Advertisement

Atikaya Movie; ಹೊಸ ಲುಕ್‌ ನಲ್ಲಿ ನಿರೂಪ್‌ ಭಂಡಾರಿ

05:17 PM Aug 22, 2024 | Team Udayavani |

ರಂಗಿತರಂಗ ಮೂಲಕ ಬೆಳಕಿಗೆ ಬಂದು ಕ್ಲಾಸ್‌ ಹೀರೋ ಎನಿಸಿಕೊಂಡಿದ್ದ ನಿರೂಪ್‌ ಭಂಡಾರಿ, ಇದೀಗ ಮಾಸ್‌ ಲುಕ್‌ನಲ್ಲಿ ಕಾಣಿಸಿ ಕೊಂಡಿದ್ದಾರೆ. “ಅತಿಕಾಯ’ ಎನ್ನುವ ಹೊಸ ಸಿನಿಮಾದಲ್ಲಿ ರಗಡ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಅತಿಕಾಯ’ ಸಿನಿಮಾ ನಾಗರಾಜ್‌ ಪೀಣ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ.

Advertisement

ಈ ಹಿಂದೆ ಪದೇ ಪದೇ, ನಮಕ್‌ಹರಾಮ್‌ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗರಾಜ್‌ ಪೀಣ್ಯ, ಸಣ್ಣ ಗ್ಯಾಪ್‌ ಬಳಿಕ “ಅತಿಕಾಯ’ ಮಾಡುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್‌ ಮುಗಿಸಿದ್ದಾರೆ. ಮತ್ತೂಂದು ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ ಚಿತ್ರತಂಡ.ಈವರೆಗೂ ಬೆಂಗಳೂರಿನ ಜನಜಂಗುಳಿ ಪ್ರದೇಶಗಳಲ್ಲೇ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ನೈಜವಾಗಿ ಮೂಡಿ ಬರಬೇಕೆಂಬ ಕಾರಣದಿಂದ ನೈಜವಾಗಿಯೇ ಶೂಟ್‌ ಮಾಡಲಾಗಿದೆಯಂತೆ.

ಈ ಚಿತ್ರಕ್ಕಾಗಿ ನಿರೂಪ್‌ ಭಂಡಾರಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ವರ್ಕೌಟ್  ಮಾಡಿ ದೇಹ ದಂಡಿಸಿದ್ದಾರೆ. ಪಾತ್ರಕ್ಕಾಗಿ ಗೆಟಪ್‌ ಸಹ ಬದಲಾಯಿಸಿ ಕೊಂಡಿದ್ದಾರೆ. ಡೈಲಾಗ್‌ ಡೆಲಿವರಿ ಕೂಡ ಭಿನ್ನವಾಗಿರಲಿದೆಯಂತೆ. ಚಿತ್ರಕ್ಕೆ ಉದಯಲೀಲ ಛಾಯಾಗ್ರಹಣ, ಶ್ರೀನಿವಾಸ್‌ ಪಿ ಬಾಬು ಸಂಕಲನ, ಸತೀಶ್‌ ಆರ್ಯನ್‌ ಸಂಗೀತ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next