Advertisement

Khalistani: ಕ್ಯಾಲಿಫೋರ್ನಿಯಾ ದೂತಾವಾಸಕ್ಕೆ ದಾಳಿ- ಖಲಿಸ್ತಾನಿ ಉಗ್ರರ ಮಾಹಿತಿ ರಿಲೀಸ್‌

09:15 PM Sep 21, 2023 | Team Udayavani |

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಠಿಣ ಕ್ರಮಗಳನ್ನು ಆರಂಭಿಸಿದೆ. ಮಾ.18, 19ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇರುವ ಭಾರತದ ಹೈಕಮಿಷನ್‌ ಕಚೇರಿ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲು ಯತ್ನಿಸಿದ್ದ ಹತ್ತು ಮಂದಿ ಉಗ್ರರ ವಿವರಗಳನ್ನು ತನಿಖಾ ಸಂಸ್ಥೆ ಬಿಡುಗಡೆ ಮಾಡಿದೆ. ಅವರ ಬಗ್ಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಿಗೆ ಎನ್‌ಐಎ ಮನವಿ ಮಾಡಿದೆ. ಮಾಹಿತಿ ನೀಡಿದವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ವಾಗ್ಧಾನವನ್ನೂ ಮಾಡಿದೆ.

Advertisement

ಜೂನ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಎಫ್ಐಆರ್‌ ದಾಖಲಿಸಿತ್ತು. ಹತ್ತು ಮಂದಿಯ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಗಳ ಅನ್ವಯ ದಾಳಿ ನಡೆಸಿದವರ ವಿರುದ್ಧ ಕೇಸು ದಾಖಲಿಸಲಾಗಿದೆ.

ಬುಧವಾರ ನಡೆದಿದ್ದ ಬೆಳವಣಿಗೆಯಲ್ಲಿ ಐವರು ಉಗ್ರರ ವಿರುದ್ಧ ಮಾಹಿತಿ ನೀಡಿದರೆ ಹತ್ತು ಲಕ್ಷ ರೂ. ಬಹುಮಾನ ನೀಡುವ ವಾಗ್ಧಾನ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next