Advertisement

ಕ್ರೀಡಾಪಟುಗಳಿಗೆ ಉತ್ತೇಜನ ಅಗತ್ಯ: ಕಿರ್ಮಾನಿ

01:04 AM Jan 03, 2022 | Team Udayavani |

ಉಡುಪಿ: ಭವಿಷ್ಯದ ಕ್ರೀಡಾಪಟುಗಳನ್ನು ಉತ್ತೇಜಿಸುವುದು ಮುಖ್ಯ ಕರ್ತವ್ಯವಾಗಿದೆ ಎಂದು ಮಾಜಿ ಕ್ರಿಕೆಟಿಗ ಪದ್ಮಶ್ರೀ ಸಯ್ಯದ್‌ ಕಿರ್ಮಾನಿ ಹೇಳಿದರು.

Advertisement

ಕ್ರೀಡಾ ಭಾರತಿ ಉಡುಪಿ ಜಿಲ್ಲೆ ಆಶ್ರಯದಲ್ಲಿ ಉಡುಪಿಯಲ್ಲಿ ರವಿವಾರ ನಡೆದ “ಜಿಲ್ಲಾ ಕ್ರೀಡಾ ಸಮ್ಮೇಳನ’ದ ಸಮಾರೋಪದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಯುವಜನತೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಉತ್ತಮ ಅವಕಾಶಗಳಿವೆ. ಮಕ್ಕಳಲ್ಲಿ ಯಾವ ಕ್ರೀಡೆ ಯ ಬಗ್ಗೆ ಆಸಕ್ತಿ ಇದೆ ಎಂದು ಗುರುತಿಸಿ ಅವರಿಗೆ ಅವಕಾಶ ಮತ್ತು ಪ್ರೋತ್ಸಾಹವನ್ನು ಹೆತ್ತವರು ನೀಡಬೇಕಾಗಿದೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಕ್ರೀಡಾಭಾರತಿ ಶ್ರಮ ಮತ್ತು ಶಕ್ತಿಯ ಮೂಲಕ ಕ್ರೀಡೆಗೆ ಸ್ಫೂರ್ತಿ ನೀಡುವ ಕೆಲಸ ಮಾಡುತ್ತಿದೆ ಎಂದರು. ಕ್ರೀಡೆಯಿಂದ ಚರಿತ್ರೆ ನಿರ್ಮಾಣ, ಚರಿತ್ರೆಯಿಂದ ರಾಷ್ಟ್ರ ನಿರ್ಮಾಣ ಎನ್ನುವ ಆಶಯದೊಂದಿಗೆ ಸಂಸ್ಥೆ ಮುನ್ನಡೆಯುತ್ತಿದೆ ಎಂದು ಕ್ರೀಡಾ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಮಹೇಂದ್ರ ಪ್ರಸಾದ್‌ ಮೈಸೂರು ತಿಳಿಸಿದರು.

ಇದನ್ನೂ ಓದಿ:ರೀಲ್‌ ಲೈಫ್ ಹೀರೋಗೆ ರಿಯಲ್‌ ಲೈಫ್ ಹೀರೋ ಗೌರವ

Advertisement

ಜಿಲ್ಲಾ ಕ್ರೀಡಾ ಸಮ್ಮೇಳನದ ಅಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್‌ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್‌ ಕೂಡ್ಲು, ಕ್ರೀಡಾಪಟು ರೋಹಿತ್‌ ಕುಮಾರ್‌ ಕಟೀಲು, ಶಾಸಕ ಕೆ.ರಘುಪತಿ ಭಟ್‌, ಹೊರನಾಡ ಕನ್ನಡಿಗರ ಸಂಘಟಕ ಬಾಲಕೃಷ್ಣ ಭಂಡಾರಿ ಕುಂಬಳೆ, ಕಾರ್ಯಾಧ್ಯಕ್ಷ ಮಹೇಶ್‌ ಠಾಕೂರ್‌, ಕಾರ್ಯದರ್ಶಿ ಲಿಂಗಯ್ಯ, ವಿಭಾಗ ಸಂಯೋಜಕ ಪ್ರಸನ್ನ ಶೆಣೈ ಕಾರ್ಕಳ, ಶ್ರೀಶ ನಾಯಕ್‌ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ಕ್ರೀಡಾ ಭಾರತಿ ಉಪಾಧ್ಯಕ್ಷ ದಿನೇಶ್‌ ಶೆಟ್ಟಿ ಸ್ವಾಗತಿಸಿ ಅಧ್ಯಕ್ಷ ಬಿ. ವಸಂತ ಶೆಟ್ಟಿ ವಂದಿಸಿದರು. ಕೆ.ಸಿ. ರಾಜೇಶ್‌ ಕುಂದಾಪುರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next