ಕೊಲಂಬೋ: ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟು ಹಾಗೂ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 12 ಮಂದಿ ಗಾಯಾಳುಗಳಾಗಿದ್ದಾರೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಹಾಲಿ ಬಿಕ್ಕಟ್ಟು ಶುರುವಾದ ಬಳಿಕ ನಡೆ ಯುತ್ತಿರುವ ಪ್ರತಿಭಟನೆಯಲ್ಲಿ ಮೊದಲ ಜೀವ ಹಾನಿ ಇದಾಗಿದೆ.
ದೇಶದ ನೈಋತ್ಯ ಭಾಗದ ರಾಂಬುಕ್ಕನ ಎಂಬಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಜನರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭ ಟನೆಯ ಭಾಗವಾಗಿ ರೈಲು ಸಂಚಾರಕ್ಕೂ ಅಡ್ಡಿಪಡಿಸಲಾಗಿತ್ತು. ಪ್ರತಿ ಭಟನಕಾರರು ವಾಹನಗಳಿಗೆ ಬೆಂಕಿ ಹಚ್ಚಲು ಮುಂದಾ ದಾಗ ಪೊಲೀಸರು ಆಶ್ರುವಾಯು ಹಾರಿಸಿ, ಅವರನ್ನು ಚದುರಿಸಲು ಪ್ರಯತ್ನಿಸಿದ್ದಾರೆ. ಆದರೆ ಅದಕ್ಕೂ ಅವರು ಬಗ್ಗದಿದ್ದಾಗ ಗುಂಡು ಹಾರಿಸಿದ್ದಾರೆ.
ಅಧಿಕಾರಕ್ಕೆ ಕತ್ತರಿ?: ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿರುವ ಶ್ರೀಲಂಕೆಯಲ್ಲಿ ಅಧ್ಯಕ್ಷರ ಅಧಿಕಾರ ಕಡಿಮೆಗೊಳಿಸುವ ಬಗ್ಗೆ ಪ್ರಸ್ತಾವ ಮಾಡಲಾಗಿದೆ. ಜತೆಗೆ ಸಂಸತ್‌ಗೆ ಹೆಚ್ಚಿನ ಅಧಿಕಾರ ನೀಡುವ ದ್ವೀಪ ರಾಷ್ಟ್ರದ ಸಂವಿಧಾನ ತಿದ್ದುಪಡಿಯನ್ನು ಮತ್ತೆ ಅನುಷ್ಠಾನಗೊಳಿಸುವುದರ ಬಗ್ಗೆ ಚರ್ಚೆಗಳು ನಡೆದಿವೆ. ಅಧ್ಯಕ್ಷ ಗೋಟ ಬಯ ರಾಜಪಕ್ಸ ಅವರ ಅಣ್ಣ, ಪ್ರಧಾನಿ ಮಹಿಂದ ರಾಜಪಕ್ಸ ಈ ಬಗ್ಗೆ ಸಲಹೆ ಯನ್ನು ಮುಂದಿಟ್ಟಿದ್ದಾರೆ.
ಇನ್ನೊಂದೆಡೆ ಭಾರತ ಶ್ರೀಲಂಕೆಗೆ ನೆರವು ನೀಡುತ್ತಿರುವು ದಕ್ಕೆ ಐಎಂಎಫ್ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದೆ.