ ಕೋಟ್ಪಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ23 ಪ್ರಕರಣಗಳನ್ನು ದಾಖಲಿಸಿ, 4,500ರೂ. ದಂಡ ಸಂಗ್ರಹಿಸಿದೆ.

ತಂಡವು ಚನ್ನಗಿರಿ ಮತ್ತು ಹೊನ್ನಾಳಿ ಪುರಸಭೆ ಪಟ್ಟಣದಲ್ಲಿ ಹೊಟೇಲ್‌, ಬಾರ್‌, ಪಾನ್‌ಶಾಪ್‌, ಬಸ್‌ನಿಲ್ದಾಣ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನುಸೇವಿಸುವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಿದರು. ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲೀಕರುಗಳುಧೂಮಪಾನ ನಿಷೇಧದ ಬಗ್ಗೆ ಪ್ರದರ್ಶಿಸಬೇಕಾದ ಫಲಕಗಳನ್ನು ಕಟ್ಟುನಿಟ್ಟಾಗಿ ಅಳವಡಿಸಲು ತಾಕೀತು ಮಾಡಿದರು.

Advertisement

ಚನ್ನಗಿರಿ ಪುರಸಭೆಯ ಮುಖ್ಯಾಧಿಕಾರಿ ಐ.ಬಸವರಾಜ್‌, ಜಿಲ್ಲಾ ಆರೋಗ್ಯಮೇಲ್ವಿಚಾರಣಾಧಿಕಾರಿ ಎಂ.ವಿ. ಹೊರಕೇರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಲೋಕೇಶ್‌.ಆರ್‌, ಮತ್ತು ಶಿವರುದ್ರಪ್ಪ, ಹಾಗೂ ಟಿ.ಲೋಕೇಶ್‌, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾಸಲಹೆಗಾರ ಸತೀಶ್‌ ಕಲಹಾಳ್‌, ಸಮಾಜಕಾರ್ಯಕರ್ತ ಕೆ.ಪಿ.ದೇವರಾಜ್‌, ಪೊಲೀಸ್‌ಠಾಣೆಯ ಪೇದೆ ಎಸ್‌.ಜಿ.ವೀರಪ್ಪ ಸೇರಿದಂತೆ ಇತರರು ದಾಳಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next