ಇಸ್ಲಾಮಾಬಾದ್: ತಾನು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಭಾನುವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಆರೋಪಿಸಿದ್ದಾರೆ.
ದಾಳಿಯ ಕುರಿತು ತನ್ನ ಮಾಜಿ ಪತಿಯನ್ನು ಗುರಿಯಾಗಿಸಿಕೊಂಡ ರೆಹಮ್ ಖಾನ್, ಇಮ್ರಾನ್ ಖಾನ್ ಆಳ್ವಿಕೆಯಲ್ಲಿ ಪಾಕಿಸ್ತಾನವು “ಹೇಡಿಗಳು, ಕೊಲೆಗಡುಕರು ಮತ್ತು ದುರಾಸೆಗಳ” ದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನನ್ನ ಸೋದರಳಿಯನ ಮದುವೆಯಿಂದ ಹಿಂತಿರುಗುವಾಗ ನನ್ನ ಕಾರಿಗೆ ಗುಂಡು ಹಾರಿಸಲಾಯಿತು. ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬಂದೂಕು ತೋರಿಸಿ ವಾಹನವನ್ನು ಪಡೆದಿದ್ದರು! ನನ್ನ ಪಿಎಸ್ ಮತ್ತು ಡ್ರೈವರ್ ಕಾರಿನಲ್ಲಿದ್ದರು. ಇದು ಇಮ್ರಾನ್ ಖಾನ್ ಅವರ ಹೊಸ ಪಾಕಿಸ್ತಾನವೇ? ಹೇಡಿಗಳು, ಕೊಲೆಗಡುಕರು ಮತ್ತು ದುರಾಸೆಯ ರಾಜ್ಯಕ್ಕೆ ಸ್ವಾಗತ!” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ವಿಧಾನಸಭೆ ಚುನಾವಣೆ: ಅಯೋಧ್ಯೆಯಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ?
ಗಾಯಗೊಳ್ಳದಿದ್ದರೂ, ಈ ಘಟನೆಯು ತನಗೆ ಕ್ರೋಧವನ್ನು ಉಂಟುಮಾಡಿದೆ ಎಂದು ರೆಹಮ್ ಖಾನ್ ಹೇಳಿದ್ದಾರು. “ಹೇಡಿತನದ ಈ ರಹಸ್ಯ ಪ್ರಯತ್ನ” ಕ್ಕಿಂತ ಮುಖಾಮುಖಿಗೆ ಆದ್ಯತೆ ನೀಡುತ್ತೇನೆ ಎಂದು ಅವರು ಟೀಕಿಸಿದ್ದಾರೆ.
ಬ್ರಿಟಿಷ್-ಪಾಕಿಸ್ತಾನಿ ಮೂಲದ ಪತ್ರಕರ್ತೆ ಮತ್ತು ಮಾಜಿ ಟಿವಿ ನಿರೂಪಕಿ ರೆಹಮ್ ಖಾನ್ 2014 ರಲ್ಲಿ ಇಮ್ರಾನ್ ಖಾನ್ ಅವರನ್ನು ವಿವಾಹವಾದರು. ಅಕ್ಟೋಬರ್ 30, 2015 ರಂದು ಇಮ್ರಾನ್ ಖಾನ್ ರಿಂದ ದೂರವಾಗಿದ್ದರು. 48 ವರ್ಷ ವಯಸ್ಸಿನ ರೆಹಮ್ ತಮ್ಮ ಮಾಜಿ ಪತಿಯನ್ನು ತೀವ್ರವಾಗಿ ಟೀಕಿಸುವುದರಲ್ಲೂ ಹೆಸರುವಾಸಿ.