Advertisement

USA: ಕಾರಿನ ಮೇಲೆ ದಾಳಿ: ವಿವೇಕ್‌ ರಾಮಸ್ವಾಮಿ ಆರೋಪ

09:48 PM Oct 06, 2023 | Team Udayavani |

ವಾಷಿಂಗ್ಟನ್‌: ಅಮೆರಿಕದ ಲೊವಾ ಪ್ರಾಂತ್ಯದ ಗ್ರಿನೆಲ್‌ ನಗರದಲ್ಲಿ ಪ್ರಚಾರದ ವೇಳೆ ಪಾರ್ಕಿಂಗ್‌ ಮಾಡಿದ್ದ ತನ್ನ ಕಾರಿನ ಮೇಲೆ ಇಬ್ಬರು ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್‌ ಪಕ್ಷದ ಆಕಾಂಕ್ಷಿ ವಿವೇಕ್‌ ರಾಮಸ್ವಾಮಿ ಆರೋಪಿಸಿದ್ದಾರೆ. ಉಕ್ರೇನ್‌ಗೆ ಅಮೆರಿಕ ನೆರವು ನೀಡುತ್ತಿರುವುದರ ವಿರುದ್ಧ ತನ್ನ ತೀವ್ರ ವಿರೋಧಕ್ಕೆ ಕ್ರೋಧಗೊಂಡ ಪ್ರತಿಭಟನಕಾರರು ಈ ಕೃತ್ಯ ಎಸಗಿದ್ದಾರೆ ಎಂದು ದೂರಿದ್ದಾರೆ. ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಪೊಲೀಸರು, ಈ ಘಟನೆಗೆ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದಾರೆ.

Advertisement

“ಗ್ರಿನೆಲ್‌ ನಗರದಲ್ಲಿ ಪ್ರಚಾರದ ಸಮಯದಲ್ಲಿ ಕೆಲವು ಪ್ರತಿಭಟನಾಕಾರರನ್ನು ಎದರುಗೊಂಡೆ. ಅವರ ಪ್ರಶ್ನೆಗಳಿಗೆ ಉತ್ತರಿಸಿದೆ. ಅವರ ದೃಷ್ಟಿಕೋನಕ್ಕೆ ನನ್ನ ಸಹಮತ ಇಲ್ಲದಿದ್ದರೂ, ಅದನ್ನು ವ್ಯಕ್ತಪಡಿಸಿದ್ದಕ್ಕೆ ಅವರಿಗೆ ಧನ್ಯವಾದ ತಿಳಿಸಿದೆ. ನಂತರ ಇಬ್ಬರು ಪ್ರತಿಭಟನಾಕಾರರು, ನನ್ನ ಕಾರಿನ ಬಳಿ ತೆರಳಿ, ದಾಳಿ ನಡೆಸಿದ್ದಾರೆ. ಬೆಂಬಲಗರಿಗೆ ಕೆಟ್ಟ ಸನ್ನೆಯನ್ನು ಮಾಡಿದ್ದಾರೆ. ಈ ವೇಳೆ ನಾನು ಸ್ಥಳದಲ್ಲಿರಲಿಲ್ಲ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ’ ಎಂದು ವಿವೇಕ್‌ ರಾಮಸ್ವಾಮಿ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next