ಬೆಂಗಳೂರು: ಕೋರಿಯರ್ ನೆಪದಲ್ಲಿ ವೃದ್ಧ ದಂಪತಿ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿ ದ್ದಾರೆ.
ರಾಮಮೂರ್ತಿನಗರ ನಿವಾಸಿಗಳಾದ ಶಿವ ಕುಮಾರ್ (46) ಮಣಿ ಕಂಠ (32) ಹಾಗೂ ಪ್ರಶಾಂತ್ (31) ಬಂಧಿತರು.
ಆರೋಪಿಗಳು ಸೆ.21ರಂದು ಕಸ್ತೂರಿ ನಗರದ ವಾಸುದೇವರಾವ್ ಎಂಬುವರ ಮನೆಗೆ ನುಗ್ಗಿ ಬೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖ ಲಿಸಿಕೊಂಡು ಕಾರ್ಯಾ ಚರಣೆ ನಡೆಸಿ ಆರೋಪಿ ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸೆ.21ರಂದು ಆರೋಪಿ ಗಳ ಪೈಕಿ ಮಣಿಕಂಠ ಮತ್ತು ಪ್ರಶಾಂತ್, ಕೊರಿಯರ್ ಬಂದಿದೆ ಎಂದು ವಾಸು ದೇವರಾವ್ ಮನೆಯ ಡೋರ್ ಬೆಲ… ಒತ್ತಿದ್ದಾರೆ. ಮನೆಯ ಬಾಗಿಲು ತೆರೆಯುತ್ತಿದ್ದಂತೆ ಮಾರಕಾಸ್ತ್ರ ಗಳಿಂದ ಮನೆ ಮಾಲಿಕರಾದ ವಾಸುದೇವರಾವ್ ಹಾಗೂ ಅವರ ಪತ್ನಿ ಕಲಾ ಮೇಲೆ ಹÇÉೆ ಮಾಡಿ, ಮನೆಯ ಕಬೋರ್ಡ್‌ನಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಘಟನೆ ನಂತರ ವಾಸು ದೇವ ರಾವ್ ದಂಪತಿ ಠಾಣೆಗೆ ತೆರಳಿ ದೂರು ದೂರು ನೀಡಿ ದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.ಮೋಜಿನ ಜೀವನ ಹಾಗೂ ಸಾಲ ತೀರಿಸಲು ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ವ್ಯಕ್ತಿಯಿಂದಲೇ ಸಂಚು:
ವೃದ್ಧ ದಂಪತಿ ಮನೆಯಲ್ಲಿ ಬಾಡಿಗೆಗೆ ವಾಸ ವಿದ್ದ ಆರೋಪಿ ಶಿವಕುಮಾರ್, ನಮ್ಮ ಮನೆ ಮಾಲಿಕರು ವೃದ್ಧರಾಗಿದ್ದು, ಅವರ ಮನೆಯಲ್ಲಿ ಚಿನ್ನಾಭರಣ ಇದೆ ಎಂದು ಸ್ನೇಹಿತರಾದ ಪ್ರಶಾಂತ್ ಮತ್ತು ಮಣಿಕಂಠಗೆ ತಿಳಿಸಿದ್ದ. ಬಳಿಕ ಮೂವರು ದರೋಡೆಗೆ ಸಂಚು ರೂಪಿಸಿ ದ್ದರು. ಅದರಂತೆ ಕೊರಿಯರ್ ನೆಪದಲ್ಲಿ ಮನೆಗೆ ನುಗ್ಗಿದ್ದ ಆರೋಪಿಗಳಾದ ಮಣಿಕಂಠ ಮತ್ತು ಪ್ರಶಾಂತ್ ರಾಬರಿ ಮಾಡಿ ಪರಾರಿ ಯಾಗಿದ್ದರು. ದರೋಡೆ ನಂತರ ತನಗೇನು ಗೊತ್ತಿಲ್ಲದಂತೆ ಆರೋಪಿ ಶಿವಕುಮಾರ್ ಮನೆ ಯಲ್ಲೇ ಇದ್ದ. ಆದರೆ, ಆರೋಪಿಗಳು ಕೃತ್ಯ ಎಸಗಿ ಪರಾರಿಯಾಗುವ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,ಆ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಣೆ ನಡೆಸಿದ್ದಾಗ ಬಾಡಿಗೆದಾರನಾಗಿದ್ದ ಶಿವಕುಮಾರ್ ಸುಪಾರಿ ಕೊಟ್ಟು ರಾಬರಿ ಮಾಡಿಸಿದ್ದ ಸಂಗತಿ ಬೆಳಕಿಗೆ ಬಂದಿದೆ.