Advertisement

ರೈಸ್ ‌ಮಿಲ್‌ ಮೇಲೆ ದಾಳಿ: 4 ಲಕ್ಷ ರೂ.ನ ಅಕ್ಕಿ, ನುಚ್ಚು, ರಾಗಿ ಜಪ್ತಿ

07:46 PM Jun 06, 2021 | Team Udayavani |

ಚಿಕ್ಕಬಳ್ಳಾಪುರ: ನಗರದ ಕಂದವಾರಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ಖಾಸಗಿ ರೈಸ್‌ಮಿಲ್‌ವೊಂದರ ಮೇಲೆ ದಾಳಿ ನಡೆಸಿರುವ ಆಹಾರಇಲಾಖೆಯ ಅ ಧಿಕಾರಿಗಳು 4 ಲಕ್ಷ ರೂ. ಮೌಲ್ಯದಅಕ್ಕಿ, ನುಚ್ಚು, ರಾಗಿ ಹಾಗೂ ವಿವಿಧ ಬ್ರಾಂಡ್‌ಗಳಚೀಲ ವಶಪಡಿಸಿಕೊಂಡಿದ್ದಾರೆ.

Advertisement

ವೇಣುಗೋಪಾಲ್‌ ಮಾಲಿಕತ್ವದ ಶ್ರೀಸಪ್ತಗಿರಿಗ್ರಾಮೋದಯ ಅಕ್ಕಿ ಗಿರಣಿಯ ಮೇಲೆ ಆಹಾರನಾಗರಿಕ ಸರಬರಾಜು ಮತ್ತು ಗ್ರಾಹಕರವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿಪಿ.ಸವಿತಾ ಅವರ ಮಾರ್ಗದರ್ಶನದಲ್ಲಿಚಿಕ್ಕಬಳ್ಳಾಪುರ ತಾಲೂಕು ಆಹಾರ ಇಲಾಖೆಶಿರಸ್ತೇದಾರ್‌ ಬಿ.ಜಿ.ಗೌತಮ್‌, ನಿರೀಕ್ಷಕ ರಘುನೇತೃತ್ವದ ತಂಡ ದಾಳಿ ನಡೆಸಿತು.ಈ ವೇಳೆ 7,440 ಕೇಜಿ ಅಕ್ಕಿ, 28,150 ಕೇಜಿನುಚ್ಚು, 322 ಕೇಜಿ ರಾಗಿ ಹಾಗೂ ಪಾಲಿಶ್‌ ಮಾಡಿದಅಕ್ಕಿಯನ್ನು ತುಂಬಿಸಲು ತಂದಿದ್ದ ವಿವಿಧ ಬ್ರಾಂಡ್‌ಗಳ ಚೀಲಗಳನ್ನು ಆಹಾರ ಇಲಾಖೆಯಅ ಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಿವಿಧ ಬ್ರಾಂಡ್‌ ಹೆಸರಲ್ಲಿ ಮಾರಾಟ: ಭತ್ತದಿಂದಅಕ್ಕಿ ಉತ್ಪಾದಿಸಿ ಮಾರಾಟ ಮಾಡುವ ಗಿರಣಿಯಲ್ಲಿಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಸರ್ಕಾರದಿಂದ ಬಡವರಿಗೆ ಬಿಡುಗಡೆ ಮಾಡಿರುವಅಕ್ಕಿಯನ್ನು ವಿವಿಧ ಮೂಲಗಳಿಂದ ಅಕ್ರಮವಾಗಿಖರೀದಿ ಮಾಡಿ, ಗಿರಣಿಯಲ್ಲಿ ಪಾಲಿಶ್‌ ಮಾಡಿವಿವಿಧ ಬ್ರಾಂಡ್‌ನ‌ಲ್ಲಿ ಅಕ್ಕಿ ಚೀಲ ತಯಾರಿಸಿಮಾರಾಟ ಮಾಡಲು ಯತ್ನಿಸಲಾಗುತ್ತಿತ್ತು. ಈಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿ ಮೇಲೆಆಹಾರ ಇಲಾಖೆ ಅ ಧಿಕಾರಿಗಳು ದಾಳಿನಡೆಸಿದರು

.ಪೊಲೀಸರಿಗೆ ದೂರು: ಈ ಸಂಬಂಧ ಆಹಾರಇಲಾಖೆ ಶಿರಸ್ತೇದಾರ್‌ ಅವರು ಸಪ್ತಗಿರಿಗ್ರಾಮೋದಯ ಅಕ್ಕಿ ಗಿರಣಿ ಮಾಲಿಕರಗೋಪಾಲ್‌ ಅವರ ವಿರುದ್ಧ ಅಗತ್ಯ ವಸ್ತುಗಳಕಾಯ್ದೆ 1955 ಸೆಕ್ಷನ್‌ 3 ಮತ್ತು 6(ಎ) ಐಪಿಸಿಸೆಕ್ಷನ್‌ 420 ಅಡಿಯಲ್ಲಿ ಪ್ರಕರಣ ದಾಖಲಿಸಿಮತ್ತು ಕಾಳಸಂತೆಕೋರರ ವಿರುದ್ಧ ಕಾನೂನುಕ್ರಮ ಜರುಗಿಸಬೇಕೆಂದು ನಂದಿಗಿರಿಧಾಮಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ ಪಿಎಸ್‌ಐ ಸುನೀಲ್‌ ದೂರುದಾಖಲಿಸಿ, ಆರೋಪಿ ಬಂಧಿ ಸಿದ್ದಾರೆ. ಜಿಲ್ಲೆಯಲ್ಲಿಬಡವರಿಗೆ ಸಮರ್ಪಕ ಪಡಿತರ ಹಂಚಿಕೆಮಾಡಲು ಆಹಾರ ನಾಗರಿಕ ಸರಬರಾಜು,ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿಪಿ.ಸವಿತಾ ಅವರು ಕ್ರಮ ಕೈಗೊಂಡಿದ್ದಾರೆ.ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸರ್ಕಾರಬಡವರಿಗೆ ನೀಡುವ ಅಕ್ಕಿಯನ್ನು ಪಾಲಿಶ್‌ ಮಾಡಿಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟಮಾಡಲಾಗುತ್ತಿದೆ ಎಂಬ ದೂರು ಈಘಟನೆಯಿಂದ ಕೊನೆಗೂ ನಿಜವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next