Advertisement

ಸಹನೆ ಸೌಜನ್ಯದ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

01:53 AM Dec 25, 2020 | sudhir |

ದೇಶದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ವಾಜಪೇಯಿ ಅತ್ಯಂತ ಪ್ರಮುಖರು. ಪಕ್ಷ ಸಂಘ ಟನೆ, ಚುನಾವಣೆ ಸೇರಿದಂತೆ ರಾಷ್ಟ್ರಾದ್ಯಂತ ಸಂಚಾರ ಮಾಡುವಾಗ ಕರ್ನಾಟಕಕ್ಕೆ ಅನೇಕ ಬಾರಿ ಆಗಮಿಸಿ, ಹಲ ವು ಸಂದರ್ಭದಲ್ಲಿ ನನ್ನ ಮನೆಯಲ್ಲೂ ಉಳಿದುಕೊಂಡಿದ್ದರು. ಅವರು ಕರ್ನಾಟದಲ್ಲಿ ಮಾಡಿದ ಬಹುತೇಕ ಭಾಷಣಗಳ ಕನ್ನಡ ಅನುವಾದಕನಾಗಿ ಅವರ ಜತೆ ಇದ್ದ ಕಾಲ ನನಗೆ ಮರೆಯಲಾಗದ ಅಮೃತಘಳಿಗೆ.

Advertisement

ಅವಾಕ್ಕಾಗಿ ನಿಂತಿದ್ದ ಸಾಂಗ್ಲಿಯಾನ: ದೇಶದಲ್ಲಿ ತುರ್ತು ಪರಿಸ್ಥಿತಿ ಬಳಿಕ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು. ವಿದೇಶಾಂಗ ಸಚಿವರಾಗಿದ್ದ ಅಟಲ್‌ ಜೀ ಕರ್ನಾಟಕಕ್ಕೆ ಆಗಮಿಸಿದ್ದರು. ನಾನು ಬೆಂಗಳೂರಿಗೆ ಹೋಗಿ ಅವರನ್ನು ಭೇಟಿಯಾಗಿ, “ನಾಳೆ ನೀವು ಶಿವಮೊಗ್ಗಕ್ಕೆ ಬರುತ್ತೀರಾ ಅಲ್ಲವೆ?’ ಎಂದೆ. “ಖಂಡಿತ’ ಎಂದರು. ಅವರು ರೈಲಿನಲ್ಲಿ ಬರುವವರಿದ್ದರು. ಮರುದಿನ ನಾನು ಶಿವಮೊಗ್ಗ ರೈಲ್ವೇ ನಿಲ್ದಾಣದ ಬಳಿಯೇ ನನ್ನ ಕಾರು ನಿಲ್ಲಿಸಿದೆ. ಅದನ್ನು ಗಮನಿಸಿದ ಹಿರಿಯ ಪೊಲೀಸ್‌ ಅಧಿಕಾರಿ ಸಾಂಗ್ಲಿಯಾನ “ನಿಮ್ಮ ಕಾರನ್ನು ಇಲ್ಲೇಕೆ ನಿಲ್ಲಿಸಿ ದ್ದೀರಾ?’ ಎಂದರು. “ಅಟಲ್‌ ಜೀ ನಮ್ಮ ಮನೆಗೆ ಬರುತ್ತಾರೆ’ ಎಂದೆ. ಆಗ ಸಾಂಗ್ಲಿ ಯಾನಾ “ಸಚಿವರ ಜವಾಬ್ದಾರಿ ನಮ್ಮದು, ನಿಮ್ಮ ಕಾರನ್ನು ದೂರ ನಿಲ್ಲಿ ಸಿ’ ಎಂದರು.  ನಾನು ದೂರದಲ್ಲಿ ನಿಲ್ಲಿಸಿ ಬಂದೆ. ಅಟಲ್‌ ಜೀ ಅವರು ರೈಲಿನಲ್ಲಿ ಆಗಮಿಸಿದರು. ಎಲ್ಲರೊಂದಿಗೆ ಮಾತುಕತೆ ಮುಗಿಸಿದ ಬಳಿಕ “ಶಂಕರಮೂರ್ತಿ, ಕಾರೆಲ್ಲಿ?’ ಎಂದರು.

“ದೂರದಲ್ಲಿದೆ ತರುತ್ತೇನೆ’ ಎಂದೆ. “ಬೇಡ ನಾನೇ ಬರುತ್ತೇನೆ’ ಎನ್ನುತ್ತಾ ಅವರೇ ಬಂದು ಕಾರೊಳಗೆ ಕುಳಿತರು. ನಾನು ಚಾಲಕನಾಗಿ ಅವರನ್ನು ಮನೆಗೆ ಕರೆದುಕೊಂಡು ಹೊರಟೆ. “ಸಚಿವರ ಜವಾ ಬ್ದಾರಿ ನಮ್ಮದು’ ಎಂದ ಸಾಂಗ್ಲಿಯಾನ ಏನು ಮಾಡಲಾಗದೆ ಸುಮ್ಮನೇ ನೋಡುತ್ತಾ ನಿಂತಿದ್ದರು! ಅಟಲ್‌ಜೀ ಅಧಿಕಾರದಲ್ಲಿದ್ದಾಗಲೂ ಅಷ್ಟೇ ಸರಳವಾ ಇದ್ದವರು.
ಮರುದಿನ ಪತ್ರಕರ್ತರೆಲ್ಲ ನಮ್ಮ ಮನೆಯ ಬಳಿ ಬಂದಿದ್ದರು. ಆವತ್ತು ಶಿವಮೊಗ್ಗದಲ್ಲಿ ಪ್ರರ್ತಕರ್ತರ ಸಭೆಯೊಂದು ಆಯೋಜನೆಯಾಗಿತ್ತು. ಉಪಾಹಾರದ ಅನಂತರ ಅಟಲ್‌ ಜೀ “ಕಾರ್ಯಕ್ರಮ ಎಲ್ಲಿ ನಡೆಯುತ್ತಿದೆ?’ ಎಂದು ಎಲ್ಲ ರನ್ನೂ ಕೇಳಿದರು. ಕಾರ್ಯಕ್ರಮದ ಸ್ಥಳ ಸುಮಾರು 2 ಕಿ.ಮೀ ದೂರದಲ್ಲಿತ್ತು. ಆದರೂ ಅವರು “ಬನ್ನಿ ನಡೆದುಕೊಂಡೇ ಹೋಗೋಣ’ ಎಂದು ಹೆಜ್ಜೆ ಹಾಕಿಬಿಟ್ಟರು. ಎಲ್ಲ ಪತ್ರಕರ್ತರು ಅವರೊಂದಿಗೆ ನಡೆದೇ ಸ್ಥಳ ತಲುಪಿದರು.

ಒಂದು ಚಪಾತಿಯ ಕಥೆ: ಅಟಲ್‌ ಜೀ ಅವರು ಪಕ್ಷ ಸಂಘಟನೆ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗಾಗಿ ದಕ್ಷಿಣ ಭಾರತದಲ್ಲಿ ಪರ್ಯಟನೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದಿದ್ದಾಗ ನಮಗೆಲ್ಲಾ ಕಾರ್ಯಕರ್ತರ ಮನೆಗಳು/ಸಮಾವೇಶದಲ್ಲಿ ಊಟದ ವ್ಯವಸ್ಥೆ ಆಗುತ್ತಿತ್ತು. ಆದರೆ ಅದೊಂದು ದಿನ ಊಟದ ವ್ಯವಸ್ಥೆ ಆಗಲಿಲ್ಲ. ನಾವು ಹಾಗೆಯೇ ಕಾರಿನಲ್ಲಿ ಹೊರಟೆವು. ನನಗೆ ತಿಳಿದಿತ್ತು. ಅಟಲ್‌ ಅವರಿಗೆ ಹೆಚ್ಚು ಹೊತ್ತು ಹಸಿವೆ ತಾಳಲು ಆಗುವುದಿಲ್ಲ ಎಂದು. ಕಾರಿನಲ್ಲಿ ಹೋಗುವಾಗ ವಿದ್ಯಾರ್ಥಿನಿಲಯವೊಂದು ಕಾಣಿಸಿತು. ನಾನು ಕಾರು ನಿಲ್ಲಿಸಿ ಅಲ್ಲಿಗೆ ಹೋಗಿ, “ಇಲ್ಲಿ ತಿನ್ನಲು ಏನಾದರೂ ಸಿಗುತ್ತಾ?’ ಎಂದು ವಿಚಾರಿಸಿದೆ. ಅವರು “ಎಲ್ಲ ಖಾಲಿಯಾಗಿದೆ. ಒಂದು ಚಪಾತಿ ಮಾತ್ರ ಉಳಿದಿದೆ’ ಎಂದರು. ಅದನ್ನೇ ಪೇಪರ್‌ನಲ್ಲಿ ಕಟ್ಟಿಸಿಕೊಂಡು ಬಂದು ಅಟಲ್‌ ಜೀಗೆ ನೀಡಿದೆ. ಅವರು ಚಪಾತಿ ಚೂರನ್ನು ಬಾಯಿಗೆ ಹಾಕಿಕೊಂಡು “ನಿಮ್ಮದು ಊಟ ಆಯಿತಾ?’ ಎಂದರು. ನಾನು ಮುಜುಗರದಿಂದ “ಇನ್ನೂ ಇಲ್ಲ’ ಎಂದೆ. ಆಗ ಅವರಂದರು-“ನಾನು ಈ ಬದಿಯಿಂದ ಚಪಾತಿ ತಿನ್ನುತ್ತೇನೆ. ನೀವು ಮತ್ತೂಂದು ಬದಿಯಿಂದ ತಿನ್ನಿ’. ಕಾರಿನಲ್ಲೇ ಕುಳಿತು ಚಪಾತಿ ತಿಂದು ನೀರು ಕುಡಿದೆವು.

ನ ದೈನ್ಯಂ, ನ ಪಲಾಯನಂ
1984ರಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿತ್ತು. ಚುನಾವಣೆಯಲ್ಲಿ ವಾಜಪೇಯಿ ಅವರೂ ಪರಾಜಿತರಾಗಿದ್ದರು. ಈ ಸುದ್ದಿಯನ್ನು ರೇಡಿಯೋದಲ್ಲಿ ಆಲಿಸಿದ ಭದ್ರಾವತಿ ಸಮೀಪದ ಗ್ರಾಮ ವೊಂದರ ಎಸ್ಸಿ ಸಮುದಾಯದ ಲಕ್ಷ್ಮೀನಾರಾಯಣ (15) ಎಂಬ ಬಿಜೆಪಿ ಕಾರ್ಯಕರ್ತ “ವಾಜಪೇಯಿ ಅವರನ್ನು ಸೋಲಿಸಿದ ಈ ಭೂಮಿಯ ಮೇಲೆ ಇರಲು ನನಗೆ ಇಷ್ಟವಿಲ್ಲ’ ಎಂದು ಚೀಟಿ ಯೊಂದನ್ನು ಬರೆದಿಟ್ಟು ನೇಣಿಗೆ ಶರಣಾದ. ಮಾಹಿತಿ ತಿಳಿದ ನಾನು ಸ್ಥಳಕ್ಕೆ ಹೋದೆ. ಬಳಿಕ ಈ ವಿಷಯವನ್ನು ಟ್ರಂಕ್‌ಕಾಲ್‌ ಮೂಲಕ ವಾಜಪೇಯಿಯವರಿಗೆ ತಿಳಿಸಿದೆ. ಘಟನೆಯ ಪೂರ್ಣ ಮಾಹಿತಿ ಪಡೆದ ಅವರು, “ಈಗ ಸಮಯವಾಗಿದೆ. ನಾಳೆಯೇ ಹೊರಟು ಶಿವಮೊಗ್ಗಕ್ಕೆ ಬರುತ್ತೇನೆ. ಆ ಹುಡುಗನ ಮನೆಗೆ ಕರೆದುಕೊಂಡು ಹೋಗುವೆಯಾ?’ ಎಂದರು. ಧಾರಾಳವಾಗಿ ಎಂದೆ. ನಾನು, ಅಟಲ್‌ಜೀ ಮರು ದಿನ ಸಂಜೆ ವೇಳೆಗೆ ಮೃತ ಕಾರ್ಯಕರ್ತನ ಮನೆಗೆ ಹೋದೆವು. ಲಕ್ಷ್ಮೀನಾರಾಯಣನ ತಂದೆ, ತಾಯಿಗೆ ಅವರು ಹಿಂದಿಯಲ್ಲಿ “ನಮ್ಮ ಪಕ್ಷ ನಿಮ್ಮ ಜತೆಗಿದೆ’ ಎಂದು ಹೇಳಿದರು, ನಾನು ಕನ್ನಡೀಕರಿಸಿದೆ. ಮರುದಿನ ಬೆಂಗಳೂರಿಗೆ ಹೊರಟೆವು. ಬೆಂಗಳೂರಿನ ಗಾಯನ ಸಮಾಜದಲ್ಲಿ ಬಿಜೆಪಿಯ ಕಾರ್ಯಕರ್ತರೆಲ್ಲ “ಅಟಲ್‌ ಜೀ ನೀವೇ ಚುನಾವಣೆಯಲ್ಲಿ ಪರಾಜಿತರಾದರೆ ನಮ್ಮ ಪಾಡೇನು?’ ಎಂದು ಪ್ರಶ್ನಿಸಿ ದ ರು. ಎಲ್ಲರ ಮಾತನ್ನು ಸಮಾಧಾನದಿಂದ ಕೇಳಿದ ಬಳಿಕ ಅವರು ಆಡಿದ ಮಾತು ಈಗಲೂ ನಮ್ಮ ಹೃದಯಲ್ಲಿ ಹಾಗೆಯೇ ಉಳಿದಿದೆ. “ನ ದೈನ್ಯಂ, ನ ಪಲಾಯನಂ- ನನಗೆ ಯಾರ ದೈನ್ಯತೆಯ ಮಾತುಗಳೂ ಬೇಡ, ನಾನು ಯಾವುದೇ ಕಾರಣಕ್ಕೂ ಪಲಾಯನ ಮಾಡುವುದಿಲ್ಲ. ನಾನು ಮಾತು ಕೊಡುತ್ತೇನೆ. ಭಾಜಪಾವನ್ನು ಕಟ್ಟಿ ಮತ್ತೆ ಅಧಿಕಾರಕ್ಕೆ ತಂದೇ ತರುತ್ತೇನೆ’. ಅದಕ್ಕೆ ಸರಿ ಯಾ ಗಿ 12 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿತು!

Advertisement

ಲಕ್ಷ್ಮೀನಾರಾಯಣ್‌ ಕೆ ಪಿತಾ ಕೈಸೇ ಹೇ?:
1996ರಲ್ಲಿ 13 ದಿನ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಬಳಿಕ ಮತ್ತೂಮ್ಮೆ ಭಾರತದ ಪ್ರಧಾನಿಯಾದರು. ಅವರನ್ನು ಭೇಟಿ ಮಾಡಲು ಹೋಗಿದ್ದೆ. ಆಗ ಅವರು ಕೇಳಿದ ಪ್ರಶ್ನೆ ಯಿಂದ ಅವಾಕ್ಕಾಗಿ ನಿಂತೆ. ಅವರು ಕೇಳಿದ್ದಿಷ್ಟೆ- “ಶಂಕರ್‌ ಮೂರ್ತಿಜೀ ಲಕ್ಷ್ಮೀನಾರಾಯಣ್‌ ಕೆ ಪಿತಾ ಕೈಸೇ ಹೇ?’ (ಲಕ್ಷ್ಮೀನಾರಾಯಣನ ತಂದೆ ಹೇಗಿದ್ದಾರೆ?) ನಾನು ಕೆಲವು ಕ್ಷಣ ಸುಮ್ಮನಿದ್ದದ್ದನ್ನು ನೋಡಿ ಮತ್ತೆ ಅದೇ ಪ್ರಶ್ನೆ ಕೇಳಿದರು. ನಾನು ಪಕ್ಷದ ವತಿ ಯಿಂದ ಆ ಕುಟುಂಬ ಕ್ಕೆ ಆರ್ಥಿಕ ನೆರವು ನೀಡಿದ್ದು,  ಆ ಹುಡು ಗ ನ ತಂಗಿಯರಿಗೆ ಶೈಕ್ಷಣಿಕ ನೆರವು ನೀಡಿದ್ದನ್ನು ವಿವರಿಸಿದೆ. “ಆ ಲಕ್ಷ್ಮೀನಾರಾಯಣರಂಥವರನ್ನು ಮರೆತರೆ ನಾವು ದ್ರೋಹ ಬಗೆದಂತೆ ಆಗುತ್ತದೆ’ ಎಂದರು. ಇಂಥ ಗುಣ ಗ ಳಿಂದಲೇ ಅಲ್ಲ ವೇ ಅಟಲ್‌ ಅವರು ಅಜಾ ತ ಶತ್ರು ಎನಿ ಸಿ ಕೊಂಡದ್ದು?

– ಡಿ.ಎಚ್‌. ಶಂಕರಮೂರ್ತಿ, ಬಿಜೆಪಿ ಹಿರಿಯ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next