Advertisement

ಬೆಳ್ತಂಗಡಿ: ವಾಕಿಂಗ್ ಮಾಡುವಾಗ ಟ್ಯಾಕ್ಸಿ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ

12:23 PM Aug 24, 2020 | keerthan |

ಬೆಳ್ತಂಗಡಿ: ಇಲ್ಲಿನ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಸ್ಥಳೀಯ ವ್ಯಕ್ತಿಯೋರ್ವನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

Advertisement

ನಗರದ ಪಂಚಾಯತ್ ವ್ಯಾಪ್ತಿಯ ಜ್ಯೂನಿಯರ್ ಕಾಲೇಜ್ ರಸ್ತೆ ಬಳಿಯ ನಿವಾಸಿ ಹಿರಿಯ ಚಾಲಕ ವಾಸು ಸಪಲ್ಯ (65) ಮೇಲೆ ದಾಳಿ ಆಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಾಸು ಸಪಲ್ಯ ವೃತ್ತಿಯಲ್ಲಿ ಟ್ಯಾಕ್ಸಿ ವಾಹನದ ಚಾಲಕರಾಗಿ ಕೆಲಸ‌ ಮಾಡುತ್ತಿದ್ದರು.

ಘಟನೆ ನಡೆದ ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ ತಲವಾರ್ ಪತ್ತೆಯಾಗಿದೆ. ವಾಸು ಮೂಲ್ಯ ಅವರ ಎರಡನೇ ಮಗ ದಯಾನಂದ (38) ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗುತ್ತಿದೆ.

Advertisement

ಮಗ ಕೂಡ ಚಾಲಕ ವೃತ್ತಿ ನಿರ್ವಹಿಸುತ್ತಿದ್ದು, ಮದ್ಯಪಾನ ಮಾಡಿ ತಂದೆ ಜೊತೆ ಗಲಾಟೆ ಅಗಿ ಈ ಹಿಂದೆ ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ನಿನ್ನೆ ರಾತ್ರಿ ಮನೆಯಲ್ಲಿದ್ದ ಮಗ ದಯಾನಂದ ಇಂದು ಬೆಳಗ್ಗೆ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಬರುತ್ತಿರುವುದರಿಂದ ಅನುಮಾನ ವ್ಯಕ್ತವಾಗಿದೆ.

ಸ್ಥಳಕ್ಕೆ ಬೆಳ್ತಂಗಡಿ ಪಿಎಸ್ಐ ನಂದಕುಮಾರ್ , ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ. ಭೇಟಿ , ಪರೀಶೀಲನೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next