Advertisement
ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿಯು ಗುರುವಾರ ಸದನದ ಒಳಗೆ ಹಾಗೂ ಹೊರಗೆ ಘಟನೆ ಖಂಡಿಸಿ ಪ್ರತಿರೋಧ ತೋರಿತು. ವಿಧಾನಸೌಧದಿಂದ ರಾಜಭವನಕ್ಕೆ ಶಾಸಕರ ನಿಯೋಗದೊಂದಿಗೆ ಪಾದಯಾತ್ರೆಯಲ್ಲೇ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸದಸ್ಯರನ್ನು ಹತ್ಯೆ ಮಾಡುವುದು ಜೆಡಿಎಸ್ ಕಾರ್ಯಕರ್ತರ ಉದ್ದೇಶವಾಗಿತ್ತು ಎಂಬುದಾಗಿ ದೂರು ನೀಡಲಾ ಗಿದೆ. ಆದರೆ ಆಡಳಿತ ಪಕ್ಷದ ಪ್ರಭಾವಕ್ಕೆ ಒಳಗಾಗಿ ರುವ ಪೊಲೀಸರು ಗಂಭೀರ ಪ್ರಕರಣ ದಾಖಲಿಸದೆ ಸಾಮಾನ್ಯ ಪ್ರಕರಣ ದಾಖಲಿಸಿದ್ದಾರೆ. ಇದು ಸರ್ಕಾರವು ತನ್ನ ಸಂವಿಧಾನಾತ್ಮಕ ಜವಾಬ್ದಾರಿಗಳನ್ನು ಕಾನೂನುಬದಟಛಿವಾಗಿ ನಿರ್ವಹಿಸುವಲ್ಲಿ ವಿಫಲವಾಗಿರುವುದನ್ನು ತೋರಿಸುತ್ತದೆ ಎಂದುಬಿಜೆಪಿ ಮನವಿ ಪತ್ರದಲ್ಲಿ ತಿಳಿಸಿದೆ. ಈ ಗೂಂಡಾ ಪ್ರವೃತ್ತಿ ಬಗ್ಗೆ ಪ್ರಸ್ತಾಪಿಸಲು ಪ್ರಯತ್ನಿಸಿದರೂ ಬುಧವಾರ ಸದನದಲ್ಲಿ ಅವಕಾಶ ಸಿಗಲಿಲ್ಲ. ಶಾಸಕರು ಇಲ್ಲವೇ ಅವರ ಕುಟುಂಬದವರಿಗೆ ರಕ್ಷಣೆ ಒದಗಿಸುವಲ್ಲಿ ಗೃಹ ಇಲಾಖೆ ಹಾಗೂ ವಿಧಾನಸಭೆ ವಿಫಲವಾಗಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಯಮಾನುಸಾರ ಪ್ರಕರಣ ದಾಖಲಿಸಿ ಕೊಳ್ಳುವಂತೆ ಸೂಚಿಸಬೇಕು. ಹಾಗೆಯೇ ಪ್ರೀತಂಗೌಡ ಅವರು ನೆಲೆಸಿರುವ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ಸರ್ಕಾರಕ್ಕೆ ಸೂಚಿಸಬೇಕು. ಸರ್ಕಾರ ತಾನು ಇಚ್ಛಿಸಿದಂತೆ ಕಾರ್ಯ ನಿರ್ವಹಿಸದೆ ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿರ್ವಹಿಸುವಂತೆ ಸೂಚನೆ ನೀಡಬೇಕು ಎಂದು ಮನವಿ ಮಾಡಲಾಗಿದೆ. ನಿಯೋಗದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಹಿರಿಯ ಶಾಸಕರಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಕೆ.ಜೆ.ಬೋಪಯ್ಯ, ಆರ್.ಅಶೋಕ್, ಜೆ.ಸಿ.ಮಾಧುಸ್ವಾಮಿ, ಎಂ.ಪಿ.ರೇಣುಕಾಚಾರ್ಯ ಸೇರಿ ಹಲವರಿದ್ದರು.
Related Articles
ಹಾಸನ: ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿ, ಬಿಜೆಪಿ ಕಾರ್ಯಕರ್ತನ ಮೇಲೆ ಕಲ್ಲು ತೂರಾಟ ನಡೆಸಿದ ಮತ್ತು ಕಾರು ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎ.ಎನ್.ಪ್ರಕಾಶ್‌ಗೌಡ ತಿಳಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರಾದ ಹಾಸನ ನಗರಸಭಾ ಮಾಜಿ ಅಧ್ಯಕ್ಷ ಅನಿಲ್‌ಕುಮಾರ್, ನಗರಸಭಾ ಸದಸ್ಯರಾದ ಎಚ್.ಸಿ.ಗಿರೀಶ್, ಪ್ರಶಾಂತ್ ನಾಗರಾಜ್,ಹಾಸನ ಜಿಪಂ ಸದಸ್ಯ ಎಚ್.ಪಿ.ಸ್ವರೂಪ್, ನಗರಸಭೆ ಮಾಜಿ ಸದಸ್ಯರಾದ ಎ.ಕೆ.ಕಮಲ್ ಕುಮಾರ್, ಭಾನುಪ್ರಕಾಶ್, ಚಂದ್ರು ಕಾಟೀಹಳ್ಳಿ, ಜಗದೀಶ್ ಅವರನ್ನು ಬಂಧಿಸಲಾಗಿದೆ. ಶಾಸಕರ ನಿವಾಸ ಮತ್ತು ಬಿಜೆಪಿ ಕಚೇರಿ ಬಳಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದೂ ಹೇಳಿದ್ದಾರೆ.
Advertisement
ಕೇಂದ್ರ ಗೃಹ ಸಚಿವರಿಗೆ ದೂರುರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಶಾಸಕ ಪ್ರೀತಂಗೌಡ ಅವರ ನಿವಾಸದ ಮೇಲೆ ಬುಧವಾರ ದಾಳಿ ನಡೆಸಿ ಹಾಸನದಿಂದ ಖಾಲಿ ಮಾಡಿ ಎಂದು ಬೆದರಿಕೆ ಹಾಕಿದ್ದಾರೆ. ಹಾಗಾಗಿ ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಾಗಿದ್ದು, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೂ ದೂರು ನೀಡಲಾಗುವುದು ಎಂದರು.