ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಎಟಿಎಂ ಹಣ ದರೋಡೆ ಪ್ರಕರಣಗಳಲ್ಲಿ ಈವರೆಗೆ ಕೇವಲ ಶೇ.50ರಷ್ಟು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ಈ ಅಂಶ ದೆಹಲಿ ಪೊಲೀಸರ ಅಪರಾಧ ವಿಭಾಗದ ವರದಿಯಿಂದ ತಿಳಿದುಬಂದಿದೆ.
2019, 20, 21ರಲ್ಲಿ ಒಟ್ಟು 90 ಎಟಿಎಂ ದರೋಡೆ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 42 ಪ್ರಕರಣಗಳನ್ನು ಮಾತ್ರ ಭೇದಿಸಲಾಗಿದೆ. ಒಟ್ಟು 89 ಆರೋಪಿಗಳನ್ನು ಬಂಧಿಸಲಾಗಿದ್ದು, ಅದರಲ್ಲಿ ಪ್ರಸ್ತುತ 12 ಅಪರಾಧಿಗಳು ಮಾತ್ರವೇ ಜೈಲಿನಲ್ಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ನಾಯಕ ಬಿಜೆಪಿಗೆ ಸೇರ್ಪಡೆ: ಬಿಜೆಪಿಗರ ವಿರೋಧ; ರಾಜ್ಯಾಧ್ಯಕ್ಷರಿಗೆ ಮುಜುಗರ
2019ರಲ್ಲಿ 27 ಪ್ರಕರಣ ದಾಖಲಾಗಿದ್ದು, ಅದರಲ್ಲಿ 12 ಪ್ರಕರಣ ಭೇದಿಸಲಾಗಿದೆ. ಹಾಗೆಯೇ 2020ರ 42 ಪ್ರಕರಣಗಳಲ್ಲಿ 19 ಹಾಗೂ ಈ ವರ್ಷದ 18 ಪ್ರಕರಣಗಳಲ್ಲಿ 12 ಪ್ರಕರಣಗಳನ್ನು ಮಾತ್ರ ಭೇದಿಸಲಾಗಿದೆ.