Advertisement

ನೀಟ್‌ ಕೋಚಿಂಗ್‌ ಸೆಂಟರ್‌ ಮೇಲೆ ದಾಳಿ: 30 ಕೋಟಿ ರೂ. ವಶ

10:35 AM Oct 15, 2019 | Team Udayavani |

ಚೆನ್ನೈ: ತಮಿಳುನಾಡಿನ ನಮಕ್ಕಲ್‌ ಸೇರಿದಂತೆ ಹಲವೆಡೆ ನೀಟ್‌ ಕೋಚಿಂಗ್‌ ಸೆಂಟರ್‌ಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ 30 ಕೋಟಿ ರೂ. ವಶಪಡಿಸಿ ಕೊಂಡಿದೆ. ಕಾಂಗ್ರೆಸ್‌ ನಾಯಕರಾಗಿರುವ ಡಾ| ಜಿ.ಪರಮೇಶ್ವರ್‌, ಆರ್‌.ಎಲ್‌.ಜಾಲಪ್ಪನವರಿಗೆ ಸೇರಿದ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವಂತೆಯೇ ಈ ಬೆಳವಣಿಗೆ ನಡೆದಿದೆ ಎಂದು “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ತೆರಿಗೆ ವಂಚನೆ ಮೂಲಕ ಕೋಚಿಂಗ್‌ ಸೆಂಟರ್‌ಗಳು ಅಪಾರ ಮೊತ್ತ ಸಂಗ್ರಹಿಸಿವೆ. ಸದ್ಯಕ್ಕೆ 30 ಕೋಟಿ ರೂ.ವಶಪಡಿಸಿಕೊಳ್ಳಲಾಗಿದೆ. ಸರಿಯಾಗಿ ಲೆಕ್ಕಾಚಾರ ಹಾಕಿದರೆ ವಂಚನೆ ಮೊತ್ತ 150 ಕೋಟಿ ರೂ. ದಾಟಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ನಮಕ್ಕಲ್‌, ಕರೂರ್‌, ಚೆನ್ನೈ, ಪೆರುಂದುರೈಗಳಲ್ಲಿ Ã ‌ುವ ಕೋಚಿಂಗ್‌ ಸೆಂಟರ್‌ನ 17 ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ. ನಗದು ರೂಪದಲ್ಲಿ ಶುಲ್ಕ ಸ್ವೀಕರಿಸಿ, ಅದರ ಬಗ್ಗೆ ಸರಿಯಾದ ರೀತಿಯಲ್ಲಿ ಲೆಕ್ಕ ಇರಿಸಿಕೊಳ್ಳಲಾಗುತ್ತಿರಲಿಲ್ಲ. ಶೋಧ ಕಾರ್ಯಾಚರಣೆ ವೇಳೆ ಡೈರಿಗಳಲ್ಲಿನ ಉಲ್ಲೇಖಗಳು, ಇಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ದಾಖಲೆ ಸಂರಕ್ಷಿಸಿ ಇರಿಸಿದ್ದು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next