Advertisement
ಮಂಡಿ-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಇನ್ನೂ 32 ಮಂದಿ ನಾಪತ್ತೆಯಾಗಿದ್ದು, ಅವರೂ ಬದುಕಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ 1.15ರ ವೇಳೆಗೆ ಬಸ್‌ಗಳು ಟೀ ಬ್ರೇಕ್‌ಗೆಂದು ನಿಲ್ಲಿಸಿದ್ದಾಗ, ಭಾರೀ ಮಳೆಯೊಂದಿಗೆ ಭೂಕುಸಿತವೂ ಸಂಭವಿಸಿದ್ದು, ವಾಹನಗಳು ಸುಮಾರು 800 ಮೀ. ದೂರದವೆರೆಗೆ ಕೊಚ್ಚಿಕೊಂಡು ಹೋಗಿ, ಮಣ್ಣಿನಲ್ಲಿ ಹೂತುಹೋಗಿವೆ. 8 ಮಂದಿಯ ಮೃತದೇಹ ಗಳನ್ನು ಹೊರತೆಗೆಯಲಾಗಿದ್ದು, ಉಳಿದ 32 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಘಟನೆಯ ತೀವ್ರತೆ ಎಷ್ಟಿತ್ತೆಂದರೆ, ಬಸ್ಸೂ ಸೇರಿ ದಂತೆ ವಾಹನಗಳು ನೆಲದಲ್ಲಿ ಸಂಪೂರ್ಣ ವಾಗಿ ಹೂತುಹೋಗಿದ್ದು, ಅವುಗಳ ಅವಶೇಷ ಕೂಡ ಪೂರ್ಣವಾಗಿ ಕಾಣಸಿಗುತ್ತಿಲ್ಲ.
45 ಮಂದಿ ಸಾವು: 1988- ಶಿಮ್ಲಾ ಜಿಲ್ಲೆಯ ಮತಿಯಾ ನಾದಲ್ಲಿ ಭೂಕುಸಿತ ದಿಂದ ನೆಲಸಮಾಧಿ ಯಾದ ಬಸ್
42 ಮಂದಿ ಸಾವು: 1994- ಕುಲ್ಲು ಜಿಲ್ಲೆ ಯಲ್ಲಿ ಇಂಥದ್ದೇ ಮತ್ತೂಂದು ದುರಂತ ದಲ್ಲಿ ಪ್ರಯಾಣಿಕರ ಸಾವು