Advertisement

ಹಿಮಾಚಲ ಪ್ರದೇಶ: ವಸತಿ ಕಟ್ಟಡದಲ್ಲಿ ಭೀಕರ ಅಗ್ನಿ ಅನಹುತ, 5 ಬಲಿ

11:11 AM Jul 23, 2018 | udayavani editorial |

ಮಂಡಿ, ಹಿಮಾಚಲ ಪ್ರದೇಶ : ಇಲ್ಲಿನ ವಸತಿ ಕಟ್ಟಡದಲ್ಲಿ ಇಂದು ಸೋಮವಾರ ಬೆಳಗ್ಗೆ ಭೀಕರ ಅಗ್ನಿ ಅನಾಹುತ ಸಂಭವಿಸಿ ಐವರು ಮೃತಪಟ್ಟ ದಾರುಣ ಘಟನೆ ನಡೆದಿದೆ.

Advertisement

ಕಟ್ಟಡದೊಳಗೆ ಇನ್ನೂ ಅನೇಕರು ಸಿಕ್ಕಿ ಹಾಕಿಕೊಂಡಿರುವುದಾಗಿ ಶಂಕಿಸಲಾಗಿದ್ದು ಅವರನ್ನು ಪಾರು ಗೊಳಿಸುವ ಕಾರ್ಯಾಚರಣೆ ಇದೀಗ ಜಾರಿಯಲ್ಲಿದೆ ಎಂದು ವರದಿಗಳು ತಿಳಿಸಿವೆ. 

ಮಂಡಿ ನಗರದ ನೇರ್‌ ಚೌಕ್‌ ಪ್ರದೇಶದಲ್ಲಿನ ವಸತಿ ಕಟ್ಟಡದಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತು. ನೋಡ ನೋಡುತ್ತಿದ್ದಂತೆಯೇ ಅದು ಭೀಕರ ಸ್ವರೂಪವನ್ನು ತಳೆಯಿತು. ಪರಿಣಾಮವಾಗಿ ಐವರನ್ನು ಅದು ಬಲಿ ಪಡೆಯಿತು. ಸುದ್ದಿ ತಿಳಿದಾಕ್ಷಣವೇ ಅಗ್ನಿ ಶಾಮಕಗಳನ್ನು ಸ್ಥಳಕ್ಕೆ ರವಾನಿಸಲಾಯಿತು ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ರಾಜೀವ್‌ ಕುಮಾರ್‌ ತಿಳಿಸಿದರು. 

ಕಟ್ಟಡದೊಳಗೆ ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡಿರುವುದನ್ನು ಶಂಕಿಸಲಾಗಿದೆ. ಇದರಿಂದಾಗಿಯೇ ಈ ಭೀಕರ್‌ ಅಗ್ನಿ ಅನಾಹುತ ಸಂಭವಿಸಿರಬೇಕೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next