Advertisement
ಆದರೆ ಅವರು ಸಂಗೀತದ ಬಗ್ಗೆಯೂ ಅಪಾರ ಒಲವು ಇರಿಸಿಕೊಂಡಿದ್ದರೆಂಬುದು ಅನೇಕರಿಗೆ ಗೊತ್ತಿಲ್ಲ. ಅದೃಷ್ಟವಶಾತ್ ಈ ಸತ್ಯವನ್ನು ಹತ್ತಿರದಿಂದ ಬಲ್ಲವನಾಗಿದ್ದೆ. ಅವರ ಜತೆ ನಾನಿದ್ದ ಸಂದರ್ಭದಲ್ಲೇ ಅವರು ಸಂಗೀತ ಕೇಳಬೇಕೆನ್ನುವ ಇಚ್ಚೆ ವ್ಯಕ್ತಪಡಿಸಿದ ಸಂದರ್ಭವನ್ನು ನಾನು ಇಲ್ಲಿ ನಿಮ್ಮ ಮುಂದಿರುಸುತ್ತಿದ್ದೇನೆ.
Related Articles
Advertisement
ಅದಕ್ಕೆ ವಾಜಪೇಯಿ, ಓಹ್, ಅವರು(ಎಂ.ಎಸ್.) ಸಾಕ್ಷಾತ್ ಶಾರದಾ ದೇವಿ. ಅವರ ಗಾಯನವನ್ನು ಕೇಳಬೇಕು ಎಂದರು. ನಾವೆಲ್ಲ ಸಂಗೀತ ಕಛೇರಿ ನಡೆಯಲಿದ್ದ ಮದ್ರಾಸ್ ಸಂಗೀತ ಅಕಾಡೆಮಿಗೆ ತೆರಳಿದೆವು. ಎಂದಿನಂತೆ ಉಭಯ ಕುಶಲೋಪರಿಯ ನಂತರ ಸಂಗೀತ ಕಛೇರಿ ಆರಂಭವಾ ಯಿತು. ಕಛೇರಿ ನಡೆಯುತ್ತಿದ್ದ ಮಧ್ಯದಲ್ಲಿ ಸಂಘಟಕರು ತಮಗೆ ಯಾವುದಾದರೂ ನಿರ್ದಿಷ್ಟ ಗೀತೆ ಕೇಳಬೇಕೆಂದಿದೆಯೇ ಎಂದು ವಾಜಪೇಯಿ ಅವರನ್ನು ಕೇಳಿದರು. ಅದಕ್ಕೆವಾಜಪೇಯಿ ಅವರು ಯಾವುದೇ ಮೀರಾ ಭಜನೆ ಮತ್ತು ರಾಜಾಜಿ ಎಂದು ಜನಪ್ರಿಯರಾಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಯಾವುದೇ ರಚನೆ ಮತ್ತು ಕಂಚಿ ಪರಮಾಚಾರ್ಯರ ಮೈತ್ರೀಂ ಭಜತಾ ಹಾಡುವಂತೆ ಕೋರಿದರು. ಸುಬ್ಬುಲಕ್ಷ್ಮೀ ಅವರು ಹರಿ ತುಂ ಹರೋ ಎಂಬ ಸುಂದರ ಮೀರಾ ಭಜನೆ, ರಾಜಾಜಿ ಅವರ ಕುರೈ ಒಂಡ್ರುಮಿಲ್ಲೆ„ ಮತ್ತು ಕಂಚಿ ಪರಮಾಚಾರ್ಯರ ಮೈತ್ರೀಂ ಭಜತಾ ಗೀತೆಯನ್ನು ಅಂತರಂಗ ತಟ್ಟುವಂತೆ ಹಾಡಿ ಸಂಗೀತದ ರಸದೌತಣ ನೀಡಿದರು. ಕಛೇರಿ ಮುಗಿದು ವಾಜಪೇಯಿ ಅವರು ಸುಬ್ಬುಲಕ್ಷ್ಮೀ ಅವರಿಗೆ ಆನಂದ ಭಾಷ್ಪದೊಂದಿಗೆ ಧನ್ಯವಾದ ಹೇಳಿ ಹೊರಟರು. 1984-ಪುಣೆಯ ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಸ್ಮತಿ ಮಂದಿರದಲ್ಲಿ ಬಿಜೆಪಿ ರಾಷ್ಟ್ರೀಯ ಮಂಡಳಿ ಅಧಿವೇಶನ ನಡೆಯಿತು. ಅಧಿವೇಶನದಲ್ಲಿ ಪಾಲ್ಗೊಂಡಿದ್ದ ವಾಜಪೇಯಿ ಅವರು ಯಾವುದಾದರೂ ಉತ್ತಮ ಸಂಗೀತ ಕೇಳಬೇಕಿದೆ ಎಂದು ಸಂಘಟಕರಿಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಅಧಿವೇಶನದ ಸ್ಥಳಕ್ಕೆ ಸಂಗೀತ ಕಾರ್ಯಕ್ರಮ ನೀಡುವುದಕ್ಕಾಗಿ ಎರಡನೇ ದಿನ ಪ್ರಖ್ಯಾತ ಗಾಯಕ ಸುರೇಶ್ ವಾಡ್ಕರ್ ಆಗಮಿಸಿದರು. ತಮಗಾಗಿ ಯಾವುದಾ ದರೂ ನಿರ್ದಿಷ್ಟ ಹಾಡು ಬೇಕೆಂದರೆ ತಿಳಿಸಿ ಎಂದು ವಾಜಪೇಯಿ ಅವರಿಗೆ ವಾಡ್ಕರ್ ಹೇಳಿದರು. ಅದಕ್ಕೆ ವಾಜಪೇಯಿ, ತುಂ ಮುಝೆ ಅಪ್ ನೇ ಕ್ಷಿತಿಜ್ ಸೆ ಘೇರ್ ಕರ್ ಬಂಧೀ ಬನಾಲೋ ಹಾಡುವಂತೆ ಕೋರಿದರು. ಆ ಗೀತೆಯನ್ನು ವಾಡ್ಕರ್ ಸಂತಸ ದಿಂದಲೇ ಹಾಡಿದರು. ಸಂಗೀತ ಕಛೇರಿ ಮುಗಿಯು ತ್ತಿದ್ದಂತೆ ವಾಜಪೇಯಿ ಅವರ ಮುಖದಲ್ಲಿ ಒಂದು ರೀತಿಯ ಮನಸು ಹಗುರಾದ ಭಾವ ಕಂಡಿತು. 1985- ಇಂದಿರಾ ಗಾಂಧಿ ಅವರ ಹತ್ಯೆ ನಂತರ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲನುಭವಿಸಿತ್ತು. ಗ್ವಾಲಿಯರ್‌ನಲ್ಲಿ ಸ್ವತಃ ವಾಜಪೇಯಿ ಅವರೇ ಸೋತಿದ್ದರು. ಪಕ್ಷದ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬುವ ಸಲುವಾಗಿ ವಾಜಪೇಯಿ ಬೆಂಗಳೂರಿಗೆ ಬಂದಿದ್ದರು. ಆ ಸಮಯದಲ್ಲಿ ಬೆಂಗಳೂರು ನಗರ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ರಾಮಚಂದ್ರಗೌಡರು ಚಹಾ ಕೂಟಕ್ಕಾಗಿ ಸಂಜೆ ತಮ್ಮ ಮನೆಗೆ ಆಗಮಿಸುವಂತೆ ವಾಜಪೇಯಿ ಅವರನ್ನು ಆಹ್ವಾನಿಸಿದ್ದರು. ಅದು ಶೇಷಾದ್ರಿಪುರಂನ ಲಿಂಕ್ ರಸ್ತೆಯಲ್ಲಿರುವ ಆಂಜನೇಯ ಬ್ಲಾಕ್ ನ ಮೊದಲ ಬೀದಿಯಲ್ಲಿರುವ ಸಾಮಾನ್ಯ ಮನೆಯಾಗಿತ್ತು. ಹೆಸರಾಂತ ಹಿಂದೂಸ್ಥಾನಿ ಗಾಯಕಿ ಶ್ಯಾಮಲಾ ಜಿ. ಭಾವೆ ಅವರು ಕೂಡ ವಾಜಪೇಯಿ ಅವರನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದರು. ಅವರೂ ಓರ್ವ ಹಿಂದೂ ಸ್ಥಾನಿ ಸಂಗೀತದ ಗಾಯಕಿ ಎಂದು ಗೊತ್ತಾಗುತ್ತಲೇ ವಾಜಪೇಯಿ ಅವರು ತಮಗಾಗಿ ಒಂದು ಗೀತೆ ಹಾಡುವಂತೆ ಕೋರಿದರು. ಅವರು ಮಝಾ ದರುಶನ ಧೀರೇ ರಾಮ ಮರಾಠಿ ಅಭಂಗ್‌ವೊಂದನ್ನು ಹಾಡಿದರು. ಇದರಿಂದ ಸಂತುಷ್ಟರಾದ ವಾಜಪೇಯಿ ಅವರು ಶ್ಯಾಮಲಾ ಭಾವೆ ಅವರನ್ನು ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. 1989- ಸಿಯಾನ್ ಬಾಂಬೆ(ಈಗಿನ ಮುಂಬೈ)ಯಲ್ಲಿರುವ ಷಣ್ಮುಖಾನಂದ ಸಭಾಂಗಣದಲ್ಲಿ 1989ರ ಜೂನ್‌ನಲ್ಲಿ ಬಿಜೆಪಿ ಪೂರ್ಣಾಧಿವೇಶನ ನಡೆಯಿತು. ಅಧಿವೇಶನಕ್ಕೆ ಬಂದಿದ್ದ ವಾಜಪೇಯಿ ಅವರು ದೇಶದ ಅಪೂರ್ವ ಪ್ರತಿಭೆಯ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಭೇಟಿಯಾಗುವ ಇಚ್ಚೆ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಪೂರ್ಣಾಧಿವೇಶನದ ಸಂಪೂರ್ಣ ಉಸ್ತುವಾರಿ ಹೊತ್ತಿದ್ದ ಪ್ರಮೋದ್ ಮಹಾಜನ್ ಚರ್ಚ್ ಗೇಟ್ ಬಳಿಯಲ್ಲಿರುವ ಕೆ.ಸಿ. ಕಾಲೇಜ್ ಸಭಾಂಗಣದಲ್ಲಿ
ಸಂಗೀತ ಕಾರ್ಯಕ್ರಮ ಆಯೋಜಿಸಿದರು. ಈ ಸಂದರ್ಭದಲ್ಲಿ ಲತಾ ಮಂಗೇಶ್ಕರ್ ಅವರನ್ನು ಆಲಂಗಿಸಿದ ವಾಜಪೇಯಿ ಅವರು ತಮಗಾಗಿ ಕವಿ ಪ್ರದೀಪ್ ರಚಿಸಿ ಕೆ.ರಾಮಚಂದ್ರ ರಾಗಸಂಯೋಜನೆ ಮಾಡಿದ ಆಯೇ ಮೇರೆ ವತನ್ ಕೇ ಲೋಗೋ ಮತ್ತು ಮೊಘಲ್-ಎ-ಅಝಂನ ಪ್ಯಾರ್ ಕಿಯಾತೋಡರ್ ನಾ ಕ್ಯಾ ಎಂಬ ಎರಡು ಅಮರಗೀತೆಯಗಳನ್ನು ಹಾಡುವಂತೆ ಕೋರಿಕೊಂಡರು. ಲತಾ ಮಂಗೇಶ್ಕರ್ ಅವರು ಆಯೇ ಮೆರೇ ವತನ್ ಕೇ ಲೋಗೋ ಹಾಡುವಾಗ ವಾಜಪೇಯಿ ಅವರ ಕಣ್ಣಂಚು ತೇವಗೊಂಡಿತ್ತು. 2002- 2002ರ ಮೇ 10ರಂದು ಪ್ರತಿಭಾವಂತ ಕಲಾವಿದೆ ಶಬನಾ ಅಜ್ಮಿ ಅವರ ತಂದೆ ಕೈಫಿ ಅಜ್ಮಿ ಅವರು ಮುಂಬೈನಲ್ಲಿ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಪ್ರಧಾನಿ ಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ದೆಹಲಿಯಲ್ಲಿರುವ ಶಬನಾ ಅಜ್ಮಿ ಅವರ ನಿವಾಸಕ್ಕೆ ತೆರಳಿ ಕೈಫಿ ಅಜ್ಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಪತ್ರಕರ್ತರು ವಾಜಪೇಯಿ ಅವರಿಗೆ ಕೈಫಿ ಅಜ್ಮಿ ಅವರ ಯಾವ ಗೀತೆ ನಿಮಗೆ ಪ್ರಿಯವಾದದ್ದು ಎಂದು ಪ್ರಶ್ನಿಸಿದಾಗ, ವಾಜಪೇಯಿ ಅವರು ಅರೆಗಣ್ಣು ಮುಚ್ಚಿ ಯಾ ದಿಲ್ ಕಿ ಸುನೊ, ದುನಿಯಾವಾಲೋ, ಯಾ ಮುಜ್ಕೋ ಭಿಚ್ ಚುಪ್ ರೆಹನೇ ದೋ, ಹಮ್ಕೋ ಖುಷೀ ಕೈಸೇ ಕೆಹ್ದೋ ಎಂಬ ಅಮರಗೀತೆಯನ್ನು ನೆನಪಿಸಿದರು. 1966ರ ಅನುಪಮಾ ಎಂಬ ಹಿಂದಿ ಚಲನಚಿತ್ರದ ಈ ಗೀತೆಯ ಬಗ್ಗೆ ಹೇಳುವಾಗ ವಾಜಪೇಯಿ ಅವರ ಕಣ್ಣು ತುಂಬಿ ಬಂದಿತ್ತು. 1968ರಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು 1968 ರ ಫೆ.11ರಂದು ಉತ್ತರಪ್ರದೇಶದ ವಾರಾ ಣಸಿ ಹೊರವಲಯದ ಮುಘಲ್ ಸರಾಯ್ ರೇಲ್ವೇ ನಿಲ್ದಾಣದ ಬಳಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಆ ಘಟನೆ ಜನಸಂಘದ ಕಾರ್ಯ ಕರ್ತರಿಗೆ ಭಾರೀ ಆಘಾತ ಉಂಟುಮಾಡಿತ್ತು. ವಾಜಪೇಯಿ ಅವರು ದಿಗ್ಭ್ರಮೆಗೊಂಡು ತಡೆಯಲಸಾಧ್ಯ ದುಃ ಖದಿಂದ ಅಳುತ್ತಿದ್ದರು. ಈ ದುರಂತದ ನಂತರ ವಾಜಪೇಯಿ ಅವರು ನಿರಂತರವಾಗಿ ಮೂರು ಹಾಡುಗಳನ್ನು ಕೇಳುತ್ತಿದ್ದರು. ಒಂದು 1955ರ ಸೀಮಾ ಚಲನಚಿತ್ರಕ್ಕಾಗಿ ಮನ್ನಾಡೇ ಹಾಡಿದ ತು ಪ್ಯಾರ್ ಕಾ ಸಾಗರ್ ಹೈ ಎಂಬ ಅಮರಗೀತೆ. ಇನ್ನೊಂದು 1962ರ ಬೀಸ್ ಸಾಲ್ ಬಾದ್ ಎಂಬ ಹಿಂದಿ ಚಲನಚಿತ್ರಕ್ಕಾಗಿ ಹೇಮಂತ್ ಕುಮಾರ್ ಹಾಡಿದ ಬೇಕರಾರ್ ಕರ್ಕೇ ಹಮ್ಮೇ, ಹ್ಯೂನ ಜಾಯೀಯೇ, ಆಪ್ ಕೋ ಹಮಾರಿ ಕಸಂ, ಲೌಟಾಯೀಯೇ ಮತ್ತು 1959ರ ಹಿಂದಿ ಚಲನಚಿತ್ರ ರಾಣಿ ರೂಪ್ ಮತಿಗಾಗಿ ಮುಖೇಶ್ ಹಾಡಿದ ಲೌಟ್ ಕೆ ಆ, ಲೌಟ್ ಕೆ ಆ, ಲೌಟ್ ಕೆ ಆಜಾ ಮೆರೇ ಪ್ರೀತ್, ತುಜೆ ಮೆರೆ ಗೀತ್ ಬುಲಾತೆ ಹೈ. ವಾಜಪೇಯಿ ಅವರು ಸಂಪೂರ್ಣವಾಗಿ ಹೃದಯದ ಆಳದಿಂದಲೇ ಭಾವನಾತ್ಮಕ ವ್ಯಕ್ತಿಯಾಗಿದ್ದರು. ಅವರು ಸಹಜ ವಾಗಿ ಮತ್ತು ಪ್ರಾಮಾಣಿಕವಾಗಿ ಮಾತನಾಡುತ್ತಿದ್ದರು. ಅವ ರನ್ನು ಅತಿ ಹತ್ತಿರದಿಂದ ನಾನು ಬಲ್ಲೆ ಎಂಬುದೇ ನನ್ನ ಹೆಮ್ಮೆಗೆ ಕಾರಣವಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ಅಮರ. *ಎಸ್.ಎ.ಹೇಮಂತ್, ಹವ್ಯಾಸಿ ಪತ್ರಕರ್ತ