Advertisement

ಬಾಲಾಕೋಟ್‌ ಮೇಲಿನ ದಾಳಿ ಯೋಜನೆ ಒಂದು ದಶಕದಷ್ಟು ಹಳೆಯದು!

12:30 AM Mar 03, 2019 | Team Udayavani |

ಬಾಲಾಕೋಟ್‌ ಕ್ಯಾಂಪ್‌ ಮೇಲೆ ಭಾರತ ದಾಳಿ ಮಾಡುವ ಯೋಜನೆ ರೂಪಿಸಿದ್ದು ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆದ ನಂತರ ಮಾತ್ರವಷ್ಟೇ ಅಲ್ಲ. ಒಂದು ದಶಕದ ಹಿಂದೆಯೇ ಈ ಯೋಜನೆ ರೂಪಿಸಲಾಗಿತ್ತು. 2008ರ ಮುಂಬೈ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ ಘಟನೆ ನಂತರವೇ ಈ ಯೋಜನೆ ರೂಪಿಸಲಾಗಿತ್ತು. ಆದರೆ ಇದಕ್ಕೆ ಮೂರ್ತರೂಪ ನೀಡಿರಲಿಲ್ಲ. ಮೌಖೀಕವಾಗಿ ಕೆಲವೇ ಉನ್ನತ ಅಧಿಕಾರಿಗಳಿಗೆ ಈ ಯೋಜನೆ ವಿವರಿಸಲಾಗಿತ್ತು. ಪುಲ್ವಾಮಾ ದಾಳಿ ನಡೆದ ನಂತರ ಪ್ರತೀಕಾರ ತೀರಿಸಿಕೊಳ್ಳಲು ಸೇನೆಯ ಮೂರು ವಿಭಾಗಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿತ್ತು. ಆದಾಗ್ಯೂ, ನಾವೇ ದಾಳಿ ಮಾಡುತ್ತೇವೆ ಎಂದು ವಾಯುಪಡೆ ಸ್ವಯಂಪ್ರೇರಿತವಾಗಿ ಮುಂದೆ ಬಂದಿತ್ತು. 

Advertisement

ಗುಪ್ತಚರ ದಳಗಳು ಉಗ್ರ ತಾಣ ಬಾಲಾಕೋಟ್‌ ಮೇಲೆ ದಾಳಿ ನಡೆಸುವ ಯೋಜನೆಯನ್ನು ಅಂತಿಮಗೊಳಿಸಿದಾಗ, ವಾಯುಪಡೆಯೇ ಸೂಕ್ತ ಎಂದು ನಿರ್ಧರಿಸಲಾಯಿತು. ಆರಂಭದಲ್ಲಿ ಸುಖೋಯ್‌ ಯುದ್ಧ ವಿಮಾನಗಳನ್ನು ಬಳಸಲು ನಿರ್ಧರಿಸಲಾಗಿತ್ತು. ಇದರಿಂದ ಬಾಂಬ್‌ ದಾಳಿ ನಡೆಸಿದರೆ ತೀವ್ರತೆ ಭಾರೀ ಪ್ರಮಾಣದಲ್ಲಿ ಇರಲಿದ್ದು, ನಾಗರಿಕರೂ ಸಾವನ್ನಪ್ಪುವ ಸಾಧ್ಯತೆಯಿತ್ತು. ಹೀಗಾಗಿ ನಿಖರ ಗುರಿಯ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಮಿರಾಜ್‌ ಯುದ್ಧ ವಿಮಾನಗಳನ್ನು ಬಳಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next