Advertisement

Amasebailu ಕೋಳಿ ಅಂಕಕ್ಕೆ ದಾಳಿ: ಆರೋಪಿಗಳ ಬಂಧನ

12:02 AM Dec 25, 2023 | Team Udayavani |

ಸಿದ್ದಾಪುರ: ಅಮಾಸೆಬೈಲು ಗ್ರಾಮದ ಕೆಲಾ ಹೆಗ್ಗೋಡ್ಲು ಎನ್ನುವಲ್ಲಿ ಕೋಳಿ ಅಂಕ ನಡೆಯುತ್ತಿರುವ ಪ್ರದೇಶಕ್ಕೆ ಡಿ. 23ರಂದು ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ, ಆರೋಪಿಗಳನ್ನು ಮತ್ತು ಕೋಳಿಗಳನ್ನು ವಶಕ್ಕೆ ಪಡೆದರು.

Advertisement

ಆರೋಪಿಗಳಾದ ರವೀಂದ್ರ, ರತ್ನಾಕರ, ಆನಂದ, ರಾಘವೇಂದ್ರ ಅವರನ್ನು ವಶಕ್ಕೆ ಪಡೆದಿದ್ದಾರೆ. 4 ಹುಂಜ, ನಗದು 810 ರೂ. ಮತ್ತು ಕೋಳಿ ಅಂಕಕ್ಕೆ ಬಳಸಿದ ಪರಿಕರಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಒಟ್ಟು ಮೌಲ್ಯ 3,410 ರೂ. ಎಂದು ಅಂದಾಜಿಸಲಾಗಿದೆ. ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next