Advertisement

ಕಬಡ್ಡಿಗೆ ಪ್ರೋತ್ಸಾಹ ಅಗತ್ಯ: ಬಸರಗಿ

09:54 AM Feb 13, 2019 | Team Udayavani |

ಅಥಣಿ: ಆಧುನಿಕತೆಯ ಭರಾಟೆಯಲ್ಲಿ ಅಳಿವಿನಂಚಿನಲ್ಲಿರುವ ಗ್ರಾಮೀಣ ಸೊಗಡಿನ ದೇಶಿ ಕ್ರೀಡೆ ಕಬಡ್ಡಿಗೆ ಎಲ್ಲರೂ ಪ್ರೋತ್ಸಾಹ ನೀಡುವುದು ಅತ್ಯವಶ್ಯ ಎಂದು ಅಥಣಿ ವಲಯ ಡಿವೈಎಸ್‌ಪಿ ಆರ್‌.ಬಿ. ಬಸರಗಿ ಹೇಳಿದರು.

Advertisement

ಇಲ್ಲಿನ ಶ್ರೀಮಂತ ಭೋಜರಾಜ ಕ್ರೀಡಾಂಗಣದಲ್ಲಿ ಜಾಧವಜಿ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಮೂರು ದಿನಗಳ ರಾಷ್ಟ್ರಮಟ್ಟದ ಆಹ್ವಾನಿತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೂ ಕ್ರೀಡಾ ಮನೋಭಾವದೊಂದಿಗೆ ಸ್ಫೂರ್ತಿದಾಯಕ ಆಟವನ್ನಾಡಿ ಕ್ರೀಡೆಯ ವೈಭವ ಹೆಚ್ಚಿಸಬೇಕು. ಪಟ್ಟಣದಲ್ಲಿ ಮೂದಲಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ನಡೆಸುತ್ತಿರುವ ಜೆ.ಇ.ಸಂಸ್ಥೆಯ ಕಾರ್ಯ ಶ್ಲಾಘನೀಯ ಮತ್ತು ಹೆಮ್ಮೆಯ ವಿಷಯ ಎಂದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಅರವಿಂದ ದೇಶಪಾಂಡೆ ಮಾತನಾಡಿ, ಪ್ರೊ ಕಬಡ್ಡಿ ಪಂದ್ಯಾವಳಿಯಿಂದ ಕಬಡ್ಡಿಗೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಸಿಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಮೂರು ದಿನಗಳ ಪಂದ್ಯಾವಳಿಗಳಿಂದ ಸಂಸ್ಥೆಯ ವಿದ್ಯಾರ್ಥಿಗಳು ಪ್ರೊ| ಕಬಡ್ಡಿವರೆಗೆ ಹೋಗುವಂತಾಗಲಿ ಎಂದರು.

ಪ್ರೋ ಕಬಡ್ಡಿ ಆಟಗಾರ ಕಾಸಿಲಿಂಗ ಅಡಿಕೆ ಮಾತನಾಡಿ, ದೇಶಿ ಕ್ರೀಡೆಯಾದ ಕಬ್ಬಡಿಗೆ ಸಾರ್ವಜನಿಕರೊಂದಿ ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡುವುದು ಅತ್ಯವಶ್ಯವಾಗಿದೆ. ಕಬಡ್ಡಿಯಿಂದ ಮನೋಬಲ ಹೆಚ್ಚಿಸಿಕೊಳ್ಳಬಹುದು ಎಂದರು.

ಪಂದ್ಯಾವಳಿಯ ಸಂಘಟನಾ ಸಮಿತಿ ಅಧ್ಯಕ್ಷ ಆರ್‌.ಬಿ. ದೇಶಪಾಂಡೆ ಮಾತನಾಡಿ, ಪಟ್ಟಣದ ಜನರಲ್ಲಿ ಕಬಡ್ಡಿ ಪಂದ್ಯಾವಳಿಯ ಕುರಿತು ಹೆಚ್ಚಿನ ಆಸಕ್ತಿ ಬೆಳೆಯಲಿ ಮತ್ತು ವಿದ್ಯಾರ್ಥಿಗಳು ಈ ದೇಶ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲಿ ಎಂಬ ಉದ್ದೇಶಕ್ಕಾಗಿ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದರು. ಡಾ| ರಾಮ.ಕುಲಕರ್ಣಿ, ಶ್ರೀಮಂತ ಉಜ್ವಲಸಿಂಗ ಪವಾರದೇಸಾಯಿ, ಸಿ.ಎಸ್‌.ಬರಗಾಲಿ, ಡಾ| ಪಿ.ಪಿ. ಮಿರಜಕರ, ಸಿ.ಬಿ. ಪಡನಾಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next