Advertisement

ಎಟಿಎಂ ಕಾರ್ಡ್‌ ಪಡೆದು ವಂಚನೆ; ಇಬ್ಬರ ಸೆರೆ

06:40 AM Feb 06, 2019 | Team Udayavani |

ಬೆಂಗಳೂರು: ಮಾಲೀಕರ ನಂಬಿಕೆ ಗಳಿಸಿ ಅವರ ಎಟಿಎಂ ಕಾರ್ಡ್‌ ಪಡೆದು ಆನ್‌ಲೈನ್‌ ಮೂಲಕ ಸಾವಿರಾರು ರೂ. ಹಣ ವಂಚಿಸಿದ ಇಬ್ಬರು ಕಾರು ಚಾಲಕರು ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ದಾವಣಗೆರೆ ಜಿಲ್ಲೆ ಹೊನ್ನಳ್ಳಿ ತಾಲೂಕಿನ ಸಿ.ನಾಗರಾಜ (30) ಮತ್ತು ಚನ್ನಪಟ್ಟಣ ತಾಲೂಕಿನ ಎಚ್‌.ಎಸ್‌.ಸಚಿನ್‌(23) ಬಂಧಿತರು. ಆರೋಪಿಗಳು ದೇವಿನಗರದ ನಿವಾಸಿ 79 ವರ್ಷದ ಮಹಿಳೆಗೆ ವಂಚಿಸಿದ್ದು, ಬಂಧಿತರಿಂದ 47 ಸಾವಿರ ರೂ. ಹಣ ವಶಪಡಿಸಿಕೊಳ್ಳಲಾಗಿದೆ.

ನಾಗರಾಜ್‌ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದು, ಸಚಿನ್‌ ಡಿಪ್ಲೊಮಾ ಓದಿದ್ದಾನೆ. ದೇವಿನಗರದಲ್ಲಿ ವಾಸವಾಗಿದ್ದಾರೆ. ಇಬ್ಬರು ಪರಸ್ಪರ ಸ್ನೇಹಿತರಾಗಿದ್ದು, ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ನಾಗರಾಜ್‌ ದೇವಿನಗರದ ನಿವಾಸಿ ದೂರುದಾರ ಮಹಿಳೆಯ ಕಾರು ಚಾಲಕನಾಗಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಈ ವೇಳೆ ಅವರ ವಿಶ್ವಾಸಗಳಿಸಿಕೊಂಡಿದ್ದ.

ಮತ್ತೂಂದೆಡೆ ಮಹಿಳೆ ಕೂಡ ತಮ್ಮ ಎಟಿಎಂ ಕಾರ್ಡ್‌ ಮತ್ತು ಮೊಬೈಲ್‌ನ್ನು ಆರೋಪಿ ಬಳಿ ಕೊಟ್ಟಿದ್ದರು. ಇದನ್ನೆ ದುರುಪಯೋಗ ಪಡಿಸಿಕೊಂಡ ನಾಗರಾಜ, ಮಹಿಳೆಯ ಲಕ್ಷಿ ವಿಲಾಸ ಬ್ಯಾಂಕಿನ ಎಟಿಎಂ ಕಾರ್ಡ್‌ನ ಎರಡು ಬದಿಯ ಫೋಟೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು, ತನ್ನ ಸ್ನೇಹಿತ ಸಚಿನ್‌ಗೆ ಕಳುಹಿಸಿದ್ದ.

ಪೇಟಿಯಂ ಮೂಲಕ ಹಣ ವರ್ಗಾವಣೆ: ಈ ಮಧ್ಯೆ ನಾಗರಾಜು ಪ್ರತಿನಿತ್ಯ ಕಾರ್ಯಚಟುವಟಿಕೆಗಳಿಗಾಗಿ ಮಹಿಳೆಯ ಎಟಿಎಂ ಕಾರ್ಡ್‌ ಹಾಗೂ ಮೊಬೈಲ್‌ನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದ. ಈ ವೇಳೆ ಮತ್ತೂಬ್ಬ ಆರೋಪಿ ಸಚಿನ್‌, ಮಹಿಳೆಯ ಎಟಿಎಂ ಕಾರ್ಡ್‌ ಬಳಸಿಕೊಂಡು ತನ್ನ ಪೇಟಿಯಂ ಖಾತೆಗೆ ಒಂದು ತಿಂಗಳ ಅವಧಿಯಲ್ಲಿ ಒಂಬತ್ತು ಬಾರಿ ಒಟ್ಟು 47 ಸಾವಿರ ರೂ. ಹಣ ವರ್ಗಾಹಿಸಿಕೊಂಡಿದ್ದಾನೆ.

Advertisement

ಮತ್ತೂಂದೆಡೆ ಪ್ರತಿ ಬಾರಿ ಹಣ ವರ್ಗಾವಣೆ ವೇಳೆ ಮಹಿಳೆ ಮೊಬೈಲ್‌ ನಂಬರ್‌ಗೆ ಬರುತ್ತಿದ್ದ ಓಟಿಪಿ ನಂಬರ್‌ ಅನ್ನು ಆರೋಪಿ ನಾಗರಾಜು ಸ್ನೇಹಿತ ಸಚಿನ್‌ ತಿಳಿಸುತ್ತಿದ್ದ. ಈ ಮೂಲಕ ಇಬ್ಬರು ಆರೋಪಿಗಳು ಮಹಿಳೆಗೆ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಈ ಸಂಬಂಧ ವಂಚನೆಗೊಳಗಾದ ಮಹಿಳೆ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ನಾಗರಾಜ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಸೈಬರ್‌ ಕ್ರೈಂ ಪೊಲೀಸರ ಮನವಿ: ಸಾರ್ವಜನಿಕರು ಯಾವುದೇ ವ್ಯಕ್ತಿಗೆ ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್‌ನ ಖಾತೆಯ ವಿವರ, ಎಟಿಎಂ ಕಾರ್ಡ್‌, ಆನ್‌ಲೈನ್‌ ಬ್ಯಾಂಕಿಗೆ ಅಧಿಕೃತವಾಗಿ ನೊಂದಣಿಯಾದ ಮೊಬೈಲ್‌ ಸಂಖ್ಯೆಯುಳ್ಳ ಮೊಬೈಲ್‌ ನೀಡಬಾರದು. ಕೆಲವೊಮ್ಮೆ ನಿಮ್ಮ ಗಮನಕ್ಕೆ ಬಾರದೆ ನಂಬಿಕೆ ದ್ರೋಹವೆಸಗಿ ಹಣ ವರ್ಗಾವಣೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸೈಬರ್‌ ಕ್ರೈಂ ಪೊಲೀಸರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next