Advertisement

ಆಶಾ ಕಾರ್ಯಕರ್ತರ ಮೇಲೆ ಹಲ್ಲೆ: ಮನವಿ ಸಲ್ಲಿಕೆ

02:20 PM May 31, 2020 | Suhan S |

ಬ್ಯಾಡಗಿ: ಕೋವಿಡ್ ತಡೆಗಟ್ಟುವ ನಿಟ್ಟನಲ್ಲಿ ಗಣತಿ ಕಾರ್ಯಗಳಿಗೆ ತೆರಳಿದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿವೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ನೂರಾರು ಆಶಾ ಕಾರ್ಯಕರ್ತೆಯರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

Advertisement

ಮಂಜುಳಾ ಮಾಸೂರು, ಕೋವಿಡ್ ನಿಯಂತ್ರಿಸುವಲ್ಲಿ ಆರೋಗ್ಯ ಸಿಬ್ಬಂದಿ ಮನೆ ಬಾಗಲಿಗೆ ತೆರಳಿ ನಿರಂತರವಾಗಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಕಾರ್ಯೂನ್ಮುಖವಾಗುವಂತೆ ಮನವಿ ಮಾಡಿದರು.

ನಾವು ಆರೋಗ್ಯ ಇಲಾಖೆಯೊಂದಿಗೆ ಅವರಷ್ಟೇ ಸಮನಾದ ಕಾರ್ಯ ನಿರ್ವಹಣೆ ಮಾಡಿದರೂ ಕೇವಲ 4 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಇನ್ನಿತರ ಖರ್ಚುಗಳು ಸೇರಿದಂತೆ ಕುಟುಂಬ ನಿರ್ವಹಣೆ, ನೀಗಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರ್ಕಾರ ತಿಂಗಳಿಗೆ 10 ಸಾವಿರ ರೂ. ಪ್ಯಾಕೇಜ್‌ನ್ನು ಆಶಾ ಕಾರ್ಯಕರ್ತೆಯರಿಗಾಗಿ ಘೋಷಿಸುವಂತೆ ಆಗ್ರಹಿಸಿದರು.

ಸವಿತಾ ಪಾಟೀಲ, ರೇಖಾ ಕರಿಗಾರ ಲಲಿತಾ ಸಾರಂಗಮಠ, ಜ್ಯೋತಿ ಶಿರಾಳಕೊಪ್ಪ, ಸಾವಿತ್ರ ಬೆನ್ನೂರು, ಗೀತಾ ಅಡಿನವರ, ಬಸಮ್ಮ ಕುರಿ, ಜಯಮ್ಮ ಹಿರೇಮಠ, ನಿರ್ಮಲಾ ಕುರಕುಂದಿ, ಮಧು ಬಾಳಿಕಾಯಿ, ಕವಿತಾ ಅಂಗಡಿ, ರೇಣುಕಾ ಆಸಾದಿ, ಸುಧಾ ಎಲಿ, ಪುಷ್ಟಾ ಹಾವೇರಿ, ಪುಟ್ಟವ್ವ ಶೆಟ್ಟರ, ಕಾವೇರಿ ಮಾಸೂರು, ಜ್ಯೋತಿ ಕಾಗೇರ, ರೂಪಾ ಕೋಡಿಹಳ್ಳಿ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next