Advertisement

ರೌಡಿಗಳ ಮನೆ ಮೇಲೆ ದಾಳಿ; ಪರೇಡ್‌

10:13 AM Nov 07, 2021 | Team Udayavani |

ಕಲಬುರಗಿ: ಮಹಾ ನಗರದಲ್ಲಿ ಇತ್ತೀಚೆಗೆ ರೌಡಿಗಳ ಉಪಟಳ ಹೆಚ್ಚಳವಾದ ಹಿನ್ನೆಲೆಯಲ್ಲಿ ಶನಿವಾರ ಬೆಳಂಬೆಳಗ್ಗೆ ರೌಡಿ ನಿಗ್ರಹ ದಳದವರು ನಗರದ ವಿವಿಧೆಡೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿ, ಪೊಲೀಸ್‌ ಮೈದಾನಕ್ಕೆ ಕರೆತಂದು ಪರೇಡ್‌ ನಡೆಸಿ, ಹೆಡೆ ಬಿಚ್ಚಿದರೆ ಹುಷಾರ್‌ ಎಂದು ವಾರ್ನಿಂಗ್‌ ನೀಡಿದರು.

Advertisement

ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದರೇ ಪರಿಸ್ಥಿತಿ ನೆಟ್ಟಗಿರಲ್ಲ ಹುಷಾರ್‌, ಯಾವುದೇ ಕಾರಣಕ್ಕೂ ಬಾಲ ಬಿಚ್ಚದಿರಿ. ಸಣ್ಣ ದೂರು ಬಂದರೂ ಮೊಕದ್ದಮೆ ಹೂಡಲಾಗುವುದು. ಸುಧಾರಿಸಿಕೊಳ್ಳದಿದ್ದರೇ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇವತ್ತಿನಿಂದ ಹೊಸ ಅಧ್ಯಾಯ ಶುರುವಾಗಲಿದೆ ಎಂದು ಕಲಬುರಗಿ ಮಹಾನಗರ ಪೊಲೀಸ್‌ ಉಪ ಆಯುಕ್ತ ಎ. ಶ್ರೀನಿವಾಸಲು ರೌಡಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಉಪಟಳದಿಂದ ಸಮಾಜದ ಶಾಂತಿಗೆ ಭಂಗವುಂಟಾಗುತ್ತಿದೆ. ನಿಮ್ಮ ಏರಿಯಾದಲ್ಲಿ ಇನ್ಮುಂದೆ ಸಣ್ಣ ಪುಟ್ಟ ಅಹಿತರ ಘಟನೆಯಲ್ಲಿ ಪಾಲ್ಗೊಂಡರೂ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ. ಈಗಲಾದರೂ ಸುಧಾರಿಸಿಕೊಳ್ಳಿ. ದಿನಾಲು ಪೊಲೀಸ್‌ ಠಾಣೆಗೆ ಬಂದು ಸಹಿ ಹಾಕಿ. ಇದು ಕೊನೆಯ ವಾರ್ನಿಂಗ್‌ ಎಂದು ಡಿಸಿಪಿ ತಾಕೀತು ಮಾಡಿದರು.

ಸುಮಾರು 50 ರೌಡಿಗಳ ಪರೇಡ್‌ ನಡೆಸಲಾಯಿತು. ಡಿಸಿಪಿ ಶ್ರೀಕಾಂತ ಕಟ್ಟಿಮನಿ, ಎಸಿಪಿಗಳಾದ ಅನುಕ್ಷಕುಮಾರ, ಇನಾಂದಾರ, ಇನ್ಸ್‌ಪೆಕ್ಟರುಗಳಾದ ಪಂಡಿತ ಸಗರ, ಸಿದ್ರಾಮೇಶ ಗಡಾದ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next