Advertisement

ಆಲೋಕ್‌ ನಿವಾಸದ ಮೇಲೆ ದಾಳಿ: ಎಚ್‌ಡಿಡಿ, ಎಚ್‌ಡಿಕೆ ಸಿಡಿಮಿಡಿ

09:59 AM Sep 27, 2019 | sudhir |

ಬೆಂಗಳೂರು: ಫೋನ್‌ ಟ್ಯಾಪಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲೋಕ್‌ ಕುಮಾರ್‌ ನಿವಾಸದ ಮೇಲೆ ಸಿಬಿಐ ದಾಳಿ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.

Advertisement

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, “ಅವರ ಕೆಲಸ ಅವರು ಮಾಡಲಿ ಬಿಡಿ. ಯಾರ ಮೇಲೆ ಯಾರು ಆರೋಪ ಮಾಡಿದ್ದಾರೋ, ಯಾವ ರೀತಿ ತನಿಖೆಯೋ ಮಾಡಿಕೊಳ್ಳಲಿ, ನಾನು ಅದಕ್ಕೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ’ ಎಂದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಯಾರ ಮನೆ ಮೇಲೆ ಯಾರಾದರೂ ದಾಳಿ ಮಾಡಿಕೊಳ್ಳಲಿ, ನನ್ನ ಯಾಕೆ ಕೇಳ್ತೀರಾ? ನನಗೇನು ಸಂಬಂಧ, ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ನನ್ನ ಅವಧಿಯಷ್ಟೇ ಯಾಕೆ ಎಲ್ಲರ ಅವಧಿಯಲ್ಲೂ ಫೋನ್‌ ಟ್ಯಾಪಿಂಗ್‌ ನಡೆಯುತ್ತದೆ. ನನ್ನದೂ ಏನಾದರೂ ಇದ್ದರೆ ತನಿಖೆ ಮಾಡಿಕೊಳ್ಳಲಿ. ದೇಶದ ಕಾನೂನಿನಲ್ಲಿ ಯಾರ ಮೇಲೆ ಬೇಕಾದರೂ ತನಿಖೆ ಮಾಡಬಹುದು, ಅದಕ್ಕೆ ಯಾಕೆ ಗಾಬರಿಪಡಬೇಕು ಎಂದು ಹೇಳಿದರು. ಆಲೋಕ್‌ ಕುಮಾರ್‌ ಈಗಲೂ ದಕ್ಷ ಅಧಿಕಾರಿಯೇ? ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next