Advertisement
ಮಾಹಿತಿ ತಂತ್ರಜ್ಞಾನಕ್ಕೆ ನ್ಯಾಯಾಲಯವೂ ಈ ರೀತಿ ಮುಕ್ತವಾಗಿ ತೆರದುಕೊಂಡದ್ದು ಮತ್ತು ಸಕಾಲದಲ್ಲಿ ಸಕಲ ಮಾಹಿತಿಗಳು ಏಕತ್ರ ಲಭ್ಯವಾಗುವಂತೆ ಮಾಡಿದ್ದು ನ್ಯಾಯಾಲಯಗಳ ಕಾರ್ಯವ್ಯಾಪ್ತಿ, ವಿಸ್ತಾರ ಮತ್ತು ಸೇವಾ ಮನೋಭಾವವನ್ನು ಪ್ರದರ್ಶಿಸುತ್ತಿದೆ.
ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಸ್ಪರ್ಶì ಪರದೆಯ ಕಿಯೋಸ್ಕ್ ಕಳೆದ ತಿಂಗಳು ಬಂದು ಕಾರ್ಯ ನಿರ್ವಹಿಸಲು ಆರಂಭಿಸಿದೆ. ಇದಕ್ಕೂ ಮುನ್ನ 3 ಸಾಧಾರಣ ಕಿಯೋಸ್ಕ್ಗಳು ಸೇವೆ ನೀಡುತ್ತಿದ್ದವು ಎಂದು ಉಡುಪಿ ಜಿಲ್ಲಾ ನ್ಯಾಯಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಎ. ವಿಜಯಲಕ್ಷ್ಮೀ ಅವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
Related Articles
Advertisement
ಇಂಗ್ಲಿಷ್ ಭಾಷೆಗೆ ಈ ವೈಬ್ಸೈಟ್ತೀವ್ರವಾಗಿ ಸ್ಪಂದಿಸುತ್ತದೆ. ಕನ್ನಡ ಭಾಷೆಯಲ್ಲೂ ಮಾಹಿತಿ ಪಡೆಯಬಹುದಾಗಿದ್ದು ತುಸು ವಿಳಂಬವಾಗುತ್ತಿದೆ. ಸದ್ಯದಲ್ಲಿಯೇ ಈ ಸಮಸ್ಯೆಯೂ ಪರಿಹಾರವಾಗಲಿದೆ ಎಂದು ತಂತ್ರಜ್ಞರು ಮಾಹಿತಿ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಲೋಕಕ್ಕೆ ವಿಶೇಷವಾಗಿ ತೆರೆದುಕೊಂಡು ನ್ಯಾಯ ಬಯಸಿ ಬಂದವರಿಗೆ ಸಕಾಲದಲ್ಲಿ ಸೂಕ್ತ ಮಾಹಿತಿ ನೀಡುತ್ತಿರುವ ಈ ಕಿಯಾಸ್ಕ್ ನ್ಯಾಯಾಂಗದ ವಿಶಿಷ್ಟ ಕೊಡುಗೆಯಾಗಿದೆ. ನಿತ್ಯ ಅಪ್‌ಡೇಟ್
ನ್ಯಾಯಾಧೀಶರು ಸಂಜೆ ತಮ್ಮ ನಿವಾಸಕ್ಕೆ ತೆರಳುವ ಮುನ್ನ ಎಲ್ಲ ನ್ಯಾಯಾಲಯಾಗಳಲ್ಲಿ ಜರಗಿದ ಖಟ್ಲೆಗಳ ಪೂರ್ಣ ಮಾಹಿತಿ ಈ ಕಿಯೋಸ್ಕ್ನಲ್ಲಿ ಅಪ್‌ಡೇಟ್ ಆಗುತ್ತದೆ. ಹಾಗಾಗಿ ದಾವೆ ಹೂಡಿದವರು ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣದ ಸಂಖ್ಯೆಯನ್ನು ನಮೂಸಿದರೆ ಸಾಕು ಸಕಲ ಮಾಹಿತಿಯೂ ಲಭ್ಯವಾಗುತ್ತದೆ. ಲ್ಯಾನ್ ಸಂಪರ್ಕ
ಉಡುಪಿ ಜಿಲ್ಲಾ ನ್ಯಾಯಾಲಯ ವ್ಯಾಪ್ತಿಗೆ ಬರುವ ನ್ಯಾಯಾಲಯಗಳಲ್ಲಿ ಈ ಕಿಯೋಸ್ಕ್ ಲ್ಯಾನ್ ಮೂಲಕ ಸಂಪರ್ಕವನ್ನು ಹೊಂದಿದೆ. ಇದಕ್ಕೆ ಇಂಟರ್‌ನೆಟ್ ಆವಶ್ಯಕತೆ ಇಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆ 5.45ರ ವರೆಗೆ ಸಾರ್ವಜನಿಕರು ಮತ್ತು ವಕೀಲರು ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ವೈರಸ್‌ಗಳ ದಾಳಿಯನ್ನು ಎದುರಿಸಲು ಇದು ಲೀನಕ್ಸ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕಿಯೋಸ್ಕ್ಗಳಿಗೆ ಯುಪಿಎಸ್ ವ್ಯವಸ್ಥೆಯೂ ಇರುವುದರಿಂದ ಸಾರ್ವಜನಿಕರು ಯಾವುದೇ ತೊಂದರೆಗಳಿಲ್ಲದೆ ಮಾಹಿತಿಗಳನ್ನು ಪಡೆದುಕೊಳ್ಳ ಬಹುದಾಗಿದೆ ಎಂದು ಕಿಯೋಸ್ಕ್ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಐವನ್ ಮಾಹಿತಿ ನೀಡಿದ್ದಾರೆ. ಇಂಟರೆಟ್ಟಲ್ಲೂ ಲಭ್ಯ
ನ್ಯಾಯಾಲಯಗಳಿಗೆ ಬಾರಲು ಸಾಧ್ಯವಾಗದವರೂ ಇಂಟರ್‌ನೆಟ್‌ಮೂಲಕ ಇದೇ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. – ಆಸ್ಟ್ರೋ ಮೋಹನ್