Advertisement

ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ದಾಳಿ: ಅಕ್ರಮ ವಸ್ತು ವಶ

12:24 AM Apr 10, 2019 | Lakshmi GovindaRaju |

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಧಿಡೀರ್‌ ದಾಳಿ ನಡೆಸಿದ 300 ಪೊಲೀಸರು, ಕೈದಿಗಳು ಅಕ್ರಮವಾಗಿ ಇಟ್ಟುಕೊಂಡಿದ್ದ ಮೊಬೈಲ್‌, ಸಿಮ್‌ಕಾರ್ಡ್‌, ಕಟ್ಟರ್‌, ಕಟ್ಟಿಂಗ್‌ ಪ್ಲೀಯರ್‌, ಕತ್ತರಿ, ಸೂðಡ್ರೈವರ್‌ ಸೇರಿ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

Advertisement

ಕಾರಾಗೃಹದಲ್ಲಿ ಅಕ್ರಮವಾಗಿ ಮಾದಕವಸ್ತು, ಮೊಬೈಲ್‌, ಸಿಮ್‌ಕಾರ್ಡ್‌ ಬಳಕೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿಸಿಪಿಗಳಾದ ಕೇಂದ್ರ ಅಪರಾಧ ವಿಭಾಗದ ಎಸ್‌.ಗಿರೀಶ್‌, ಉತ್ತರ ವಿಭಾಗ ಶಶಿಕುಮಾರ್‌, ಆಗ್ನೇಯ ವಿಭಾಗದ ಇಶಾ ಪಂಥ್‌, ಕೇಂದ್ರ ವಿಭಾಗದ ದೇವರಾಜ್‌, ವೈಟ್‌ಫೀಲ್ಡ್‌ ವಿಭಾಗದ ಅಬ್ದುಲ್‌ ಅಹ್ಮದ್‌, ದಕ್ಷಿಣ ವಿಭಾಗದ ಕೆ.ಅಣ್ಣಾಮಲೈ ನೇತೃತ್ವದ ಸುಮಾರು 300ಕ್ಕೂ ಹೆಚ್ಚು ಮಂದಿ ಪೊಲೀಸರ ತಂಡ ಮಂಗಳವಾರ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಎಲ್ಲ ಬ್ಯಾರಕ್‌ಗಳನ್ನು ತಪಾಸಣೆ ನಡೆಸಿತು.

ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಕೊಂಡಿದ್ದ ಮೊಬೈಲ್‌ಗ‌ಳು, ಸಿಮ್‌ಕಾರ್ಡ್‌, ಪೆನ್‌ಡ್ರೈವ್‌, ಬ್ಲೂ ಟೂತ್‌ ಸೇರಿ ಹಲವಾರು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next