Advertisement

Hospitalised: ನೀರಿಗಾಗಿ ಉಪವಾಸ: ಹದಗೆಟ್ಟ ಆರೋಗ್ಯ… ಆಸ್ಪತ್ರೆ ದಾಖಲಾದ ಸಚಿವೆ ಅತಿಶಿ

08:03 AM Jun 25, 2024 | Team Udayavani |

ನವದೆಹಲಿ: ನೀರಿಗಾಗಿ ಕಳೆದ ಐದು ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ದೆಹಲಿಯ ಜಲ ಸಚಿವೆ ಅತಿಶಿ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Advertisement

ದೆಹಲಿಯಲ್ಲಿ ನೀರಿನ ಅಭಾವ ತಲೆದೋರಿದ ನಿಟ್ಟಿನಲ್ಲಿ ತಮ್ಮ ಪಾಲಿನ ನೀರು ಕೊಡುವಂತೆ ಪಕ್ಕದ ರಾಜ್ಯಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸಚಿವೆ ಅತಿಶಿ ಅವರು ನೀರು ಕೊಡುವವರೆಗೂ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು ಇಂದು ಉಪವಾಸ ಸತ್ಯಾಗ್ರಹ ಐದನೇ ದಿನಕ್ಕೆ ಕಾಲಿಟ್ಟಿದ್ದು ಈ ನಡುವೆ ಅತಿಶಿ ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಮಧ್ಯರಾತ್ರಿ 43ಕ್ಕೆ ಇಳಿದಿದೆ ಮತ್ತು ಮುಂಜಾನೆ 3.00 ಗಂಟೆಗೆ 36 ಕ್ಕೆ ತಲುಪಿದೆ ಎಂದು ಆಮ್ ಆದ್ಮಿ ಪಕ್ಷವು ತಿಳಿಸಿದೆ. ರಕ್ತದಲ್ಲಿನ ಸಕ್ಕರೆಯ ಈ ಮಟ್ಟ ಕುಸಿತವು ಆತಂಕಕಾರಿಯಾಗಿದೆ, ಆದ್ದರಿಂದ ವೈದ್ಯರ ಸಲಹೆಯ ಮೇರೆಗೆ ಅವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಯಿತು.

ಈ ಕುರಿತು ಆಪ್ ‘X’ ನಲ್ಲಿ ಸಚಿವೆ ಅತಿಶಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ, ನೀರಿಗಾಗಿ ಸಚಿವೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದ್ದು ಕಳೆದ ಐದು ದಿನಗಳಿಂದ ಸಚಿವೆ ಏನನ್ನೂ ತಿಂದಿಲ್ಲ ಹಾಗಾಗಿ ಅವರ ರಕ್ತದಲ್ಲಿ ಸಕ್ಕಲ್ ಅಂಶ ಕಡಿಮೆಯಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Horoscope: ಈ ರಾಶಿಯವರಿಗೆ ಉದ್ಯೋಗ ಸ್ಥಾನದಲ್ಲಿ ಕೆಲಸಗಳ ಮರು ಹಂಚಿಕೆಯಾಗಲಿದೆ

 

Advertisement

🚨 Water Minister Atishi's health deteriorates 🚨

Her blood sugar level dropped to 43 at midnight and to 36 at 3 AM, after which LNJP Hospital doctors advised immediate hospitalization. She has not eaten anything for the last five days and is on an indefinite hunger strike… pic.twitter.com/nl5iTfnwnT

— AAP (@AamAadmiParty) June 24, 2024

Advertisement

Udayavani is now on Telegram. Click here to join our channel and stay updated with the latest news.

Next