Advertisement

ಹೆಂಡತಿ ಪ್ರಾಕ್ಟೀಸ್‌ಗೆ ಕ್ರೀಡಾಪಟುಗಳು ಸ್ಟೇಡಿಯಂನಿಂದ ಹೊರಕ್ಕೆ

02:00 PM Oct 28, 2017 | Team Udayavani |

ಬೆಂಗಳೂರು: ಸ್ಟೇಡಿಯಂನಲ್ಲಿ ನನ್ನ ಪತ್ನಿ ಪ್ರಾಕ್ಟೀಸ್ ಮಾಡುವ ಸಂದರ್ಭದಲ್ಲಿ ಯಾರೂ ಒಳಗಡೆ ಇರಬಾರದು ಎಂದು ಹೆಂಡತಿಗೋಸ್ಕರ ಕ್ರೀಡಾಪಟುಗಳನ್ನು ಸ್ಟೇಡಿಯಂನಿಂದ ಹೊರ ಹೋಗಿ ಎಂದು ಹೇಳಿ ರಾಷ್ಟ್ರೀಯ ಕ್ರೀಡಾಪಟುಗಳನ್ನು  ಐಪಿಎಸ್‌ ಅಧಿಕಾರಿ ಅವಮಾನ ಮಾಡಿದ್ದಾರೆ ಎಂದು ವರದಿಯಾಗಿದೆ.

Advertisement

ಕಂಠೀರವ ಸ್ಟೇಡಿಯಂ ನಿರ್ದೇಶಕ ಅನುಪಮ್ ಅಗರವಾಲ್ ರಾಷ್ಟ್ರೀಯ ಕ್ರೀಡಾಪಟುಗಳ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಹೆಂಡತಿಗೋಸ್ಕರ ಕ್ರೀಡಾಪಟುಗಳನ್ನು ಸ್ಟೇಡಿಯಂನಿಂದ ಹೊರ ಹೋಗಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಹೋಂಗಾರ್ಡ್‍ಗಳನ್ನು ಕರೆದು ಕ್ರೀಡಾಪಟುಗಳನ್ನು ಹೊರ ಹಾಕಿಸಿದ್ದಾರೆ  ಎಂದು ತಿಳಿದು ಬಂದಿದೆ.

ಇದರಿಂದ ಕಂಗಾಲಾದ ಕ್ರೀಡಾಪಟುಗಳು ಕಂಠೀರವ ಸ್ಟೇಡಿಯಂ ಬಿಟ್ಟು ಕಬ್ಬನ್ ಪಾರ್ಕ್‍ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈ ಎಲ್ಲಾ ಅಥ್ಲೆಟಿಕ್ ಕ್ರೀಡಾಪಟುಗಳು ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. 

ಅನುಪಮ್ ಅಗರವಾಲ್ ಫೋನ್ ಮಾಡಿ ಯಾವುದೇ ಪೊಲೀಸ್‌ ಠಾಣೆಯಲ್ಲೂ ದೂರು ಸ್ವೀಕಾರ ಮಾಡಬೇಡಿ ಅಂತ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next