ಪ್ರಯಾಗ್ ರಾಜ್: ಉಮೇಶ್ ಪಾಲ್ ಕಿಡ್ನಾಪ್ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಮತ್ತು ಮಾಜಿ ಸಂಸದ ಅತೀಖ್ ಅಹಮದ್ ಸೇರಿ ಎಲ್ಲಾ ಹತ್ತು ಮಂದಿ ಆರೋಪಿಗಳು ದೋಷಿ ಎಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.
2006ರಲ್ಲಿ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರ ಅಪಹರಣ ಮಾಡಲಾಗಿತ್ತು.
ಜನವರಿ 25, 2005 ರಂದು ಬಿಎಸ್ ಪಿ ಶಾಸಕ ರಾಜು ಪಾಲ್ ಅವರ ಹತ್ಯೆಯ ನಂತರ, ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಉಮೇಶ್ ಪಾಲ್ ಅವರು ಕೊಲೆಗೆ ಸಾಕ್ಷಿಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು.
ಇದನ್ನೂ ಓದಿ:ಡೈಲಿ ಡೋಸ್; ಪ್ರಣಾಳಿಕೆ ಮೇಲೆ ಶೀನಪ್ಪನವರ ಅನಾಲಿಸಿಸ್;ಈ 200 ಯೂನಿಟ್ ಅಂದ್ರೆ ಎಷ್ಟಪ್ಪಾ?
ಉಮೇಶ್ ಪಾಲ್ ಅವರನ್ನು 2006ರ ಫೆಬ್ರವರಿ 28 ರಂದು ಬಂದೂಕು ತೋರಿಸಿ ಅಪಹರಿಸಲಾಗಿತ್ತು. ಜುಲೈ 5, 2007 ರಂದು ಅಹ್ಮದ್, ಅವರ ಸಹೋದರ ಮತ್ತು ನಾಲ್ಕು ಅಪರಿಚಿತ ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಫೆಬ್ರವರಿ 24 ರಂದು ಉಮೇಶ್ ಪಾಲ್ ಅವರ ಪ್ರಯಾಗರಾಜ್ ನಿವಾಸದ ಹೊರಗೆ ಗುಂಡೇಟಿಗೆ ಒಳಗಾಗಿದ್ದರು. ಅತಿಖ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರು ಉಮೇಶ್ ಪಾಲ್ ಅವರನ್ನು ಕೊಲ್ಲುವ ಸಂಚಿನಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ.