Advertisement

ದೌರ್ಜನ್ಯ, ಹಗರಣ: ಕುಂಬಳೆ ಸಿಐ ಕಚೇರಿಗೆ ಮುತ್ತಿಗೆ

11:27 AM Jul 26, 2019 | Team Udayavani |

ಕುಂಬಳೆ: ತಿರುವನಂತಪುರ ಸೆಕ್ರಟರಿಯೇಟ್‌ ಧರಣಿ ನಿರತ ಯುವಕಾಂಗ್ರೆಸ್‌ ಕಾರ್ಯಕರ್ತರ ಮೇಲಿನ ದೌರ್ಜನ್ಯ ಹಾಗೂ ಪಿ.ಎಸ್‌. ಸಿ. ಅಂಕಪಟ್ಟಿಯಲ್ಲಿನ ಅವ್ಯವಹಾರ ಖಂಡಿಸಿ ಮಂಜೇಶ್ವರ ಬ್ಲಾಕ್‌ ಯೂತ್‌ ಕಾಂಗ್ರೆಸ್‌ ಸಮಿತಿ ನೇತƒತ್ವದಲ್ಲಿ ಕುಂಬಳೆ ಸಿಐ ಕಚೇರಿಗೆ ಮುತ್ತಿಗೆ ಹಾಕಲಾಯಿತು.

Advertisement

ಬ್ಲಾಕ್‌ ಯೂತ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನಾಸರ್‌ ಮೊಗ್ರಾಲ್‌ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂಚಾಯತ್‌ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್‌ ಉದ್ಘಾಟಿಸಿ ಮಾತನಾಡಿ, ರಾಜ್ಯದ ಆಡಳಿತಾರೂಢ ಸಿಪಿಎಂ ನೇತƒತ್ವದಲ್ಲಿ ಹಿಂಸೆ, ಕೊಲೆ, ಆತ್ಮಹತ್ಯೆ, ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ಪಿಣರಾಯಿ ವಿಜಯನ್‌ ನೇತƒತ್ವದ ಎಡರಂಗ ಸರಕಾರದ ದುರಾಡಳಿತದಿಂದ ಜನ ಸಾಮಾನ್ಯರು ಕಂಗೆಟ್ಟಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ನಡೆಸುವ ಯೂತ್‌ ಕಾಂಗ್ರೆಸ್‌ ಕಾರ್ಯ ಕರ್ತರ ಮೇಲೆ ಪೊಲೀಸ್‌ ದೌರ್ಜನ್ಯ ವೆಸಗಲಾಗುತ್ತಿದೆ ಯೆಂದು ಅವರು ಆರೋಪಿಸಿದರು.

ಕುಂಬಳೆ ಮಂಡಲ ಕಾಂಗ್ರೆಸ್‌ ಅಧ್ಯಕ್ಷ ಗಣೇಶ್‌ ಭಂಡಾರಿ, ನಾಯಕರಾದ ದಿವಾಕರ್‌ ಎಸ್‌.ಜೆ., ರವಿ ಪೂಜಾರಿ ಕೋಟೆಕ್ಕಾರ್‌, ಶಾನಿದ್‌ ಕಯ್ನಾಂ ಕೂಡೇಲು, ಲಕ್ಷ್ಮಣ ಪ್ರಭು ಕುಂಬ್ಳೆ, ಇಕ್ಬಾಲ್‌ ಕಳಿಯೂರು, ಇರ್ಷಾದ್‌ ಕಳಿಯೂರು, ನಾರಾಯಣ ಏದಾರು, ಶರೀಫ್‌ ಅರಿಬೆ„ಲು, ಸಲೀಂ ಕಟ್ಟತ್ತಡ್ಕ, ಆಬಿದ್‌ ಎಡಚೇರಿ, ಆರಿಫ್‌ ಮಚ್ಚಂಪಾಡಿ, ಡೋಲ್ಫಿ ಡಿ’ಸೋಜಾ, ಲೋಕನಾಥ ಶೆಟ್ಟಿ, ಯೂಸುಫ್‌ ಮಿಲಾನೊ ಮುಂತಾದವರು ಉಪಸ್ಥಿತರಿದ್ದರು.
ಶರೀಫ್‌ ಪಿ.ಕೆ.ನಗರ ಸ್ವಾಗತಿಸಿದರು. ನಿಸಾರ್‌ ಆರಿಕ್ಕಾಡಿ ವಂದಿಸಿದರು. ಪ್ರತಿಭಟನೆಗೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಆಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next