Advertisement
ಎಂ.ಟಿ. ರಸ್ತೆಯಲ್ಲಿ ನೂತನವಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ. ಇದೇ ಸಂದರ್ಭದಲ್ಲಿ ನೀರು ಹರಿಯುವ ಚರಂಡಿ ವ್ಯವಸ್ಥೆಯನ್ನೂ ಸಮರ್ಪಕಗೊಳಿಸಲಾಗುವುದು ಎಂದು ಸ್ಥಳೀಯಾಡಳಿತ ನಗರಸಭೆ ಭರವಸೆ ನೀಡಿತ್ತು. ಕಾಂಕ್ರೀಟ್ ರಸ್ತೆ ಇತ್ತೀಚೆಗೆ ಸಂಚಾರಕ್ಕೆ ಮುಕ್ತಗೊಂಡಿತ್ತು. ಆದರೆ ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಪೂರ್ಣಗೊಳಿಸಿಲ್ಲ.
ಮಳೆಗಾಲದಲ್ಲಿ ರಸ್ತೆ ಚರಂಡಿ ದುರಸ್ತಿಗೊಳಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದ್ದರೆ ಈ ಸಮಸ್ಯೆಗಳು ಉದ್ಭವಿಸಲು ಸಾಧ್ಯವಿರಲಿಲ್ಲ. ಇನ್ನಾದರೂ ನಗರಸಭೆ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ರಿಕ್ಷಾ ಚಾಲಕರ ಹಾಗೂ ಸ್ಥಳೀಯರ ಆಗ್ರಹವಾಗಿದೆ.
ಸಮಸ್ಯೆಗೆ ಮುಕ್ತಿ ಕೊಡಿ
ಕಾಮಗಾರಿಯನ್ನು ಅರ್ಧದಲ್ಲಿ ಬಿಟ್ಟು ಹೋಗಿದ್ದಾರೆ. ಚರಂಡಿಗೆ ಸ್ಲ್ಯಾಬ್‌ಗಳನ್ನೂ ಅಳವಡಿಸಿಲ್ಲ. ತ್ಯಾಜ್ಯಗಳೂ ತುಂಬಿರುವುದರಿಂದ ಇಲ್ಲಿ ನಿಲ್ಲುವುದೂ ಅಸಾಧ್ಯವಾಗಿದೆ. ಸ್ಥಳೀಯಾಡಳಿತ ಸಮಸ್ಯೆಗೆ ಮುಕ್ತಿ ಕಾಣಿಸುವ ಜವಾಬ್ದಾರಿ ತೋರಬೇಕಾಗಿದೆ.
– ಗಣೇಶ್, ವ್ಯಾಪಾರಿ