ದಲ್ಲಾಸ್: ಅಮೆರಿಕದ ಟೆಕ್ಸಾಸ್‌ನ ದಟ್ಟ ಹಿಮಾವೃತ ರಸ್ತೆಯಲ್ಲಿ 133ಕ್ಕೂ ಅಧಿಕ ವಾಹನಗಳು ಪರಸ್ಪರ ಡಿಕ್ಕಿ ಹೊಡೆದು, ಸರಣಿ ಅಪಘಾತವಾದ ಪರಿಣಾಮ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ. 65ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಟೆಕ್ಸಾಸ್‌ನ ಫೋರ್ಟ್ವರ್ತ್‌ನಲ್ಲಿರುವ ಇಂಟರ್‌ಸ್ಟೇಟ್-35 ಎಕ್ಸ್‌ಪ್ರಸ್ ಲೇನ್‌ನಲ್ಲಿ ಹಿಮಮಳೆ ಕಾರಣದಿಂದಾಗಿ ಈ ದುರಂತ ಸಂಭವಿಸಿದೆ.
ಭಾರೀ ವೇಗದಲ್ಲಿದ್ದ ವಾಹನಗಳು ಪರಸ್ಪರ ಡಿಕ್ಕಿಯಾಗಿದ್ದರಿಂದಾಗಿ, 12ಕ್ಕೂ ಅಧಿಕ ಟ್ರಕ್- ಕಾರುಗಳು ನಜ್ಜುಗಜ್ಜಾಗಿ ಒಂದರ ಮೇಲೊಂದು ಕುಳಿತಿವೆ. 25 ಅಗ್ನಿಶಾಮಕ ವಾಹನಗಳು, ಬೆಂಕಿ ನಂದಿಸುವ ಮತ್ತು ವಾಹನ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ.
ಇದನ್ನೂ ಓದಿ:ಎಲ್ಲರಿಗೂ ನ್ಯಾಯ ಒದಗಿಸೋದು ನನ್ನ ಕರ್ತವ್ಯ: ಟೀಕಿಸುವವರಿಗೆ ಬಜೆಟ್ ಮೂಲಕ ಉತ್ತರಿಸುವೆ: BSY
ರಸ್ತೆ ಪಕ್ಕದ ವಿದ್ಯುತ್ ಕಂಬಗಳಿಗೆ ವಾಹನಗಳು ಡಿಕ್ಕಿ ಹೊಡೆದಿದ್ದು, ಕೆಂಟುಕಿ ಮತ್ತು ಪಶ್ಚಿಮ ವರ್ಜೀನಿಯಾದ 1,25,000ಕ್ಕೂ ಅಧಿಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.