Advertisement

ದಲಿತರ ಮೇಲಿನ ದೌರ್ಜನ್ಯ: ಗೃಹ ಸಚಿವರಿಗೆ ಮುತ್ತಿಗೆ

03:09 PM Feb 17, 2017 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯ ಮತ್ತು ಹಲ್ಲೆಗಳು ನಡೆಯುತ್ತಿವೆ. ಇದನ್ನು ತಡೆಯುವಲ್ಲಿ ವಿಫಲವಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಗುರುವಾರ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ  ಮುತ್ತಿಗೆ ಹಾಕಿ ಪ್ರತಿಭಟಿಸಿತು. 

Advertisement

ಸಚಿವ ಡಾ| ಶರಣಪ್ರಕಾಶ ಪಾಟೀಲ ದಲಿತ ವಿರೋಧಿಯಾಗಿದ್ದಾರೆ. ಅವರು ಯಾವತ್ತಿಗೂ ದಲಿತರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಒಂದು  ಮಾತನಾಡಿಲ್ಲ. ಇವರಿಂದ ದಲಿತರ ರಕ್ಷಣೆ ಸಾಧ್ಯವಿಲ್ಲ. ಆದ್ದರಿಂದ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕು. ಅಲ್ಲದೆ, ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್‌  ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಕೂಡ ವಜಾ ಮಾಡಬೇಕು ಎಂದು ಆಗ್ರಹಿಸಿದರು. 

ಆಳಂದ ತಾಲೂಕು ದುತ್ತರಗಾಂವ, ಗೋಳಾ, ಚಿಂಚೋಳಿ ತಾಲೂಕು ಗಾರಂಪಳ್ಳಿ, ಸೇಡಂನ ಕೋಡ್ಲಾ, ಜೇವರ್ಗಿಯ ಕುರನಳ್ಳಿ ಘಟನೆಗಳು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿರುವ ಪೊಲೀಸ್‌ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕ್ರಮ ಕೈಗೊಳ್ಳದಿರುವುದು ಮೆಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೆ, ತಪ್ಪಿತಸ್ಥರನ್ನು ರಕ್ಷಣೆ ಮಾಡಲು ಹೆಣಗಾಡುವುದು ಸಾರ್ವಜನಿಕವಾಗಿ ಕಂಡು ಬಂದಿದೆ ಎಂದು ಸಮಿತಿ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದರು. 

ಸಮಿತಿ ಮುಖಂಡರಾದ  ಡಾ| ವಿಠಲ ದೊಡ್ಡಮನಿ, ಬಸಣ್ಣ ಸಿಂಗೆ, ದತ್ತಾತ್ರೇಯ ಇಕ್ಕಳಕಿ. ಸೂರ್ಯಕಾಂತ ನಿಂಬಾಳಕರ್‌, ಎ.ಬಿ. ಹೊಸಮನಿ, ಲಕ್ಷಿಕಾಂತ ಹುಬಳಿ, ಸಂತೋಷ ಮೇಲ್ಮನಿ, ಸತೀಶ ಮಾಲೆ, ಬಾಲಾಜಿ ಕಾಂಬಳೆ, ಮಹಾದೇವ ಧನ್ನಿ, ರಾಜು ಸಂಕಾ, ಪ್ರಕಾಶ ಔರಾದಕರ್‌, ಶಿವಶಂಕರ ಭೋವಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next