Advertisement

ಮಾವಿನ ಹಣ್ಣು ಅಂಗಡಿಗಳ ಮೇಲೆ ದಾಳಿ

10:01 AM May 14, 2019 | Suhan S |

ಹಾಸನ: ನಗರದಲ್ಲಿನ ಕೆಲವು ಮಾವಿನ ಹಣ್ಣು ಅಂಗಡಿಗಳ ಮೇಲೆ ಸೋಮವಾರ ದಾಳಿ ನಡೆಸಿದ ಆಹಾರ ಇಲಾಖೆ ಅಧಿ ಕಾರಿಗಳು ಆರೋಗ್ಯಕ್ಕೆ ಹಾನಿಕರವಾದ ರಾಸಾಯನಿಕ ಬಳಸಿ ಮಾವಿನ ಹಣ್ಣು ಮಾಡಿ ಮಾರಾಟ ಮಾಡುತ್ತಿದ್ದ ವ್ಯಾಪಾರಿ ಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ಆಹಾರ ಇಲಾಖೆ ಜಿಲ್ಲಾ ಪ್ರಭಾರಿ ಅಧಿಕಾರಿ ಡಾ. ರಾಜಗೋಪಾಲ್, ಹಾಸನ ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಎಂ. ವಿಜಯ್‌ ಮತ್ತಿತ ರರು ನಗರದ ವಲ್ಲಭಭಾಯಿ ರಸ್ತೆ, ಹಳೆ ಮಟನ್‌ ಮಾರ್ಕೆಟ್ ರಸ್ತೆ, ಹೊಸ ಲೈನ್‌ರಸ್ತೆ, ಬಿಟ್ಟಗೌಡನಹಳ್ಳಿಯ ಲ್ಲಿರುವ ಮಾವಿನ ಹಣ್ಣು ಮಾರಾಟ ಮಳಿಗೆ ಹಾಗೂ ಮಾವಿನ ಕಾಯಿ ಸಂಗ್ರಹಣೆ ಮಾಡಿದ್ದ ಉಗ್ರಾಣಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿ ದರು. ಕೆಲವು ಅಂಗಡಿ ಹಾಗೂ ಉಗ್ರಾಣಗಳಲ್ಲಿ ಹಣ್ಣಿನ ಕ್ರೇಟ್‌ನೊಳಗೆ ಕ್ಯಾಲ್ಸಿಯಂ ಕಾರ್ಬೈಡ್‌ನ‌ ಪ್ಲಾಸ್ಟಿಕ್‌ ಪೊಟ್ಟಣ ಗಳನ್ನಿಟ್ಟು ಮಾವಿನಕಾಯಿಗಳನ್ನು ಹಣ್ಣು ಮಾಡುತ್ತಿದ್ದುದು ಪತ್ತೆ ಆಯಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ರಾಜಗೋಪಾಲ್, ರಾಸಾಯನಿಕ ಬಳಸಿ ಹಣ್ಣು ಮಾಡಬಾರದು ಎಂದು ವ್ಯಾಪಾರಿಗಳಿಗೆ ಹಲವು ಬಾರಿ ಸೂಚನೆ ನೀಡಿದ್ದರೂ ಮಾವಿನ ಕಾಯಿಗಳನ್ನು ಹಣ್ಣು ಮಾಡಲು ರಾಸಾಯನಿಕ ಬಳಸಲಾಗುತ್ತಿದೆ. ರಾಸಾಯನಿಕ ಬಳಸಿದ ಹಣ್ಣನ್ನು ತಿನ್ನುವುದರಿಂದ ಕಣ್ಣು ಮತ್ತು ನರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕ್ಯಾನ್ಸರ್‌ ಬರುತ್ತದೆ. ರಸಾಯನಿಕ ಬಳಸಿ ಮಾವಿನ ಕಾಯಿ ಗಳನ್ನು ಹಣ್ಣು ಮಾಡುವವರು ಹಾಗೂ ಪರವಾನಗಿ ಇಲ್ಲದೆ ಹಣ್ಣಿನ ವ್ಯಾಪಾರ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ರಾಸಾಯನಿಕ ಬಳಸಿ ಮಾವಿನ ಕಾಯಿಗಳನ್ನು ಹಣ್ಣು ಮಾಡುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ವ್ಯಾಪಾರಿಗಳು ರಾಸಾಯನಿಕ ಬಳಸಿ ಹಣ್ಣು ಮಾಡುತ್ತಿದ್ದರೆ ಸಾರ್ವಜನಿಕರು ಮಾಹಿತಿ ನೀಡ ಬೇಕೆಂದು ಮನವಿ ಮಾಡಿದರು. ರಸ್ತೆಬದಿ ಹಣ್ಣಿನ ವ್ಯಾಪಾರಿಗಳು ತಕ್ಷಣ ಲೈಸೆನ್ಸ್‌ ಪಡೆಯದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ‌ರು. ದಾಳಿಯ ಸಂದರ್ಭದಲ್ಲಿ ರಾಸಾಯನಿಕ ಬಳಸಿ ಹಣ್ಣ ಮಾಡುತ್ತಿದ್ದ ವ್ಯಾಪಾರಿಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next