Advertisement

Gaza: ಮೆಡಿಟರೇನಿಯನ್‌ ಸಮುದ್ರ ಬಂದ್‌- ಇರಾನ್‌ ಎಚ್ಚರಿಕೆ

01:02 AM Dec 24, 2023 | Team Udayavani |

ಟೆಹ್ರಾನ್‌: ಗಾಜಾದಲ್ಲಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಇಸ್ರೇಲ್‌ ಮೂಲಕ ಯುದ್ಧಾಪರಾಧಗಳ ನ್ನು ಮುಂದುವರಿಸಿದರೆ ಮೆಡಿಟರೇನಿ ಯನ್‌ ಸಮುದ್ರವನ್ನು ಬಂದ್‌ ಮಾಡಲಾಗುವುದು ಎಂದು ಇರಾನ್‌ನ ರೆವಲ್ಯೂಶನರಿ ಗಾರ್ಡ್ಸ್‌ ಕಮಾಂಡರ್‌ ಬ್ರಿಗೇಡಿಯರ್‌ ಜನರಲ್‌ ಮೊಹಮ್ಮದ್‌ ರೆಜಾ ಎಚ್ಚರಿಕೆ ನೀಡಿದ್ದಾರೆ.

Advertisement

ಆದರೆ ಮೆಡಿಟರೇನಿಯನ್‌ ಸಮುದ್ರ ವನ್ನು ಹೇಗೆ ಬಂದ್‌ ಮಾಡಲಾಗುತ್ತದೆ ಎಂಬುದನ್ನು ಅವರು ವಿವರಿಸಿಲ್ಲ. ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಯುದ್ಧ ನಡೆಯುತ್ತಿದೆ. ಇರಾನ್‌ ಹಮಾಸ್‌ ಅನ್ನು ಬೆಂಬಲಿಸಿದರೆ, ಅಮೆ ರಿಕ ಇಸ್ರೇಲ್‌ಗೆ ಬೆಂಬಲ ನೀಡುತ್ತಿದೆ.

ಗಾಜಾದಲ್ಲಿ ಇಸ್ರೇಲ್‌ನಿಂದ ನಡೆಯು ತ್ತಿರುವ ಮಾರಣಹೋಮದಲ್ಲಿ ಸಾವಿ ರಾರು ಅಮಾಯಾಕರು ಪ್ರಾಣ ಕಳೆದು ಕೊಂಡಿದ್ದಾರೆ. ಇದಕ್ಕೆ ಅಮೆರಿಕ ಬೆಂಬ ಲವೇ ಕಾರಣ ಎಂದು ಇರಾನ್‌ ಆಪಾದಿಸಿದೆ. ಗಾಜಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಕೃತ್ಯಕ್ಕೆ ಪ್ರತೀಕಾರವಾಗಿ ಯೆಮನ್‌ನ ಹೌತಿ ಗುಂಪು ಕಳೆದ ತಿಂಗಳು ಕೆಂಪು ಸಮುದ್ರದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ದಾಳಿ ನಡೆಸಿತು. ಹೀಗಾಗಿ ಹಡಗು ಕಂಪೆನಿಗಳು ಮಾರ್ಗ ಬದಲಿಸಿವೆ. ಈ ದಾಳಿಯ ಹಿಂದೆ ಇರಾನ್‌ ಕೈವಾಡವಿದೆ ಎಂದು ಅಮೆರಿಕ ಆರೋಪಿಸಿದೆ. ಮೆಡಿಟರೇನಿಯನ್‌ ಸಮುದ್ರಕ್ಕೆ ಸ್ವತಃ ಇರಾನ್‌ಗೆ ನೇರ ಸಂಪ ರ್ಕವಿಲ್ಲ. ಹೀಗಿದ್ದರೂ ಸಮುದ್ರ ಮಾರ್ಗ ಬಂದ್‌ ಮಾಡುವ ಎಚ್ಚರಿಕೆ ನೀಡಿದೆ.

ಒಂದೇ ಕುಟುಂಬದ 76 ಮಂದಿ ಸಾವು: ಗಾಜಾದಲ್ಲಿ ಕಟ್ಟಡವೊಂದರ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಅಲ್‌-ಮಘ್ರಾಬಿ ಎಂಬ ದೊಡ್ಡ ಕುಟುಂ ಬದ 76 ಮಂದಿ ಸಾವಿ ಗೀ ಡಾ ಗಿ ದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next