Advertisement

ವಾಣಿಜ್ಯ ಮಳಿಗೆ-ಹೋಟೆಲ್‌ ಮೇಲೆ ದಿಢೀರ್‌ ದಾಳಿ

04:07 PM Oct 07, 2020 | Suhan S |

ಕಲಬುರಗಿ: ದಿನೇ-ದಿನೇ ಹೆಚ್ಚಳವಾಗುತ್ತಿರುವ ಕೋವಿಡ್ ತಡೆಗಟ್ಟಲು ಹಾಗೂ ಮಹಾನಗರದಲ್ಲಿ ಸ್ವಚ್ಛತೆ ಹೆಚ್ಚಿಸಲು ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಮಂಗಳವಾರ ಬೆಳಿಗ್ಗೆ ನಗರದಲ್ಲಿ ಮಿಂಚಿನ ಕಾರ್ಯಾಚರಣೆಕೈಗೊಂಡರು.

Advertisement

ವಾಣಿಜ್ಯ ಮಳಿಗೆಗಳಲ್ಲಿ ಹಾಗೂ ರಸ್ತೆ ಬದಿ ಹೋಟೆಲ್‌ಗ‌ಳಲ್ಲಿ ಮತ್ತು ವ್ಯಾಪಾರಿಗಳು ಮಾಸ್ಕ್ ಹಾಕಿಕೊಳ್ಳದೇ ಇದ್ದುದ್ದಕ್ಕೆ ಜತೆಗೆ ಸಾಮಾಜಿಕ ಅಂತರಕಾಪಾಡದಿರುವುದಕ್ಕೆ ಆಯುಕ್ತರು  ದಂಡ ವಿಧಿಸುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಮಾಸ್ಕ್ ಹಾಕಿಕೊಳ್ಳದವರಿಗೆ, ಸಾಮಾಜಿಕ ಅಂತರ ನಿರ್ಲಕ್ಷಿಸಿದವರಿಗೆ ಜತೆಗೆ ಸ್ವಚ್ಛತೆ ಕಾಪಾಡಿಕೊಳ್ಳದವರಿಗೆಆಯುಕ್ತರು ತರಾಟೆಗೆ  ತೆಗೆದುಕೊಂಡರಲ್ಲದೇ ಇನ್ಮೂಂದೆಯೂ ಹೀಗೆ ಮುಂದುವರೆದಲ್ಲಿ ಪಾಲಿಕೆಯಅನುಮತಿಯೇ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಬೀದಿ ಬದಿಯ ವ್ಯಾಪಾರಿಗಳು ಹಾಗೂ ಚಹಾದಂಗಡಿಗಳಿಗೆ ಕಸ ಹಾಗೂ ಇತರೆ ತ್ಯಾಜ್ಯ ಹಾಕಲು ಬುಟ್ಟಿಗಳನ್ನು ಸಾಂಕೇತಿಕವಾಗಿ ನೀಡಿದ ಪಾಲಿಕೆ ಆಯುಕ್ತರು, “ನನ್ನ ಕಸ ನನ್ನ ಜವಾಬ್ದಾರಿ ಎಂಬ ಅಭಿಯಾನಕ್ಕೆ ಆಯುಕ್ತರು ಚಾಲನೆ ನೀಡಿದರು.

ಹೊಟೇಲ್‌, ಬೀದಿ ವ್ಯಾಪಾರಿಯ ಗೂಡಂಗಡಿ ಬಳಿ ಚಹಾ ಕುಡಿದ ಕಪ್‌ ಗಳು ಎಲ್ಲೆಂದರಲ್ಲಿ ಎಸೆಯಬಾರದು. ಇನ್ಮುಂದೆ ಎಸೆದಲ್ಲಿ ದಂಡ ಹಾಕಲಾಗುವುದು ಎಚ್ಚರಿಕೆ ನೀಡಿದರಲ್ಲದೇ ತ್ಯಾಜ್ಯದಿಂದಲೇ ರೋಗ ರುಜಿನಗಳಿಗೆಕಾರಣವಾಗುತ್ತಿರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದರು.

Advertisement

ತೆರಿಗೆ ಸಂಗ್ರಹಕ್ಕೆ ಕ್ರಮ: ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಈಗ ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್  ಹಿನ್ನೆಲೆ ಪಾಲಿಕೆ ಸಿಬ್ಬಂದಿಗಳಿಗೆಮೊದಲು ತಮ್ಮ ನಿವಾಸಗಳ ತೆರಿಗೆ  ತುಂಬುವಂತೆ ನೊಟೀಸ್‌ ನೀಡಲಾಗಿದೆ. ಸರ್ಕಾರಿ ಕಚೇರಿಗಳಿಂದಲೂ ಸೇವಾ ತೆರಿಗೆ ತುಂಬುವಂತೆ ಸರ್ಕಾರಿ ಅಂಗ ಸಂಸ್ಥೆಗಳ ಕಚೇರಿಗಳಿಗೂ ಮನವಿ ಮಾಡಲಾಗಿದೆ. ಅದೇ ರೀತಿ ತೆರಿಗೆ ಸಂಗ್ರಹ ಅಭಿಯಾನ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಇದೇ ಸಂದರ್ಭದಲ್ಲಿ ತಿಳಿಸಿದರು.

ಪಾಲಿಕೆಯ ಉಪಆಯುಕ್ತ ಆರ್‌.ಪಿ. ಜಾಧವ್‌, ಪಾಲಿಕೆ ಆರೋಗ್ಯಾಧಿಕಾರಿ ಡಾ| ವಿನೋದಕುಮಾರ ಸೇರಿದಂತೆ ಮುಂತಾದವರು ಇದ್ದರು.

ಕಲಬುರಗಿ ಮಹಾನಗರದ ಸ್ವತ್ಛತೆಯಲ್ಲಿ ಜನರು ತಮ್ಮ ಪಾತ್ರ ನಿರ್ವಹಿಸುವ ಕುರಿತಾಗಿ ಜಾಗೃತಿ ಮೂಡಿಸಲು ಮುಂದಾಗಲಾಗಿದೆ. ಪಾಲಿಕೆ ಆದಾಯ ಹೆಚ್ಚಳಕ್ಕೂ ಉದ್ದೇಶಿಸಲಾಗಿದೆ. ಕೋವಿಡ್ ದಿಂದ ಎಲ್ಲದರ ಮೇಲೆ ಹೊಡೆತ ಬಿದ್ದಿದೆ. ಹೀಗಾಗಿ ಮತ್ತೆ ಮೊದಲಿನಂತೆ ಪಾಲಿಕೆ ಆದಾಯ ಬರುವಲ್ಲಿ ಶ್ರಮ ವಹಿಸಬೇಕಿದೆ. ಆಡಳಿತ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. – ಸ್ನೇಹಲ್‌ ಲೋಖಂಡೆ, ಪಾಲಿಕೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next