ಅಥಣಿ: ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 15, ಬಿಜೆಪಿ 9 ಹಾಗೂ ಮೂವರು ಸ್ವತಂತ್ರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೇಸ್ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಬಿಜೆಪಿ ಭ್ರಷ್ಟಾಚಾರಕ್ಕೆ ಬೇಸತ್ತು ಜನ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ಮೂಲಕ ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಶಾಸಕ ಕುಮಠಳ್ಳಿ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರಯತ್ನದಿಂದ ಪಕ್ಷ ಗೆಲುವು ಸಾಧಿಸಿದೆ ಎಂದರು.
ಚಿಕ್ಕೋಡಿ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಅಸ್ಲಂ ನಾಲಬಂದ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಸದಾಶಿವ ಬುಟಾಳಿ, ದಿಗ್ವಿಜಯ ದೇಸಾಯಿ, ಬಸವರಾಜ ಬುಟಾಳಿ, ಅನಿಲ ಸುಣದೋಳಿ, ಆಶಾ ಐಹೊಳಿ, ಸುನೀಲ ಸಂಕ, ದರ್ಯಾಪ್ಪ ಟಕ್ಕನವರ, ರಾವಸಾಬ ಐಹೊಳಿ, ಪ್ರಶಾಂತ ಐಹೊಳಿ, ಪಾಂಡು ಐಹೊಳಿ, ಮಲ್ಲಿಕಾರ್ಜುನ ಬುಟಾಳಿ, ಮಯುರ ಸಿಂಗೆ, ಸಯ್ಯದ ಅಮೀನ ಗದ್ಯಾಳ, ವಿಲೀನ ಯಳಮಲ್ಲೆ ಸೇರಿದಂತೆ ಅನೇಕರು ಇದ್ದರು.
ತಾಯಿ-ಮಗ, ದಂಪತಿ ಗೆಲುವು: ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಬುಟಾಳಿ ಹಾಗೂ ಅವರ ತಾಯಿ ಇಬ್ಬರೂ ಜಯಗಳಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನ ಐಹೊಳೆ ದಂಪತಿ ಸಹ ಜಯಗಳಿಸಿದ್ದಾರೆ.
ಕೊರೊನಾ ಸ್ಪಂದನೆ ತಂದ ಜಯ: ಕೊರೊನಾ ಸಂದರ್ಭದಲ್ಲಿ ಅಕ್ಕಪಕ್ಕದ ಜನರ ಕಷ್ಟಗಳಿಗೆ ಸ್ಪಂದಿಸಿದ್ದ ವಿಷ್ಣು ಗಡದೆ ಎಂಬ ಯುವಕನ ತಾಯಿಯನ್ನು ಜನರೇ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದಾರೆ.
ವಿಜೇತರು: ವಾರ್ಡ್ ನಂ.1: ಬಿಜೆಪಿಯ ಬಿಬಿಜಾನ್ ತಾಂಬೋಳಿ, 2: ಬಿಜೆಪಿ ಕಲ್ಲೆಶ ಮಡ್ಡಿ, 3: ಬಿಜೆಪಿ ಸಂತೋಷ ಸಾವಡಕರ, 4: ಸ್ವತಂತ್ರ ಅಭ್ಯರ್ಥಿ ದತ್ತಾ ವಾಸ್ಟರ್, 5: ಕಾಂಗ್ರೆಸ್ ನ ಬೀರಪ್ಪ ಯಂಕಚ್ಚಿ, 6: ಕಾಂಗ್ರೆಸ್‌ನ ಉದಯ ಸೋಳಸಿ, 7: ಕಾಂಗ್ರೆಸ್‌ನ ಸಯ್ಯದ್ ಗದ್ಯಾಳ, 8: ಪಕ್ಷೇತರ ದಿಲೀಪ ಲೊಣಾರೆ, 9: ಬಿಜೆಪಿಯ ಲತಾ ಬಜಂತ್ರಿ, 10: ಕಾಂಗ್ರೆಸ್‌ನ ರಮೇಶ್ ಪವಾರ, 11: ಕಾಂಗ್ರೆಸ್‌ನ ರಾವಸಾಬ್ ಐಹೊಳೆ, 12: ಬಿಜೆಪಿಯ ಬಸವರಾಜ ಪಾಟೀಲ, 13: ಸ್ವತಂತ್ರ ಅಭ್ಯರ್ಥಿ ಮಲ್ಲೇಶ ಹುದ್ದಾರ.
14: ಬಿಜೆಪಿಯ ಮೃಣಾಲಿನಿ ದೇಶಪಾಂಡೆ, 15: ಕಾಂಗ್ರೆಸ್‌ನ ಪ್ರಮೋದ ಬಿಳ್ಳೂರ, 16: ಕಾಂಗ್ರೆಸ್‌ನ ಮಲ್ಲಿಕಾರ್ಜುನ ಬುಟಾಳಿ, 17: ಕಾಂಗ್ರೆಸ್‌ನ ಶಿವಲೀಲಾ ಬುಟಾಳಿ, 18: ಕಾಂಗ್ರೆಸ್‌ನ ರುಕ್ಮಾಬಾಯಿ ಗಡದೆ, 19: ಕಾಂಗ್ರೆಸ್‌ನ ರಿಯಾಜ್ ಸನದಿ, 20: ಬಿಜೆಪಿಯ ರಾಜಶೇಖರ ಗುಡೋಡಗಿ, 21: ಕಾಂಗ್ರೆಸ್‌ನ ವಿಲೀನರಾಜ ಯಳಮಲ್ಲೆ, 22: ಬಿಜೆಪಿಯ ವಿದ್ಯಾ ಬುಲಬುಲೆ, 23:ಕಾಂಗ್ರೆಸ್‌ನ ಜುಲೆಖಾಬಿ ಖೆಮಲಾಪೂರ, 24: ಕಾಂಗ್ರೆಸ್‌ನ ಬಸವರಾಜ ಹಳ್ಳದಮಳ, 25: ಕಾಂಗ್ರೆಸ್‌ನ ವಿದ್ಯಾ ಐಹೊಳೆ, 26: ಬಿಜೆಪಿಯ ಬಸವರಾಜ ನಾಯಕ, 27: ಕಾಂಗ್ರೆಸ್‌ನ ಸುನೀತಾ ಬಡಕಂಬಿ.