Advertisement
ಈ ಹೊಟೇಲ್‌ನಲ್ಲಿ ಅಬಕಾರಿ ಇಲಾಖೆಯ ನಿಯಮಗಳನ್ನು ಮೀರಿ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿಯನ್ವಯ ರಾತ್ರಿ 10.30ರ ಸುಮಾರಿಗೆ ಸಹಾಯಕ ಆಯುಕ್ತ ಭೂಬಾಲನ್ ದಾಳಿ ನಡೆಸಲು ತೆರಳಿದ್ದರು. ಅವರ ಜತೆಗೆ ಇಲಾಖಾ ವಾಹನ ಚಾಲಕ ರಾಘವೇಂದ್ರ, ಗನ್‌ಮ್ಯಾನ್ ದಶಾಂತ್ ಕುಮಾರ್, ಇನ್ನೊಂದು ವಾಹನದಲ್ಲಿ ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂವಿತಾ ಹಾಗೂ ಅವರ ವಾಹನ ಚಾಲಕ ವಿಜಯ ಅವರಿದ್ದರು.
ದೂರು ದಾಖಲಿಸಿ ರಾತ್ರಿ 12.40ರ ಅಂದಾಜಿಗೆ ನಗರ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಮಾಧ್ಯಮದ ಜತೆ ಮಾತನಾಡಿದ ಎಸಿಯವರು, 1 ವಾರದಿಂದ ಅಬಕಾರಿ ಕಾಯ್ದೆ ಮೀರುತ್ತಿರುವ ವಿವಿಧೆಡೆ ದಾಳಿ ನಡೆಸಲಾಗುತ್ತಿದೆ. ಅದರಂತೆ ಇಲ್ಲಿಯೂ ದಾಳಿ ನಡೆಸಲಾಗಿದೆ. ನಿಯಮ ಮೀರಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ವೀಡಿಯೋ
ಮಾಡುವಾಗ ವ್ಯಕ್ತಿಯ ಮುಖ ಬಾರದಂತೆ, ಖಾಸಗಿ ಹಕ್ಕಿಗೆ ಚ್ಯುತಿಯಾಗದಂತೆ, ಆ ವಸತಿಗೃಹದಲ್ಲಿ ತಂಗಿದ್ದಾರೆಯೇ ಎಂದಷ್ಟೇ ಕೇಳುತ್ತಿದ್ದೆ. ಆ ವಸತಿಗೃಹದಲ್ಲಿ ಉಳಕೊಂಡವರಿಗಷ್ಟೇ ಮದ್ಯ ಮಾರಾಟಕ್ಕೆ ಪರವಾನಿಗೆ ಇದೆ. ಆದರೆ ಅಷ್ಟರಲ್ಲಿ ಅಲ್ಲಿದ್ದವರು ಹಲ್ಲೆಗೆ ಮುಂದಾದರು ಎಂದು ಹೇಳಿದರು.
Related Articles
Advertisement
ಈಗಿನ ಎಸಿ ಭೂಬಾಲನ್ ಅವರು ಕಳೆದ ವರ್ಷ ನವಂಬರ್‌ನಲ್ಲಿ ಹರಪನಹಳ್ಳಿ ಎಸಿಯಾಗಿದ್ದಾಗ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದಾಗ ಕೂಡ ಹಲ್ಲೆಗೊಳಗಾಗಿದ್ದರು.
ದಾಳಿ ನಿಲ್ಲದು : ಎಸಿ ಶಾಂತ, ಸುವ್ಯವಸ್ಥಿತ ಮತದಾನಕ್ಕೆ ನಾವು ಕ್ರಮಕೈಗೊಳ್ಳುತ್ತಿರುವಾಗ ಇಂತಹ ಘಟನೆಗಳು ನಡೆಯಬಾರದು. ನಮ್ಮ ಮೇಲಿನ ದಾಳಿಗಳಿಗೆ ಹೆದರಿ ನಮ್ಮ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ನ್ಯಾಯಾಂಗದ ಅಧಿಕಾರ ಹೊಂದಿದ ಅಧಿಕಾರಿ ಮೇಲೆ ಇಂತಹ ದಾಳಿ ನಾಗರಿಕ ಸಮಾಜಕ್ಕೆ ಶೋಭೆಯಲ್ಲ ಎಂದು ಭೂಬಾಲನ್ “ಉದಯವಾಣಿ’ ಜತೆ ಹೇಳಿದರು. ಹಲ್ಲೆಯ ಚಾರ್ಜ್‌ಶೀಟ್ ಇನ್ನೂ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿಲ್ಲ, ಸರಕಾರಿ ವಕೀಲರ ಹಂತದಲ್ಲಿ ಪರಿಶೀಲನೆಯಾಗುತ್ತಿದೆ. ಈ ಘಟನೆ ಕುರಿತು ಸೂಕ್ತ ತನಿಖೆ ನಡೆಯುವ ವಿಶ್ವಾಸವಿದೆಯೇ ಎಂದು ಕೇಳಿದಾಗ, ಪೊಲೀಸರು ಹಾಗೂ ನ್ಯಾಯಾಂಗದ ಮೇಲೆ ವಿಶ್ವಾಸವಿಟ್ಟಿದ್ದೇನೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ವಿನಂತಿಸುತ್ತೇನೆ ಎಂದರು.