Advertisement
ಗಂಗೊಳ್ಳಿಯ ಬಂದರಿನಲ್ಲಿ ಈಗ ಬೋಟುಗಳನ್ನು ಸಮುದ್ರದಿಂದ ದಡದತ್ತ ಎಳೆದು ತರಲಾಗುತ್ತಿದೆ. ಅಲ್ಲದೇ ಅದಕ್ಕೆ ಮಳೆ ನೀರು ಬೀಳದಂತೆ ಮತ್ತೆ ತಟ್ಟಿಯನ್ನು ಕಟ್ಟುವ ಕಾರ್ಯ ಕೂಡ ಭರದಿಂದ ಸಾಗಿದೆ. ಇನ್ನೆರಡು ತಿಂಗಳು ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿದ್ದು, ಮತ್ತೆ ಆಗಸ್ಟ್ ಮೊದಲ ವಾರದಲ್ಲಿ ಆರಂಭವಾಗುವ ಸಾಧ್ಯತೆಗಳಿವೆ.
Related Articles
Advertisement
ಹಲವು ಕಾರಣಗಳು
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕರಾವಳೆಯೆಲ್ಲೆಡೆ ಮೀನಿನ ಬರ ಆವರಿಸಿತ್ತು. ಅದರಲ್ಲೂ ಓಖೀ, ಗಜ, ಫನಿ, ಇನ್ನಿತರ ಚಂಡಮಾರುತ ಭೀತಿಯಿಂದ ಕೆಲ ಸಮಯ ಮೀನುಗಾರಿಕೆ ಸ್ಥಗಿತ, ಲೈಟ್ ಫಿಶಿಂಗ್ ಮೀನುಗಾರಿಕೆ ಗೊಂದಲ, ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರಿಕೆಗೆ ಹೊಡೆತ ಬಿದ್ದಿತ್ತು.
ಇನ್ನು ಕಳೆದ ವರ್ಷ ಕುಂದಾಪುರ ತಾಲೂಕಿನಲ್ಲಿ 37,458 ಲಕ್ಷ ರೂ. ಮೀನುಗಾರಿಕಾ ವಹಿವಾಟು ಆಗಿದ್ದರೆ, ಈ ಬಾರಿ 16,307 ಲಕ್ಷ ರೂ. ವಹಿವಾಟು ಆಗಿದೆ.
ಈ ಪ್ರಮಾಣದ ಇಳಿಕೆಗೆ ಪ್ರಮುಖ ಕಾರಣ ಹಿಂದಿನ ವರ್ಷ ಇಲ್ಲಿನ ಮೀನುಗಾರರು ಇಲ್ಲಿನ ಬಂದರುಗಳಲ್ಲಿ ಮೀನು ಇಳಿಸುತ್ತಿದ್ದರು. ಆದರೆ ಈ ಬಾರಿ ಮಲ್ಪೆ, ಭಟ್ಕಳ ಸಹಿತ ಎಲ್ಲ ಕಡೆಗಳಲ್ಲಿ ಮೀನು ಬೋಟು, ದೋಣಿಗಳಿಂದ ಇಳಿಸಿರುವುದರಿಂದ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.