Advertisement
ಇತಿಹಾಸಭಾರತೀಯ ನೌಕಾ ಪಡೆಯು 1612ರಲ್ಲಿ ಸ್ಥಾಪನೆಯಾಯಿತು. ಈಸ್ಟ್ ಇಂಡಿಯಾ ಕಂಪೆನಿಯು ತನ್ನ ಹಡಗುಗಳನ್ನು ರಕ್ಷಿಸಲು ಈ ಪಡೆಯನ್ನು ರಚಿಸಿತು. ಇದನ್ನು ಬಳಿಕ ರಾಯಲ್ ಇಂಡಿಯನ್ ನೇವಿ ಎಂದು ಹೆಸರಿಸಲಾಯಿತು. ದೇಶ ಸ್ವತಂತ್ರವಾದ ಬಳಿಕ ನೌಕಾ ಪಡೆಯು 1950ರಲ್ಲಿ ಪುನಾರಚನೆಯಾಗಿ, ಭಾರತೀಯ ನೌಕಾ ಪಡೆ ಎಂದು ಮರುನಾಮಕರಣಗೊಂಡಿತು.
ಡಿಸೆಂಬರ್ 4 ದೇಶದ ಇತಿಹಾಸದಲ್ಲಿ ಅಳಿಸಲಾಗದ ದಿನ. ಭಾರತವು ತನ್ನ ನೌಕಾ ಸೇನೆಯನ್ನು ಬಳಸಿ ಶತ್ರು ರಾಷ್ಟ್ರ ಪಾಕಿಸ್ಥಾನದ ವಿರುದ್ಧ ವಿಜಯ ಸಾಧಿಸಿದ ದಿನ. 1971ರ ಭಾರತ-ಪಾಕಿಸ್ಥಾನ ಯುದ್ಧದಲ್ಲಿ ಭಾರತೀಯ ನೌಕಾಪಡೆ ಮೊದಲ ಬಾರಿ ಹಡಗು ನಿಗ್ರಹ ಕ್ಷಿಪಣಿಗಳನ್ನು ಬಳಸಿ ಪಾಕಿಸ್ಥಾನದ ಯುದ್ಧ ನೌಕೆಗಳನ್ನು ಹೊಡೆದುರುಳಿಸಿತ್ತು. ಈ ದಿನವನ್ನು ನೆನೆಯುವ ಸಲುವಾಗಿ ಪ್ರತೀ ವರ್ಷ ಡಿ. 4ರಂದು ಭಾರತೀಯ ನೌಕಾ ದಿನವನ್ನು ಆಚರಿಸಲಾಗುತ್ತಿದೆ.
– 67,252 ಪೂರ್ಣ ಪ್ರಮಾಣದ ಆಧಿಕಾರಿಗಳು
– 55,000 ಅರೆಕಾಲಿಕ ಸಿಬಂದಿ
– 137 ದೊಡ್ಡ ಯುದ್ಧ ನೌಕೆ
– 14 ಚಿಕ್ಕ ಯುದ್ಧ ನೌಕೆ ಐಎನ್‌ಎಸ್ ಕವರಟ್ಟಿ
4 ದೇಶೀಯ ನಿರ್ಮಿತ ಜಲಾಂತರ್ಗಾಮಿ ನಿಗ್ರಹ ಯುದ್ಧ ನೌಕೆಗಳಾದ ಐಎನ್‌ಎಸ್ ಕವರಟ್ಟಿ ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ. ಕವರಟ್ಟಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಪತ್ತೆ ಹಚ್ಚುವ ಮತ್ತು ಸಂಶೋಧನೆಗೆ ಒಳಪಡಿಸುವ ಸಂವೇದಕವನ್ನು ಹೊಂದಿದೆ. ಹಡಗಿನಲ್ಲಿ ಶೇ.90ರಷ್ಟು ಸ್ಥಳೀಯ ಸಾಧನ, ಸಲಕರಣೆಗಳನ್ನೇ ಬಳಸಲಾಗಿದೆ.
Related Articles
ಭಾರತೀಯ ನೌಕಾಪಡೆ ಇಂದು ಜಗ ತ್ತಿನ 5ನೇ ಅತೀ ದೊಡ್ಡ ನೌಕಾ ಪಡೆಯಾ ಗಿದೆ. 2030ರ ವೇಳೆಗೆ ವಿಶ್ವದ ಅತ್ಯಂತ ಶಕ್ತಿಶಾಲಿ ನೌಕಾ ಸೇನೆ ಹೊಂದಿರುವ ಮೂರನೇ ರಾಷ್ಟ್ರ ಎಂದು ಗುರುತಿಸಿ ಕೊಳ್ಳುವ ಗುರಿ ನೌಕಾ ಸೇನೆಗಿದೆ.
Advertisement
ಸ್ವದೇಶಿ ನಿರ್ಮಿತ: ಹಲವು ಸ್ವದೇಶಿ ನಿರ್ಮಿತ ಯುದ್ಧ ನೌಕೆ, ಸಬ್‌ಮರೀನ್‌ಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಯುದ್ಧ ವಿಮಾನಗಳನ್ನು ಸಾಗಿಸುವ ವಿಕ್ರಮಾದಿತ್ಯದಿಂದ ಭಾರತಕ್ಕೆ ವೈರಿ ನೆಲದಲ್ಲಿಯೇ ಯುದ್ಧ ಮಾಡುವ ಮತ್ತು ಆಗಸದಲ್ಲಿಯೇ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸಿ ಅವುಗಳ ತಲುಪುವಿಕೆ ಸಾಮರ್ಥ್ಯ ಹೆಚ್ಚಿಸಬಲ್ಲುದು.
ನೌಕಾಪಡೆಯ ಪ್ರಮುಖ ಕಾರ್ಯಾಚರಣೆಗಳುಆಪರೇಷನ್ ಕ್ಯಾಕ್ಟಸ್: ಇದು ಮಾಲ್ದೀವ್ಸ್‌ನಲ್ಲಿ ನಡೆದ ಕಾರ್ಯಾಚರಣೆ. ಉಗ್ರಗಾಮಿಗಳನ್ನು ದಮನಿಸಿ ಸರಕಾರದ ಮರುಸ್ಥಾಪನೆ.
ಆಪರೇಷನ್ ಲೀಚ್: ಮ್ಯಾನ್ಮಾರ್‌ನಲ್ಲಿ ನಡೆಸಿದ ಕಾರ್ಯಾಚರಣೆ
ಆಪರೇಷನ್ ಪವನ್: ಶ್ರೀಲಂಕಾದಲ್ಲಿ ನಡೆಸಿದ ಕಾರ್ಯಾಚರಣೆ
ಕಾರ್ಗಿಲ್ ಯುದ್ಧ: ಆಪರೇಷನ್ ಬ್ಲ್ಯಾಕ್ ಟೊರ್ನಾಡೊ ಮತ್ತು ಆಪರೇಷನ್ ಸೈಕ್ಲೋನ್
26/11 ರ ಮುಂಬಯಿ ದಾಳಿ: 2008ರಲ್ಲಿ ಹೊಟೇಲ್ ತಾಜ್ ಮಹಲ್ ಪ್ಯಾಲೇಸ್ ಮೇಲಿನ ಉಗ್ರಗಾಮಿಗಳ ದಾಳಿಯನ್ನು ಸಮರ್ಥವಾಗಿ ಹತ್ತಿಕ್ಕಿದ್ದು.