Advertisement
ಸಂಸದೀಯ ನಡವಳಿಕೆಯನ್ನು ಚಾಚು ತಪ್ಪದೆ ಪಾಲಿಸಿ, ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲದೆ, ರಾಜಧರ್ಮವನ್ನು ಬದುಕಿನುದ್ದಕ್ಕೂ ಪಾಲಿಸಿದ ಅಟಲ್ ಬಿಹಾರಿ ವಾಜಪೇಯಿ ರಾಜಕಾರಣವೆಂಬ ಕಣಜಕ್ಕೆ ಅಮೃತದ ಬಳ್ಳಿ ನೆಟ್ಟವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಯನ್ನು ಒಡ ಲೊಳಗೆ ಬಿತ್ತಿಕೊಂಡ ವಾಜಪೇಯಿ ಸಾರ್ವಜನಿಕ ಜೀವನದಲ್ಲಿ ದೃಢ ಹೆಜ್ಜೆ ಇಟ್ಟವರು. ಕಾವ್ಯಮಯ ವಾದ ಭಾಷೆ, ಪ್ರಾಸಬದ್ಧ ಮಾತು, ಚಾಟಿಯೇಟಿನಂತಹ ನುಡಿ, ನೆಲದ ಮಣ್ಣಿನ ಸೊಗಡು ಎದುರಾಳಿಗಳಿಗೆ ಚುಚ್ಚಿದರೂ ಬೆಚ್ಚನೆ ಅನುಭವ ಕೊಡುವ ಅರ್ಥಗರ್ಭಿತ ಹೃದಯ ಮುಟ್ಟುವ ವಾಕ್ಯ ಅಟಲ್‌ಜೀಯವರಿಗೆ ಕರಗತ.
1996ರಲ್ಲಿ ಪ್ರಥಮ ಬಾರಿಗೆ ಅಟಲ್ ಬಿಹಾರಿ ವಾಜಪೇಯಿ ಎಂಬ ಕವಿ ಹೃದ ಯದ ಕನಸುಗಾರ ಭಾರತದ ಪ್ರಧಾನಿ ಯಾಗುತ್ತಾರೆ. ಆದರೆ ಬಹುಮತದ ಕೊರತೆಯಿಂದ ಕೇವಲ 13 ದಿನಗಳ ಕಾಲದಲ್ಲೇ ಪ್ರಧಾನಿ ಹುದ್ದೆಯನ್ನು ಅಟಲ್‌ಜೀ ತ್ಯಜಿಸುತ್ತಾರೆ. 1998ರಲ್ಲಿ ಎರಡನೇ ಬಾರಿ ಪ್ರಧಾನಿ ಪಟ್ಟ ಅಟಲ್‌ಜೀಗೆ ಒಲಿಯುತ್ತದೆ. 13 ತಿಂಗಳುಗಳ ಕಾಲ ಅಧಿಕಾರ ನಡೆಸಿದ ಅಜಾತಶತ್ರು ಅಟಲ್‌ಜೀ 1 ಮತದ ಅಂತರದಲ್ಲಿ ಬಹುಮತವನ್ನು ಕಳೆದುಕೊಂಡು ಪ್ರಧಾನಿ ಹುದ್ದೆಯಿಂದ ನಿರ್ಗಮಿ ಸುತ್ತಾರೆ. ಅವರ ವಿದಾಯ ಭಾಷಣದಲ್ಲಿ ವಾಜಪೇಯಿ ಅವರು, “ಭಾರತದ ರಾಜಕಾರಣದ ಮಾರುಕಟ್ಟೆಯಲ್ಲಿ ನೂರಾರು ಮತಗಳು ಮಾರಾಟಕ್ಕೆ ಸಿದ್ಧವಾಗಿ ನಿಂತಿವೆ. ಆದರೆ ಅಧಿಕಾರ ಉಳಿಸಿ ಕೊಳ್ಳುವುದಕ್ಕೋಸ್ಕರ ನನ್ನ ಎಡಗಣ್ಣಿ ನಿಂದಲೂ ಅಕ್ರಮ ಮತಗಳನ್ನು ಆಸೆಯ ದೃಷ್ಟಿಯಲ್ಲಿ ನೋಡಲಾರೆ’ ಎಂದಿದ್ದರು.
Related Articles
Advertisement
ಭಾರತ ಕಂಡ ಶ್ರೇಷ್ಠ ಸಂಸದೀಯ ಪಟು, ಭಾರತದ ವೃತ್ತಿ ರಾಜಕಾರ ಣವನ್ನು ವ್ರತದ ರಾಜಕಾರಣವಾಗಿ ಪರಿವರ್ತಿ ಸಿದ, ನುಡಿದಂತೆ ನಡೆದ ಮತ್ತು ಜಾತಿ, ಧರ್ಮ, ವರ್ಗವನ್ನು ಮೀರಿ ಹಿಂದುತ್ವದ ವಿಚಾರಧಾರೆ ಯೊಂದಿಗೆ ಬೆಳೆದರೂ ದೇಶಕ್ಕಾಗಿ ದುಡಿ ಯುತ್ತಿರುವ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ. ಕಾರ್ಗಿಲ್ ಯುದ್ಧ ದಲ್ಲಿ ಕಾಲು ಕೆದರಿ ಬಂದ ಪಾಕಿಸ್ಥಾನಕ್ಕೆ ಬುದ್ಧಿ ಕಲಿಸುವಾಗ ಅಡ್ಡ ಬಂದ ಅಮೆರಿಕದಂತಹ ಬಲಾಡ್ಯ ರಾಷ್ಟ್ರಗಳು ರಾಜಿ ಸಂಧಾನಕ್ಕೆ ಕರೆದಾಗ ಭಾರತದ ಇಂಚು ನೆಲವೂ ಅನ್ಯರ ವಶವಾಗ ಬಿಡೆವು ಎಂಬ ತಾಕೀತಿ ನೊಂದಿಗೆ ಯುದ್ಧ ಗೆದ್ದ ಮಹಾನ್ ಮುತ್ಸದ್ದಿಯ 99ನೇ ಜನ್ಮದಿನವಿಂದು.ವಾಜಪೇಯಿ ಕನಸು ಕಂಡಿದ್ದ “ಸಮರ್ಥ ಭಾರತ, ಸಮೃದ್ಧ ಭಾರತ, ಶಕ್ತಿಶಾಲಿ ಭಾರತ, ಸ್ವಾಭಿಮಾನಿ ಭಾರತ’ ಈಗ ನನಸಾಗುತ್ತಿದ್ದು ಅವರು ಪ್ರತಿಪಾ ದಿಸುತ್ತಲೇ ಬಂದಿದ್ದ 370ನೇ ವಿಧಿ ರದ್ದು, ಪೌರತ್ವ ಕಾಯ್ದೆ ತಿದ್ದುಪಡಿ, ತ್ರಿವಳಿ ತಲಾಖ್ ರದ್ಧತಿ, ರಾಮ ಮಂದಿರ ನಿರ್ಮಾಣವೂ ಸೇರಿದಂತೆ ಅಟಲ್ ಆಶಯಗಳೆಲ್ಲವೂ ಒಂದೊಂದಾಗಿ ಕಾರ್ಯರೂಪಕ್ಕೆ ಬರುತ್ತಿರುವ ಇಂದಿನ ದಿನಗಳನ್ನು ಕಂಡು ಅಟಲ್ ಆತ್ಮ ಸಂಭ್ರಮಿಸಬಹುದೇನೋ. ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರು